ಕಾರ್ಯ ನಿರ್ಧಾರ

Verses

Holy Kural #661
ಕಾರ್ಯ ನಿರ್ಧಾರವೆನ್ನುವುದು ಒಬ್ಬನ ಮನೋದಾರ್ಢ್ಯವನ್ನು ಅವಲಬಿಸಿದೆ. ಉಳಿದುವೆಲ್ಲಾ ಬೇರೆಯವೇ.

Tamil Transliteration
Vinaiththitpam Enpadhu Oruvan Manaththitpam
Matraiya Ellaam Pira.

Explanations
Holy Kural #662
ಅಡ್ಡಿ ಆದಂಕಗಳು ಬರುವ ಮುನ್ನವೇ (ಅದರಿಂದ) ನೀಗಿಕೊಳ್ಳುವುದು, ಬಂದಮೇಲೆ ಎದೆಗೆಡದಿರುವುದು, ಎಂಬಿವೆರಡು ಮಾರ್ಗಗಳೇ
ಕಾರ್ಯ ಸಾಮರ್ಥ್ಯಕ್ಕೆ ನಿದರ್ಶನವೆಂದು, ಪರಿಶೋಧನೆ ನಡಸಿದವರ ಅಭಿಮತ.

Tamil Transliteration
Oororaal Utrapin Olkaamai Ivvirantin
Aarenpar Aaindhavar Kol.

Explanations
Holy Kural #663
ಮಾಡುವ ಕೆಲಸವನ್ನು ಕೊನೆಯಲ್ಲಿ ಬಹಿರಂಗಪಡಿಸುವುದೇ ಪುರುಷ ಲಕ್ಷಣವೆನಿಸಿಕೊಳ್ಳುವುದು. ನಡುವೆ ಪ್ರಕಟಿಸಿದಲ್ಲಿ ನೀಗಲಾಗದ
ದುಃಖವನ್ನು ತರುತ್ತದೆ.

Tamil Transliteration
663, Kataikkotkach Cheydhakka Thaanmai Itaikkotkin
Etraa Vizhuman Tharum.

Explanations
Holy Kural #664
ಈ ಕೆಲಸವನ್ನು ಹೀಗೆ ಮಾಡಬೇಕೆಂದು ಹೇಳುವುದು ಯಾರಿಗೂ ಸುಲಭ; ಹೇಳಿದಂತೆ ಮಾಡಿ ಮುಗಿಸುವುದು ಕಷ್ಟ ಸಾಧ್ಯವಾಗುವುದು.

Tamil Transliteration
Solludhal Yaarkkum Eliya Ariyavaam
Solliya Vannam Seyal.

Explanations
Holy Kural #665
ಕಾರ್ಯ ಪರತೆಯಿಂದ ಹಿರಿಮೆಯನ್ನು ಗಳಿಸಿ ದೊಡ್ಡವರಾದವರ ಕಾರ್ಯ ನಿರ್ಧಾರವು ಅರಸನ ಸೆಳೆದು ನಾಡಿನಲ್ಲೆಲ್ಲಾ ವ್ಯಾಪಿಸಿ
ಗೌರವಿಸಲ್ಪಡುವುದು.

Tamil Transliteration
Veereydhi Maantaar Vinaiththitpam Vendhankan
Ooreydhi Ullap Patum.

Explanations
Holy Kural #666
ಒಂದು ಕೆಲಸವನ್ನು ಮಾಡಬೇಕೆಂದು ಆಲೋಚಿಸಿದವರು, ಆ ಕೆಲಸದಲ್ಲಿ ನಿಶ್ಚಲವಾದ ನಿರ್ಧಾರವನ್ನು ತಳೆದಿದ್ದರೆ ಅವರು
ಬಯಸಿದುದನ್ನು ಬಯಸಿದ ರೀತಿಯಲ್ಲೆ ಪಡೆಯುವರು.

Tamil Transliteration
Enniya Enniyaangu Eydhu Enniyaar
Thinniyar Aakap Perin.

Explanations
Holy Kural #667
ಉರುಳುವ ದೊಡ್ಡ ತೇರಿಗೆ, ಚಕ್ರದ ಅಚ್ಚಿನಲ್ಲಿರುವ (ಪುಟ್ಟ) ಕೀಲಿಮೊಳೆಯಂತೆ, ಲೋಕದಲ್ಲಿ (ಕೆಲವರು) ಇರುವರು; ಅವರ ಸಾಮಾನ್ಯ
ಆಕಾರವನ್ನು ಕಂಡು ನಾವು ಕೀಳೆಣಿಸಬಾರದು.

Tamil Transliteration
Uruvukantu Ellaamai Ventum Urulperundherkku
Achchaani Annaar Utaiththu.

Explanations
Holy Kural #668
ಕೈಗೊಂಡ ಕೆಲಸವನ್ನು ಮನಸ್ಸಿನಲ್ಲಿ ಚಂಚಲಗೊಳ್ಳದೆ, ಅಧೀರರಾಗದೆ, ಆಲಸ್ಯವನ್ನು ಬಿಟ್ಟು ಮಾಡಿ ಪೂರೈಸಬೇಕು.

Tamil Transliteration
Kalangaadhu Kanta Vinaikkan Thulangaadhu
Thookkang Katindhu Seyal.

Explanations
Holy Kural #669
ಮೊದಲು ಅತಿಯಾದ ದುಃಖವನ್ನು ತಂದೊಡ್ದಿದ್ದರೂ ಅಂತ್ಯದಲ್ಲಿ ಸುಖವನ್ನು ತರುವ ಕೆಲಸವನ್ನು, ನಿರ್ಧಾರದಿಂದ ಮಾಡಿ
ಮುಗಿಸಬೇಕು.

Tamil Transliteration
Thunpam Uravarinum Seyka Thunivaatri
Inpam Payakkum Vinai.

Explanations
Holy Kural #670
ಬೇರೆ ಎಷ್ಟೇ ಸಾಮರ್ಥ್ಯ ಶೀಲಿಯಾಗಿದ್ದರೂ ಮಾಡುವ ಕೆಲಸದಲ್ಲಿ ನಿರ್ಧಾರ ಇಲ್ಲದವರನ್ನು ಲೋಕವು ಮನ್ನಿಸುವುದಿಲ್ಲ.

Tamil Transliteration
Enaiththitpam Ey Thiyak Kannum Vinaiththitpam
Ventaarai Ventaadhu Ulaku.

Explanations
🡱