ಏಕಾಂತ ದುಃಖ

Verses

Holy Kural #1191
ತಾವು ಪ್ರೀತಿಸಿದ ಇನಿಯರ ಪ್ರೇಮವನ್ನು ಪಡೆದ ಕಾಮಿನಿಯರು, ಕಾಮ ವೇದನೆಯೆಂಬ ಬೀಜವಿಲ್ಲದ ಹಣ್ಣನ್ನು ಸವಿದ
ಅದೃಷ್ಟಶಾಲಿಗಳು.

Tamil Transliteration
Thaamveezhvaar Thamveezhap Petravar Petraare
Kaamaththuk Kaazhil Kani.

Explanations
Holy Kural #1192
ಒಲಿದ ನೆಲ್ಲೆಗೆ ಪ್ರಿಯತಮನು ಒಲಿದು ಅರ್ಪಿಸುವ ಪ್ರೀತಿಯು, ತನ್ನ ನಿರೀಕ್ಷೆಯಲ್ಲಿ ಬಾಳುವ ಮಾನವ ಕುಲಕ್ಕೆ ಮಳೆ ಸುಖ
ನೀಡಿದಂತೆ

Tamil Transliteration
Vaazhvaarkku Vaanam Payandhatraal Veezhvaarkku
Veezhvaar Ala? Kkum Ali.

Explanations
Holy Kural #1193
ತಾವೊಲಿದ ಇನಿಯರಿಂದ ಅನುರಾಗದ ಸುಖ ಪಡೆದ ಕಾಮಿನಿಯರಿಗೆ ಮಾತ್ರ ತಾವು ಕೂಡಿ ಬಾಳಿ ಸುಖಿಸುತ್ತೇವೆಂಬ
ಗರ್ವವಿರುತ್ತದೆ.

Tamil Transliteration
Veezhunar Veezhap Patuvaarkku Amaiyume
Vaazhunam Ennum Serukku.

Explanations
Holy Kural #1194
ತಾವೊಲಿದ ಇನಿಯನ ಅನುರಾಗಕ್ಕೆ ಪಾತ್ರರಾಗದ ಪ್ರೇಯಸಿಯರು ಪತಿವ್ರತೆಯರಿಂದ ಪ್ರಶಂಸೆಗೆ ಪಾತ್ರರಾದರೂ ನತದೃಷ್ಟರೇ!

Tamil Transliteration
Veezhap Patuvaar Kezheeiyilar Thaamveezhvaar
Veezhap Pataaar Enin.

Explanations
Holy Kural #1195
ನನು ಮೆಚ್ಚಿ ಒಲಿದವನು ನನ್ನನ್ನು ಮೆಚ್ಚಿ ಒಲಿಯದಿದ್ದರೆ ಅವನು ನಮಗೇನು ಸಂತೋಷ ಕೊಡಬಲ್ಲನು?

Tamil Transliteration
Naamkaadhal Kontaar Namakkevan Seypavo
Thaamkaadhal Kollaak Katai.

Explanations
Holy Kural #1196
ಕಾಮವು ಒಂದು ಪಕ್ಕವಾಗಿದ್ದರೆ, ದುಃಖವುಂಟು ಮಾಡೂವುದು. ಕಾವಡಿಯ ಭಾರದಂತೆ ಎರಡು ಪಕ್ಕದಲ್ಲೂ ಸಮವಾಗಿ
ಇದ್ದರೆ ಅದು ಸವಿಯುಂಟು ಮಾಡೂವುದು.

Tamil Transliteration
Orudhalaiyaan Innaadhu Kaamamkaap Pola
Irudhalai Yaanum Inidhu.

Explanations
Holy Kural #1197
ಕಾಮನು ಒಬ್ಬರ ಪಕ್ಷದಲ್ಲಿಯೇ ನೆಲೆಯಾಗಿ ನಿಂತು ನೋವು ವ್ಯರ್ಥಗಳನ್ನು ತಂದೊಡ್ಡುತ್ತಿರುವನು! ಅದು ಅವನಿಗೆ
ಗೊತಾಗದಷ್ಟು ನಿರ್ದಯನೆ ಅವನು?

Tamil Transliteration
Paruvaralum Paidhalum Kaanaankol Kaaman
Oruvarkan Nindrozhuku Vaan.

Explanations
Holy Kural #1198
ಇನಿಯನ ಇನಿಮಾತುಗಳನ್ನು ಕಿವಿಯಾರ ಕೇಳದೆ ಲೋಕದಲ್ಲಿ ಬಾಳುವ ಕಾಮಿನಿಯರಿಗಿಂತ ಕಲ್ಲೆದೆಯವರು ಬೇರಿಲ್ಲ!

Tamil Transliteration
Veezhvaarin Insol Peraaadhu Ulakaththu
Vaazhvaarin Vankanaar Il.

Explanations
Holy Kural #1199
ನನ್ನ ಪ್ರೀಯಿಗೆ ಪಾತ್ರರಾದವರು ನನ್ನನ್ನು ಪ್ರೀತಿಸದಿದ್ದರೂ ಅವರ ಪರವಾದ ಹೊಗಳಿಕೆಯು ನನ್ನ ಕಿವಿಗೆ ಇಂಪಾಗಿರುವುದು.

Tamil Transliteration
Nasaiiyaar Nalkaar Eninum Avarmaattu
Isaiyum Iniya Sevikku.

Explanations
Holy Kural #1200
ಪ್ರೀತಿರಹಿತರಾಗಿ ನಿನ್ನನ್ನಗಲಿ ದೂರ ಹೋದವನ ಬಳಿ ನಿನ್ನ ವೇದನೆಯನ್ನು ಹೇಳಿಕೊಳ್ಳಲು ಆತುರಪಡುತ್ತಿರುವೆಯಲ್ಲ ಓ ಮನಸ್ಸೆ!
ಅದಕ್ಕಿಂತ ನಿನ್ನ ದುಃಖವನ್ನು ಹೆಚ್ಚಿಸುವ ಕಡಲನ್ನೆ ಅರಿಸುವುದು ಒಳಿತು!

Tamil Transliteration
Uraaarkku Urunoi Uraippaai Katalaich
Cheraaaai Vaazhiya Nenju.

Explanations
🡱