ಅತಿಥಿ ಸತ್ಕಾರ

Verses

Holy Kural : #81 #82 #83 #84 #85 #86 #87 #88 #89 #90
Holy Kural #81
ಮನೆಯಲ್ಲಿ ಇದ್ದು (ಸೊತ್ತುಗಳನ್ನೆಲ್ಲ) ಕಾಪಾಡಿ ಮನೆವಾರ್ತೆ ನಡೆಸುವುದೆಲ್ಲಾ ಅತಿಥಿಗಳನ್ನು ಉಪಚರಿಸ ಉಪಕಾರ ಮಾಡುವುದಕ್ಕಾಗಿಯೇ.

Tamil Transliteration
Irundhompi Ilvaazhva Thellaam Virundhompi
Velaanmai Seydhar Poruttu.

Explanations
Holy Kural #82
ಅತಿಥಿಯಾಗಿ ಬಂದವರು ಹೊರಗಿರುವಾರ ಅದು ಅಮೃತವಾದರೂ ತಾನೊಬ್ಬನೇ ಉಣ್ಣಲು ಬಯಸ ಬಾರದು.

Tamil Transliteration
Virundhu Puraththadhaath Thaanuntal Saavaa
Marundheninum Ventarpaar Randru.

Explanations
Holy Kural #83
(ತನ್ನ ಕಾಣಬರುವ) ಅತಿಥಿಯನ್ನು ಯಾವಾಗಲೂ ಉಪಚರಿಸುವವನ ಬಾಳ್ವೆ ಕಷ್ಟಗಳಿಂದ ಪಾಡುಪಟ್ಟು ಹಾಳಾಗುವುದಿಲ್ಲ.

Tamil Transliteration
Varuvirundhu Vaikalum Ompuvaan Vaazhkkai
Paruvandhu Paazhpatudhal Indru.

Explanations
Holy Kural #84
ಯೋಗ್ಯ ಅತಿಥಿಗಳನ್ನು ಮುಖವರಳಿಸಿಕೊಂಡು ಉಪಚರಿಸುವಾತನನ್ನು ಸಿರಿಮನವೊಲಿದು ಸೇರುವಳು.

Tamil Transliteration
Akanamarndhu Seyyaal Uraiyum Mukanamarndhu
Nalvirundhu Ompuvaan Il.

Explanations
Holy Kural #85
ಅತಿಥಿಗಳನ್ನುಪಚರಿಸಿ, ಉಣಬಡಿಸಿ ಮಿಕ್ಕುದನ್ನು ತಾನುಣ್ಣುವವಸ ಹೊಲಗಳಲ್ಲಿ ಬೀಜವನ್ನು ಬಿತ್ತಲೇಕೆ? (ಬಿತ್ತದೆಯೇ ತಾನಾಗಿ ಬೆಳೆಯುವುದು)

Tamil Transliteration
Viththum Italventum Kollo Virundhompi
Michchil Misaivaan Pulam.

Explanations
Holy Kural #86
ಬಂದ ಅತಿಥಿಗಳನ್ನು ಉಪಚರಿಸಿ, ಮತ್ತೆ ಬರುವ ಅತಿಥಿಗಳನ್ನು ಎದುರು ನೋಡುತ್ತಿರುವವನು, ಸ್ವರ್ಗಲೋಕದಲ್ಲಿರುವ ದೇವತೆಗಳಿಗೆ ಒಳ್ಳೆಯ ಅತಿಥಿಯಾಗುತ್ತಾನೆ.

Tamil Transliteration
Selvirundhu Ompi Varuvirundhu Paarththiruppaan
Nalvarundhu Vaanath Thavarkku.

Explanations
Holy Kural #87
ಅತಿಥಿಗಳನ್ನು ಆದರಿಸುವ ಯಜ್ಞದ ಫಲ ಇಷ್ಟು ಎಂದು ಅಳೆಯಲಳವಲ್ಲ. ಅತಿಥಿಗಳ ಯೋಗ್ಯತೆಯನ್ನನುಸರಿಸಿ ಅದು ಉಂಟಾಗುತ್ತದೆ.

Tamil Transliteration
Inaiththunaith Thenpadhon Rillai Virundhin
Thunaiththunai Velvip Payan.

Explanations
Holy Kural #88
ಅತಿಥಿಗಳನ್ನು ಆದರಿಸಿ, ಆ ಯಜ್ಞಫಲದಲ್ಲಿ ಪಾಲುಗೊಳ್ಳದವರು ತಾವು ಕಷ್ಟಪಟ್ಟು ಕಾಪಾಡಿಟ್ಟ ಸ್ವತ್ತುಗಳೆಲ್ಲ ತಮಗೆ ಅಧಾರವಾಗದೆ ನಿಷ್ಫಲವಾದುವೆ ಎಂದು (ಮುಂದೆ) ಪರಿತಾಪ ಪಡುವರು.

Tamil Transliteration
Parindhompip Patratrem Enpar Virundhompi
Velvi Thalaippataa Thaar.

Explanations
Holy Kural #89
ಅತಿಥಿಗಳನ್ನು ಆದರಿಸದಿರುವ ಮೂರ್ಖತನವು, ಸಿರಿಯಿದ್ದೂ ದಾರಿದ್ರ್ಯ ಅನುಭವಿಸಿದಂತೆ; ಅದು ಮೂರ್ಖರಲ್ಲಿ ಇರುತ್ತದೆ.

Tamil Transliteration
Utaimaiyul Inmai Virundhompal Ompaa
Matamai Matavaarkan Untu.

Explanations
Holy Kural #90
ಅನಿಚ್ಚ ಹೊ ಮೂಸಿದೊಡನೆ ಬಾಡುತ್ತದೆ. (ಅದೇ ರೀತಿ) ಮುಖವರಳಿಸದೆ ಬೇರೆಕಡೆಗೆ ತಿರುಗಿಸಿ ನೋಡಿದರೆ ಅತಿಥಿಯು ಬಾಡಿ ಹೋಗುತ್ತಾನೆ.

Tamil Transliteration
Moppak Kuzhaiyum Anichcham Mukandhirindhu
Nokkak Kuzhaiyum Virundhu.

Explanations
🡱