ಉಪಕಾರ ತಿಳುವಳಿಕೆ

Verses

Holy Kural #211
ಉಪಕಾರಕ್ಕೆ ಪ್ರತ್ಯುಪಕಾರದ ಹಂಗಿಲ್ಲ; ಮಳೆಯನ್ನು ಸುರಿಸುವ ಮೋಡಗಳಿಗೆ ಈ ಲೋಕದ ಮಾನವರು ಏನು ಉಪಕಾರ ತಾನೆ
ಮಾಡಬಲ್ಲರು?

Tamil Transliteration
Kaimmaaru Ventaa Katappaatu Maarimaattu
En Aatrung Kollo Ulaku.

Explanations
Holy Kural #212
ತಾನು ಶ್ರಮದಿಂದ, ಸಂಪಾದಿಸಿ ಕೂಡಿಟ್ಟ ಹಣವೆಲ್ಲ ತಕ್ಕವರಿಗೆ ಉಪಕಾರ ಮಾಡುವುದಕ್ಕೇ ಇರುವುದು (ಎಂದು ತಿಳಿಯಬೇಕು)

Tamil Transliteration
Thaalaatrith Thandha Porulellaam Thakkaarkku
Velaanmai Seydhar Poruttu.

Explanations
Holy Kural #213
ದೇವಲೋಕದಲ್ಲಿಯಾಗಲೀ, ಈ ಲೋಕದಲ್ಲಾಗಲೀ, ಉಪಕಾರಕ್ಕಿಂತ ಮಿಗಿಲಾದ ಒಳ್ಳೆಯ ಗುಣವನ್ನು ಪಡೆಯುವುದು ಕಷ್ಟ.

Tamil Transliteration
Puththe Lulakaththum Eentum Peralaridhe
Oppuravin Nalla Pira.

Explanations
Holy Kural #214
ಉಪಕಾರದ ನಡೆವಳಿಯನ್ನು ಅರಿತವನು ಮಾತ್ರ ತನ್ನ ಬಾಳನ್ನು ಸಾರ್ಥಕ ಪಡಿಸಿಕೊಳ್ಳುತ್ತಾನೆ; ಉಳಿದವರೆಲ್ಲ (ಬದುಕಿದ್ದೂ)
ಸತ್ತ ಹಾಗೆಯೇ.

Tamil Transliteration
Oththa Tharavon Uyirvaazhvaan Matraiyaan
Seththaarul Vaikkap Patum.

Explanations
Holy Kural #215
ಉಪಕಾರದಿಂದ ಲೋಕ ಕಲ್ಯಾಣವನ್ನು ಬಯಸುವ ಹಿರಿಯ ಅರಿವುಳ್ಳವನ ಸಿರಿಯು, ಊರಿನ ಕೆರೆಯ ನೀರು ತುಂಬಿಕೊಂಡು
ಜನರಿಗೆ ಉಪಕಾರ ಮಾಡಿದುದಕ್ಕೆ ಸಮಾನವಾದುದು.

Tamil Transliteration
Ooruni Neernirain Thatre Ulakavaam
Perari Vaalan Thiru.

Explanations
Holy Kural #216
ಉಪಕಾರ ಮಾಡಲಾದ ಧರ್ಮಗುಣವುಳ್ಳವನ ಬಳಿ ಸಿರಿ ನೆಲೆಸಿದರೆ, ಫಲಿಸುವ ಮರವು ಊರ ನಡುವೆ ಇದ್ದು ಹಣ್ಣು ಬಿಟ್ಟಂತೆ.

Tamil Transliteration
Payanmaram Ulloorp Pazhuththatraal Selvam
Nayanutai Yaankan Patin.

Explanations
Holy Kural #217
ಉಪಕಾರವೇ ಮೊದಲಾದ ಹಿರಿಯ ಗುಣವುಳ್ಳವನ ಬಳಿ ಐಶ್ವರ್ಯವು ಬಂದು ನೆಲಸಿ ನಿಂತರೆ, ರೋಗರುಜಿನಗಳನ್ನು ಪರಿಹರಿಸುವ
ಸಂಜೀವಿನಿ ಮರದಂತೆ (ಹತ್ತು ಜನರಿಗೆ ಪ್ರಯೋಜನ ದೊರೆಯುವುದು)

Tamil Transliteration
Marundhaakith Thappaa Maraththatraal Selvam
Perundhakai Yaankan Patin.

Explanations
Holy Kural #218
ಕರ್ತವ್ಯದರಿವಿನ ದೃಷ್ಟಿಯುಳ್ಳವರು, ಸಿರಿಯನ್ನು ಕೆಳೆದುಕೊಂಡ ಸಂಕಟ ಕಾಲದಲ್ಲೂ ಉಪಕಾರ ಮಾಡಲು ಹಿಂಜರಿಯುವುದಿಲ್ಲ.

Tamil Transliteration
Itanil Paruvaththum Oppuravirku Olkaar
Katanari Kaatchi Yavar.

Explanations
Holy Kural #219
ಉಪಕಾರ ಮಾಡುವ ಧರ್ಮಗುಣವುಳ್ಳವನು ಬಡವನಾಗಿದ್ದಲ್ಲಿ, ಅವನು ಮಾಡ ಬೇಕಾದ ಉಪಕಾರವನ್ನುಮಾಡಲಾರದೆ ದುಃಖಿಸುವ
ಸ್ಥಿತಿಗೆ ಬರುವನು.

Tamil Transliteration
Nayanutaiyaan Nalkoorndhaa Naadhal Seyumneera
Seyyaadhu Amaikalaa Vaaru.

Explanations
Holy Kural #220
ಉಪಕಾರದ ನಡವಳಿಕೆಯಿಂದ ಒಬ್ಬನಿಗೆ ಕೇಡು ಒದುಗುವುದು ಎಂದಾದರೆ, ಅವನು ತನ್ನನ್ನು ಮಾರಿಕೊಂಡಾದರೂ ಅದನ್ನು
ಸಂಪಾದಿಸತಕ್ಕದು.

Tamil Transliteration
Oppuravi Naalvarum Ketenin Aqdhoruvan
Vitrukkol Thakka Thutaiththu.

Explanations
🡱