ಕನಸಿನ ನೆಲೆಯನ್ನು ಒರೆಯುವುದು

Verses

Holy Kural #1211
(ನಾನು ವಿರಹದಲ್ಲಿ ಸೊರಗಿ ಮಲಗಿರುವಾಗ) ಪ್ರಿಯತಮನ ಸಂದೇಶದೊಡನೆ ಬಂದ ಕನಸಿಗೆ ತಕ್ಕ ರೀತಿಯಲ್ಲಿ
ಸನ್ಮಾನವನ್ನು ಹೇಗೆ ಮಾಡೂವುದೇನೋ!

Tamil Transliteration
Kaadhalar Thoodhotu Vandha Kanavinukku
Yaadhusey Venkol Virundhu.

Explanations
Holy Kural #1212
ನನ್ನ ಕಪ್ಪಾದ ಮೀನ್ಗಣ್ಣುಗಳು ನನ್ನ ಕೋರಿಕೆಯಂತೆ ನಿದ್ರಾವಶವಾದರೆ, ಕನಸಿನಲ್ಲಿ ಸಂಧಿಸುವ ನನ್ನ ಪ್ರಿಯತಮನಿಗೆ ನಾನು
ವಿರಹವೇದನೆಯಲ್ಲಿ ಪಾರಾಗಿ ಉಳಿದಿರುವ ಸಂಗತಿಯನ್ನು ಸಾರಿ ಹೇಳುವನು.

Tamil Transliteration
Kayalunkan Yaanirappath Thunjir Kalandhaarkku
Uyalunmai Saatruven Man.

Explanations
Holy Kural #1213
ನನಸಿದಲ್ಲಿ ನನ್ನನ್ನು ಪ್ರೀತಿಸದ ಪ್ರಿಯತಮನನ್ನು ಕನಸಿನಲ್ಲಿ ಕಾಣುವುದರಿಂದಲೇ ನಾನು ಜೀವಂತವಾಗಿ ಉಳಿದಿದ್ದೇನೆ.

Tamil Transliteration
Nanavinaal Nalkaa Thavaraik Kanavinaal
Kaantalin Unten Uyir.

Explanations
Holy Kural #1214
ನನಸಿನಲ್ಲಿ ನನ್ನನ್ನು ಪ್ರೀತಿಸದ ಪ್ರಿಯತಮನನ್ನು ಕನಸಿದಲ್ಲಿ ಆರಸಿ ಕರೆದುಕೊಂಡು ಬರುವುರಿಂದಲೇ ನನಗೆ ಆ
ಕನಸಿನಿಂದ ಕಾಮಸುಖವುಂಟಾಗುತ್ತಿದೆ.

Tamil Transliteration
Kanavinaan Untaakum Kaamam Nanavinaan
Nalkaarai Naatith Thararku.

Explanations
Holy Kural #1215
(ಹಿಂದೆ) ನನಸಿನಲ್ಲಿ ಪ್ರಿಯತಮನನ್ನು ಕಾಣುವಾಗ ಉಂಟಾದ ಮಧುರ ಅನುಭವವೇ ಕನಸಿನಲ್ಲಿ ಅವನನ್ನು ಕಾಣುವಾಗಲೂ
ನನಗೆ ಸಿಗುತ್ತಿದೆ!

Tamil Transliteration
Nanavinaal Kantadhooum Aange Kanavundhaan
Kanta Pozhudhe Inidhu.

Explanations
Holy Kural #1216
ನನಸು ಎನ್ನುವ ಸ್ಥಿತಿಯೊಂದು ಇಲ್ಲ ಎಂದಾದರೆ ಕನಸಿನಲ್ಲಿ ಕೊಡಿದ ನನ್ನ ಪ್ರಿಯತಮನು ನನ್ನನ್ನು ತೊರೆದು ಎಂದಿಗೂ
ಆಗುವುದಿಲ್ಲ.

Tamil Transliteration
Nanavena Ondrillai Aayin Kanavinaal
Kaadhalar Neengalar Man.

Explanations
Holy Kural #1217
ನನಸಿನಲ್ಲಿ ಪ್ರೀತಿಯ ಕರುಣೆ ತೋರದ ಕಠಿಣ ಮನಸ್ಸುಳ್ಳ ಪ್ರಿಯತಮನು ಕಾಸಿನಲ್ಲಿ (ಮಾತ್ರ) ಬಂದು ನನ್ನನ್ನು ಪೀಡಿಸುವುದೇಕೆ?

Tamil Transliteration
Nanavinaal Nalkaak Kotiyaar Kanavanaal
Enemmaip Peezhip Padhu.

Explanations
Holy Kural #1218
ನಾನು ನಿದ್ರಿಸಿರುವಾಗ (ಕನಸಿನಲ್ಲಿ ಬಂದು) ನನ್ನ ತೋಳ ಮೇಲೆ ಒರಗಿದವರು, ನನಗೆ ಎಚ್ಚರವಾದೊಡನೆಯೇ ತ್ವರೆಯಾಗಿ
ಬಂದು ನನ್ನ ಹೃದಯದಲ್ಲಿ ಸೇರಿಕೊಳ್ಳುವರು.

Tamil Transliteration
Thunjungaal Tholmelar Aaki Vizhikkungaal
Nenjaththar Aavar Viraindhu.

Explanations
Holy Kural #1219
ಪ್ರೇಮದ ಅನುಭವವಿಲ್ಲದೆ, ಕನಸಿನಲ್ಲಿ ಇನಿಯನನ್ನು ಕಾಣಲಾರದ ಬೆಡಗಿಯರು, ನನಸಿನಲ್ಲಿ ನನಗೆ ಪ್ರೇಮವನ್ನು ಕರುಣಿಸದ
ನಲ್ಲನ ಕಲ್ಲೆದೆಯನ್ನು ಕುರಿತು ನಿಂದಿಸಿ ಆಡುವರು.

Tamil Transliteration
Nanavinaal Nalkaarai Novar Kanavinaal
Kaadhalark Kaanaa Thavar.

Explanations
Holy Kural #1220
ನನಸಿನಲ್ಲಿ ನನ್ನನ್ನು ಅವರು ತೊರೆದು ಹೋದರೆಂದು ಈ ಊರವರು ನಿಂದಿಸಿ ಮಾತಾಡುವರಲ್ಲ! ನನ್ನ ಕನಸಿನಲ್ಲಿ ಅವರು
ಬಂದು ಹೋಗುವುದನ್ನು ಕಾಣಲಾರರೆ?

Tamil Transliteration
Nanavinaal Namneeththaar Enpar Kanavinaal
Kaanaarkol Ivvoo Ravar.

Explanations
🡱