ಅಂಗಗಳು ಕೃಶವಾಗುವುದು

Verses

Holy Kural #1231
ನಮ್ಮನ್ನು ಈ ವಿರಹ ದುಃಖವು ಬಾಧಿಸುವಂತೆ, ಬಹು ದೂರ ಅಗಲಿ ಹೋದ ನಿನ್ನ ಪ್ರಿಯತಮಯನ್ನು ನೆನೆದು ಅತ್ತು
ಸೊರಗಿರುವ ನಿನ್ನ ಕಣ್ಣುಗಳು; ಸೌಂದರ್ಯವನ್ನು ಕಳೆದುಕೊಂಡು, ನರುಗುಂಪಿನ ಹೊಗಳನ್ನು ಕಂಡು ನಾಚಿಗೊಳ್ಳುತ್ತಿವೆ.

Tamil Transliteration
Sirumai Namakkozhiyach Chetchendraar Ulli
Narumalar Naanina Kan.

Explanations
Holy Kural #1232
ಹಳದಿ ಬಣ್ಣವನ್ನು ತಾಳಿ ಕಂಬಿನ ಸುರಿಸುವ ನಿನ್ನ ಕಣ್ಣುಗಳು, ನಾವು ಕೋರಿದ ಪ್ರಿಯತಮನು ಪ್ರೀತಿ ತೋರದ ನಿಲುವನ್ನು
ಸಾರಿ ಹೇಳುವಂತಿವೆ.

Tamil Transliteration
Nayandhavar Nalkaamai Solluva Polum
Pasandhu Panivaarum Kan.

Explanations
Holy Kural #1233
ವಿವಾಹ ಬಂಧನದಿಂದ ಕೂಡಿದ್ದ ದಿನಗಳಲ್ಲಿ ಉಬ್ಬಿ ಪುಷ್ಪವಾಗಿದ್ದ ನಿನ್ನ ತೋಳುಗಳು, ಈಗ ಪ್ರಿಯತಮನ ವಿರಹವನ್ನು
ಸೂಚಿಸುತ್ತಿವೆಯೇ ಎಂಬಂತೆಕೃಶಗೊಂಡಿವೆ.

Tamil Transliteration
Thanandhamai Saala Arivippa Polum
Manandhanaal Veengiya Thol.

Explanations
Holy Kural #1234
ಬಾಳ ಸಂಗಾತಿಯಾಗಿದ್ದ ಇನಿಯನ ಅಗಲಿಕೆಯಿಂದ ಹಿಂದಿನ ಕಾಂತಿಯನ್ನು ಕಳೆದುಕೊಂಡು ಬಾಡಿದ ನಿನ್ನ ತೋಳುಗಳು,
ಪುಷ್ಪವಾದ ಮಾಂಸಲ ಭಾಗವಿಲ್ಲದೆ ತೊಟ್ಟ ಚಿಮ್ಮದ ಬಳೆಗಳು ಸಡಿಲಗೊಂಡು ಜಾರುತ್ತಿವೆ!

Tamil Transliteration
Panaineengip Paindhoti Sorum Thunaineengith
Tholkavin Vaatiya Thol.

Explanations
Holy Kural #1235
ಬಳೆಗಳು ಸಡಿಲವಾಗಿ ಹಿಂದಿನ ಚೆಲುವಳಿದು ಬಾಡಿದ ನಿನ್ನ ತೋಳುಗಳು (ನಿನ್ನ ದುಃಖವನ್ನು ಗ್ರಹಿಸದೆ) ನಿರ್ದಯನಾದ
ಇನಿಯನ ಹೃದಯದ ಕಾಠಿಣ್ಯವನ್ನು ಸಾರಿ ಹೇಳುತ್ತಿವೆ.

Tamil Transliteration
Kotiyaar Kotumai Uraikkum Thotiyotu
Tholkavin Vaatiya Thol.

Explanations
Holy Kural #1236
ಬಳೆಗಳು ಸಡಿಲವಾಗುವಂತೆ ತೋಳುಗಳು ಕೃಶವಾದುದರಿಂದ, ನೀನು ನನ್ನ ಇನಿಯನನ್ನು ನಿರ್ದಯನೆಂದು ಹೇಳುವುದನ್ನು
ಕೇಳಿ ನಾನು ದುಃಖಪಡುತ್ತಿದ್ದೇನೆ.

Tamil Transliteration
Thotiyotu Tholnekizha Noval Avaraik
Kotiyar Enakkooral Nondhu.

Explanations
Holy Kural #1237
ಓ ನನ್ನ ಹೃದಯವೇ! ನಿರ್ದಯನಾದ ಇನಿಯನಿಗೆ ನನ್ನ ಕೃಶವಾದ ತೋಳುಗಳ ಗೋಳನ್ನು ಒರೆದು ಪುಣ್ಯವನ್ನು
ಕಟ್ಟಿಕೊಳ್ಳಲಾರೆಯಾ?

Tamil Transliteration
Paatu Perudhiyo Nenje Kotiyaarkken
Vaatudhot Poosal Uraiththu.

Explanations
Holy Kural #1238
ಅಪ್ಪಿಕೊಂಡ ನನ್ನ ಕೈಗಳನ್ನು ಸಡಿಲಿಸಿದೊಡನೆಯೇ ಚಿನ್ನದ ಬಳೆಗಳನ್ನು ತೊಟ್ಟ ಕಾಮಿನಿಯ ನೊಸಲು (ಅಲ್ಪ ವಿರಹವನ್ನೂ
ಸಹಿಸಲಾರದೆ) ವಿವರ್ಣವಾಯಿತು.

Tamil Transliteration
Muyangiya Kaikalai Ookkap Pasandhadhu
Paindhotip Pedhai Nudhal.

Explanations
Holy Kural #1239
ಆಲಿಂಗನದ ಎಡೆಯಲ್ಲಿ ತಣ್ಣೆಲರು ನುಸುಳಿ ಮ್ಬಂದೊಡನೆಯೇ (ಅದನ್ನು ಸಹಿಸಲಾರದೆ), ಕಾಮಿನಿಯ ನೀಲಮೇಘವನ್ನು
ಹೋಲುವ ಕಣ್ಣುಗಳು ವಿವರ್ಣವನ್ನು ತಾಳಿದುವು.

Tamil Transliteration
Muyakkitaith Thanvali Pozhap Pasapputra
Pedhai Perumazhaik Kan.

Explanations
Holy Kural #1240
ಕಾದಲೆಯ ಕಾಂತಿಯುಕ್ತವಾದ ನೊಸಲು ವಿವರ್ಣವಾದುದನ್ನು ಕಂಡು, ಅವಳ ಕಣ್ಣುಗಳ ವೈವರ್ಣ್ಯವೂ ದುಃಖವನ್ನು ತಾಳಿತ್ತಲ್ಲವೆ?

Tamil Transliteration
Kannin Pasappo Paruvaral Eydhindre
Onnudhal Seydhadhu Kantu.

Explanations
🡱