ಕೀರ್ತಿ

Verses

Holy Kural #231
(ಕಷ್ಟದಲ್ಲಿರುವವರಿಗೆ) ಈವುದು, ಕೀರ್ತಿವಂತನಾಗಿ ಬಾಳುವುದು, ಇವಲ್ಲದೆ ಮಾನವನ ಬಾಳಿನಲ್ಲಿ ಬೇರೆ ಲಾಭವಿಲ್ಲ.

Tamil Transliteration
Eedhal Isaipata Vaazhdhal Adhuvalladhu
Oodhiyam Illai Uyirkku.

Explanations
Holy Kural #232
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರ ಕೀರ್ತಿಯನ್ನು ಲೋಕದಲ್ಲಿ ಎಲ್ಲರೂ ಹೋಗುತ್ತಾರೆ.

Tamil Transliteration
Uraippaar Uraippavai Ellaam Irappaarkkondru
Eevaarmel Nirkum Pukazh.

Explanations
Holy Kural #233
ಉನ್ನತವಾದ ಕೀರ್ತಿಯಲ್ಲದೆ, ಲೋಕದಲ್ಲಿ ಪ್ರತ್ಯೇಕವಾಗಿ ನಾಶವಿಲ್ಲದೆ ನೆಲೆ ನಿಲ್ಲುವಂಥ ವಸ್ತು ಬೇರೊಂದಿಲ್ಲ.

Tamil Transliteration
Ondraa Ulakaththu Uyarndha Pukazhallaal
Pondraadhu Nirpadhon Ril.

Explanations
Holy Kural #234
ಭೂಮಿಯುದ್ದಕ್ಕೂ, ನಿಡುಗಾಲ ನಿಲ್ಲುವ ಕೀರ್ತಿಯನ್ನು ಪಡೆದವರನ್ನಲ್ಲದೆ ಜ್ಞಾನಿಗಳನ್ನು (ದೇವತೆಗಳನ್ನು) ಕೀರ್ತಿಸದು ದೇವಲೋಕ.

Tamil Transliteration
Nilavarai Neelpukazh Aatrin Pulavaraip
Potraadhu Puththel Ulaku.

Explanations
Holy Kural #235
ಕೀರ್ತಿಯಿಂದ ಗಳಿಸಿದ ಬಡತನ, ಶಾಶ್ವತವಾದ ಕೀರ್ತಿಯೊಡನೆ ಬರುವ ಸಾವು ಬಲ್ಲವರಿಗಲ್ಲದೆ ಬೇರೆಯವರಿಗೆ ಸಾಧ್ಯವಿಲ್ಲ.

Tamil Transliteration
Naththampol Ketum Uladhaakum Saakkaatum
Viththakark Kallaal Aridhu.

Explanations
Holy Kural #236
ಹುಟ್ಟಿದರೆ ಹೊಗಳಿಕೆ (ಕೀರ್ತಿ) ಯೊಂದಿಗೆ ಹುಟ್ಟಬೇಕು. ಅದಿಲ್ಲವಾದರೆ ಹುಟ್ಟುವುದಕ್ಕಿಂತ ಹುಟ್ಟದಿರುವುದೇ ಲೇಸು.

Tamil Transliteration
Thondrin Pukazhotu Thondruka Aqdhilaar
Thondralin Thondraamai Nandru.

Explanations
Holy Kural #237
ಕೀರ್ತಿ ಪಡೆಯುವಂತೆ, ಬಾಳದವರು, ತಮ್ಮ ಕುಂದಿಗೆ ತಾವೇ ನೊಂದು ಕೊಳ್ಳದೆ ತಮ್ಮನ್ನು ತೆಳೆಗುವ ಇತರರ ಮಾತಿಗೆ
ನೊಂದುಕೊಳ್ಳುವುದು ಏಕೆ?

Tamil Transliteration
Pukazhpata Vaazhaadhaar Thannovaar Thammai
Ikazhvaarai Novadhu Evan?.

Explanations
Holy Kural #238
ತಮ್ಮ ನಂತರ ನಿಡುಗಾಲ ಉಳಿಯುವ ಕೀರ್ತಿ ಸಂತತಿಯನ್ನು ಗಳಿಸದೆ ಬಿಟ್ಟರೆ ಈ ಲೋಕದಲ್ಲಿ ಬಾಳುವವರಿಗೆ ಅದೇ ಕಳಂಕ
ಎಂದು ಬಲ್ಲವರು ಹೇಳುತ್ತಾರೆ.

Tamil Transliteration
Vasaiyenpa Vaiyaththaark Kellaam Isaiyennum
Echcham Peraaa Vitin.

Explanations
Holy Kural #239
ಅಪಕೀರ್ತಿಯ ಶರೀರವನ್ನು ಹೊತ್ತುಕೊಮ್ಡಿರುವ ನೆಲದಲ್ಲಿ ಸಮೃದ್ಧ ಬೆಳೆಯೂ ಕುಂದಿ ನಾಶವಾಗಿ ಹೋಗುವುದು.

Tamil Transliteration
Vasaiyilaa Vanpayan Kundrum Isaiyilaa
Yaakkai Poruththa Nilam.

Explanations
Holy Kural #240
ಅಪಕೀರ್ತಿ ಅಳಿಯುವಂತೆ ಬದುಕುವವರೇ (ನಿಜವಾಗಿ) ಬಾಳುವವರು. ಅದಲ್ಲದೆ, ಕೀರ್ತಿ ಅಳಿಯುವಂತೆ ಬಾಳುವ ಜನರು
(ಬದುಕಿದ್ದೂ) ಬಾಳದವರು.

Tamil Transliteration
Vasaiyozhiya Vaazhvaare Vaazhvaar Isaiyozhiya
Vaazhvaare Vaazhaa Thavar.

Explanations
🡱