ಆಪತ್ತಿನಲ್ಲಿ ಸ್ಥೈರ್ಯ

Verses

Holy Kural #621
ಆಪತ್ತು ಬಂದಾಗ (ಅಧೀರರಾಗದೆ) ನಗಬೇಕು; ಅದನ್ನು ಮೆಟ್ಟಿ ಸಹಿಸಿ ಗೆದ್ದುನಿಂತರೆ ಅದಕ್ಕೂಪ್ಪುವಂಥದು ಬೇರೆ ಇಲ್ಲ.

Tamil Transliteration
Itukkan Varungaal Nakuka Adhanai
Atuththoorvadhu Aqdhoppa Thil.

Explanations
Holy Kural #622
ಪ್ರವಾಹದಂತೆ ಮೇರೆವರಿದು ಬರುವ ಸಂಕಟವನ್ನು, ಅರಿವುಳ್ಳವನು ತನ್ನ ಮನಸ್ಸಿನಲ್ಲಿ ನೆನೆದು, ಧೈರ್ಯವಾಗಿ ಎದುರಿಸಬಲ್ಲವನಾದರೆ,
ಆ ಸಂಕಟವು ಮಾಯವಾಗಿ ಬಿಡುವುದು.

Tamil Transliteration
Vellath Thanaiya Itumpai Arivutaiyaan
Ullaththin Ullak Ketum.

Explanations
Holy Kural #623
ಸಂಕಟವೊದಗಿ ಬಂದಾಗ, ಅದಕ್ಕಾಗಿ ದುಃಖಿಸಿ ಅಧೀರರಾಗದವರು, ಆ ಸಂಕಟಕ್ಕೇ ದುಃಖವನ್ನು ತಂದೊಡ್ಡಿ ಅದನ್ನೇ ಗೆದ್ದುಬಿಡುವರು.

Tamil Transliteration
Itumpaikku Itumpai Patuppar Itumpaikku
Itumpai Pataaa Thavar.

Explanations
Holy Kural #624
ಎಡರುಗಳನ್ನು ಎದುರಿಸುವ ಸಮಯದಲ್ಲೆಲ್ಲಾ ಗಾಡಿಯತ್ತಿನಂತೆ ಕಷ್ಟವನ್ನು ತಾಳಿಕೊಳ್ಳಬಲ್ಲನಾದರೆ, ಆ ಎಡರೇ ತೊಂದರೆಯಲ್ಲಿ
ಸಿಕ್ಕಿ ನರಳುವುದು.

Tamil Transliteration
Matuththavaa Yellaam Pakatannaan Utra
Itukkan Itarppaatu Utaiththu.

Explanations
Holy Kural #625
ಸಂಕಟಗಳು ಒಂದರ ಮೇಲೊಂದರಂತೆ ದಾಳಿ ಇಟ್ಟು ಬಂದರೂ ಎದೆಗೆಡದೆ ತಾಳಬಲ್ಲವನಾದರೆ ಆ ಸಂಕಟಗಳೇ ಇಕ್ಕಟ್ಟಿನಲ್ಲಿ ಸಿಕ್ಕಿ
ಪಾಡುಪಡುವುದು.

Tamil Transliteration
Atukki Varinum Azhivilaan Utra
Itukkan Itukkat Patum.

Explanations
Holy Kural #626
ಸಂಕಟಗಳು ಒಂದರ ಮೇಲೊಂದರಂತೆ ದಾಳಿ ಇಟ್ಟು ಬಂದರೂ ಎದೆಗೆಡದೆ ತಾಳಬಲ್ಲವನಾದರೆ ಆ ಸಂಕಟಗಳೇ ಇಕ್ಕಟ್ಟಿನಲ್ಲಿ ಸಿಕ್ಕಿ
ಪಾಡುಪಡುವುದು.

Tamil Transliteration
Atremendru Allar Patupavo Petremendru
Ompudhal Thetraa Thavar.

Explanations
Holy Kural #627
ದೊಡ್ಡವರು (ಜ್ಞಾನಿಗಳು) ಒಡಲು ಸಂಕಟಗಳಿಗೆ ತವರು ಎಂದು ತಿಳಿದಿರುವುದರಿಂದ, ಬಂದ ಸಂಕಟಗಳನ್ನು ಲೆಕ್ಕಿಸುವುದಿಲ್ಲ.

Tamil Transliteration
Ilakkam Utampitumpaik Kendru Kalakkaththaik
Kaiyaaraak Kollaadhaam Mel.

Explanations
Holy Kural #628
ಸುಖಾಮಿಷಗಳಿಗೆ ಆಸೆಪಡದವನು, ಸಂಕಟವನ್ನು ನೈಸರ್ಗಿಕವೆಂದು ಸಹಜವಾಗಿ ಪರಿಗಣಿಸುವವನು, ದುಃಖ ಬಂದಾಗ ಅದಕ್ಕಾಗಿ
ವ್ಯರ್ಥಗೊಳಗಾಗುವುದಿಲ್ಲ.

Tamil Transliteration
Inpam Vizhaiyaan Itumpai Iyalpenpaan
Thunpam Urudhal Ilan.

Explanations
Holy Kural #629
ಸುಖಬಂದ ಕಾಲದಲ್ಲಿ ಸುಖವನ್ನು ಪೋಷಿಸದವನು, ದುಃಖ ಬಂದ ಕಾಲದಲ್ಲಿ ದುಃಖವನ್ನೂ ಅನುಭವಿಸುವುದಿಲ್ಲ.

Tamil Transliteration
Inpaththul Inpam Vizhaiyaadhaan Thunpaththul
Thunpam Urudhal Ilan.

Explanations
Holy Kural #630
ಒಬ್ಬನು ತನ್ನ ಪ್ರಯತ್ನದಲ್ಲಿ ಸಂಕಟವನ್ನೆ ಸುಖವೆಂದು ಸ್ವೀಕರಿಸಬಲ್ಲವನಾದರೆ, ಅವನ ಹಗೆಗಳೂ ಅವನನ್ನು ಮೆಚ್ಚುವ ಶ್ರೇಷ್ಠ
ಗುಣವನ್ನು ಪಡೆಯುತ್ತಾನೆ.

Tamil Transliteration
Innaamai Inpam Enakkolin Aakundhan
Onnaar Vizhaiyunj Chirappu.

Explanations
🡱