ಕಳದಿರುವುದು

Verses

Holy Kural #281
ಇತರರ ದೃಷ್ಟಿಯಲ್ಲಿ ಕೀಳಾಗಬಾರದೆಂದು ಬಯಸುವವನು, ಅತಿ ಸಣ್ಣವಸ್ತುವವನ್ನೂ ವಂಚಿಸಿ ಕದಿಯದಿರುವಂತೆ ತನ್ನ ಮನಸ್ಸನ್ನು
ಕಾಪಾಡಿಕೊಳ್ಳಬೇಕು.

Tamil Transliteration
Ellaamai Ventuvaan Enpaan Enaiththondrum
Kallaamai Kaakkadhan Nenju.

Explanations
Holy Kural #282
ಮನಸ್ಸಿನಿಂದ ಕೆಟ್ಟದನ್ನು ನೆನೆಯುವುದೂ ಪಾಪವೇ; ಅದರಿಂದ ಹೆರರ ಒಡವೆಯನ್ನು ಅವರಿಗೆ ಗೊತ್ತಿಲ್ಲದಂತೆ "ಅಪಹರಿಸೋಣ" ಎಂಬ
ಭಾವನೆ ಮನಸ್ಸಿನಲ್ಲಿ ಬಾರದಂತಿರಬೇಕು.

Tamil Transliteration
Ullaththaal Ullalum Theedhe Piranporulaik
Kallaththaal Kalvem Enal.

Explanations
Holy Kural #283
ಕಳವಿನಿಂದ ಉಂಟಾದ ಸಂಪತ್ತು, ಬೆಳೆಯುವಂತೆ ತೋರಿ ಕೊನೆಗೆ ಸಂಪೂರ್ಣ ನಾಶವಾಗುವುದು.

Tamil Transliteration
Kalavinaal Aakiya Aakkam Alavirandhu
Aavadhu Polak Ketum.

Explanations
Holy Kural #284
ಕಳವಿನಿಂದ ಹೆರರ ಸಂಪತ್ತನ್ನು ದಕ್ಕಿಸಿಕೊಳ್ಳುವುದರಲ್ಲಿ ಪಕ್ವವಾದ ಒಲವು ಪರಿಣಾಮದಲ್ಲಿ ಕೊನೆಯಿಲ್ಲದ ದುಃಖವನ್ನು ತರುವುದು.

Tamil Transliteration
Kalavinkan Kandriya Kaadhal Vilaivinkan
Veeyaa Vizhumam Tharum.

Explanations
Holy Kural #285
ಪರರ ಒಡವೆಯನ್ನು ಕಬಳಿಸಲು ಎಣಿಸಿ ಅದರು ಮೈಮರೆವುದನ್ನೇ ಎದುರು ನೋಡುವವರ ಬಳಿ ಕರುಣೆಯಿಂದ ಪ್ರೀತಿ ತೋರುವ ಗುಣ
ಇರುವುದಿಲ್ಲ.

Tamil Transliteration
Arulkarudhi Anputaiya Raadhal Porulkarudhip
Pochchaappup Paarppaarkan Il.

Explanations
Holy Kural #286
ಕಳ್ಳತನದಿಂದ ಪರರ ಸೊತ್ತನ್ನು ವಂಚಿಸುವುದರಿಲ್ಲ ನುರಿತ ಒಲವುಳ್ಳವರು ವಿವೇಕದಿಂದ ಧರ್ಮಮಾರ್ಗದಲ್ಲಿ ನಡೆಯಲಾರರು.

Tamil Transliteration
Alavinkan Nindrozhukal Aatraar Kalavinkan
Kandriya Kaadha Lavar.

Explanations
Holy Kural #287
ಕಳ್ಳತನಕ್ಕೆ ಕಾರಣವಾದ ಕತ್ತಲೆಯ ಅರಿವು (ವ್ಯಾಮೋಹ), ವಿವೇಕದ ಬಲವನ್ನು ಬಯಸುವವರಲ್ಲಿ ಇರುವುದಿಲ್ಲ.

Tamil Transliteration
Kalavennum Kaarari Vaanmai Alavennum
Aatral Purindhaarkanta Il.

Explanations
Holy Kural #288
ವಿವೇಕವುಳ್ಳವರ ಹೃದಯದಲ್ಲಿ ಧರ್ಮವು ನೆಲೆಯೂರಿರುವಂತೆ, ಕಳ್ಳರ ಹೃದಯದಲ್ಲಿ ವಂಚನೆಯು ನೆಲೆಯೂರಿರುತ್ತದೆ.

Tamil Transliteration
Alavarindhaar Nenjath Tharampola Nirkum
Kalavarindhaar Nenjil Karavu.

Explanations
Holy Kural #289
ವಂಚನೆಯಲ್ಲದೆ ಬೇರೆ ಒಳ್ಳೆಯ ಮಾರ್ಗಗಳನ್ನು ಅರಿಯದವರು, ವಿವೇಕವಲ್ಲದ ಕಾರ್ಯಗಳನ್ನು ಮಾಡಿ ಒಡನೆಯೇ ಕೆಟ್ಟು
ನಾಶವಾಗುವವರು.

Tamil Transliteration
Alavalla Seydhaange Veevar Kalavalla
Matraiya Thetraa Thavar.

Explanations
Holy Kural #290
ಕಳ್ಳತನ ಮಾಡುವವರಿಗೆ ಭೂಮಿಯಲ್ಲಿ ಉಸಿರೊಂದಿಗೆ ಬಾಳುವ ನೆಲೆಯೂ ತಪ್ಪಿಹೋಗುತ್ತದೆ. ಕಳ್ಳತನ ಮಾಡದವರನ್ನು
ದೇವಲೋಕವೂ ಆದರಿಸುತ್ತದೆ.

Tamil Transliteration
Kalvaarkkuth Thallum Uyirnilai Kalvaarkkuth
Thallaadhu Puththe Lulaku.

Explanations
🡱