ಆಲಸ್ಯವಿಲ್ಲದಿರುವಿಕೆ

Verses

Holy Kural #601
ಕುಟುಂಬವೆನ್ನುವ ನಂದದ ಬೆಳಕು, ಸೋಮಾರಿತನವೆನ್ನುವ ಕತ್ತಲೆ ವ್ಯಾಪಿಸಿ, ಆರಿ ಹೋಗುತ್ತದೆ.

Tamil Transliteration
601 Kutiyennum Kundraa Vilakkam Matiyennum
Maasoora Maaindhu Ketum.

Explanations
Holy Kural #602
ಕುಟುಂಬವೆನ್ನುವ ನಂದದ ಬೆಳಕು, ಸೋಮಾರಿತನವೆನ್ನುವ ಕತ್ತಲೆ ವ್ಯಾಪಿಸಿ, ಆರಿ ಹೋಗುತ್ತದೆ.

Tamil Transliteration
Matiyai Matiyaa Ozhukal Kutiyaik
Kutiyaaka Ventu Pavar.

Explanations
Holy Kural #603
ಆಲಸಿಯಾಗಿ ನಡೆದು ಬಾಳುವ ಮೂರ್ಖನು ಜನಿಸಿದ ವಂಶವು ಅದನಿಗಿಂತ ಮುಂಚೆಯೇ ಅವಸಾನ ಪಡೆಯುವುದು.

Tamil Transliteration
Matimatik Kontozhukum Pedhai Pirandha
Kutimatiyum Thanninum Mundhu.

Explanations
Holy Kural #604
ಸೋಮಾರಿತನದಲ್ಲೇ ಮುಳುಗಿ ವಿಶೇಷ ಪ್ರಯತ್ನವೇನೂ ಮಾಡದವರಿಗೆ, ಅವರ ಕುಲವು ನಾಶವಾಗಿ, ಅಪರಾಧಗಳು ಹೆಚ್ಚುವುವು.

Tamil Transliteration
Kutimatindhu Kutram Perukum Matimatindhu
Maanta Ugnatri Lavarkku.

Explanations
Holy Kural #605
ಕಾಲವಿಳಂಬ, ಮರೆವು, ಆಲಸ್ಯ ಹಾಗೂ ಅತಿನಿದ್ರೆ- ಈ ನಾಲ್ಕೂ ಕೆಡುವ ಸ್ವಭಾವವುಳ್ಳವರು ಬಯಸಿ ಏರುವ ಮೋಹಕ
ನಾವೆಯಾಗುವುದು.

Tamil Transliteration
Netuneer Maravi Matidhuyil Naankum
Ketuneeraar Kaamak Kalan.

Explanations
Holy Kural #606
ಆಲಸಿಗಳು ರಾಜೈಶ್ವರ್ಯವನ್ನು ತಾವಾಗಿಯೇ ಪಡೆದ ಮೇಲೂ (ಅದರಿಂದ) ವಿಶೇಷ ಫಲವನ್ನು ಪಡೆಯಲು ಸಾಧ್ಯವಿಲ್ಲ.

Tamil Transliteration
Patiyutaiyaar Patramaindhak Kannum Matiyutaiyaar
Maanpayan Eydhal Aridhu.

Explanations
Holy Kural #607
ಆಲಸ್ಯವನ್ನೇ ಬಯಸಿ, ವಿಶೇಷವಾದ ಪ್ರಯತ್ನದಲ್ಲಿ ತೊಡಗದವರು ಸ್ನೇಹಿತರಿಂದ ಕಟುವಾದ ಅಪನಿಂದೆಗೆ ಗುರಿಯಾಗುವರು.

Tamil Transliteration
Itipurindhu Ellunj Chol Ketpar Matipurindhu
Maanta Ugnatri Lavar.

Explanations
Holy Kural #608
ಆಲಸ್ಯವು ಹಿರಿಯ ವಂಶದ ಅರಸನಲ್ಲಿ ಸೀರಿಕೊಂಡರೆ ಅವನನ್ನು ಹಗೆಗಳ ಅಡಿಯಾಳಿಗೆ ಮಾಡಿಬಿಡುವುದು.

Tamil Transliteration
Matimai Kutimaikkan Thangindhan Onnaarkku
Atimai Pukuththi Vitum.

Explanations
Holy Kural #609
ಒಬ್ಬನು ತನ್ನ ಆಲಸ್ಯವನ್ನು ಕಿತ್ತೊಗೆದರೆ, ವಂಷದಲ್ಲಿಯೂ, ಅವನ ಕಲಿತನದಲ್ಲಿಯೂ ಬಂದ ದೋಷವು ಪರಿಹಾರವಾಗುವುದು.

Tamil Transliteration
Kutiyaanmai Yulvandha Kutram Oruvan
Matiyaanmai Maatrak Ketum.

Explanations
Holy Kural #610
ತನ್ನಡಿಗಳಿಂದ ಲೋಕವನ್ನೇ ಅಳೆದ ಭಯವಂತನು ವ್ಯಾಪಿಸಿರುವ ಭಾಗವನ್ನೆಲ್ಲಾ ಆಲಸ್ಯವನ್ನು ಕಳೆದ ಅರಸನು ಒಟ್ಟಿಗೇ
ಪಡೆಯುವನು.

Tamil Transliteration
Matiyilaa Mannavan Eydhum Atiyalandhaan
Thaaaya Thellaam Orungu.

Explanations
🡱