ಕೆಟ್ಟಸ್ನೇಹ

Verses

Holy Kural #811
ಪ್ರೀತ್ಯಾಧಿಕ್ಯದಿಂದ ಹೀರಿಕೊಳ್ಳುವಂತೆ ಕಂಡರೂ ದುರ್ಜನರ ಕೆಳೆತನವುವೃದ್ಧಿಯಾಗುವುದಕ್ಕಿಂತ ನಶಿಸಿ ಹೋಗುವುದು ಒಳ್ಳೆಯದು.

Tamil Transliteration
Parukuvaar Polinum Panpilaar Kenmai
Perukalir Kundral Inidhu.

Explanations
Holy Kural #812
ತಮಗೆ ಪ್ರಯೋಜನವಿರುವಾಗ ಸ್ನೇಹಮಾಡಿ, ಪ್ರಯೋಜನವಿಲ್ಲದಾಗ ದೂರಮಾಡುವ, ಹೊಂದಿಕೆ ಇಲ್ಲದವರ ಕೆಳೆಯನ್ನು ಹೊಂದಿದ್ದರೇನು?

Tamil Transliteration
Urinnattu Arinoruum Oppilaar Kenmai
Perinum Izhappinum En?.

Explanations
Holy Kural #813
ಬರುವ ಲಾಭದಿಂದ ಅಳೆದು ನೋಡುವ ಸ್ನೇಹಿತರು, ಪಡೆದ ಸೊತ್ತನ್ನು ಸೆಳೆಯುವ ವೇಶ್ಯಯರಿಗೂ, ಕಳ್ಳರಿಗೂ ಸಮಾನರು.

Tamil Transliteration
Uruvadhu Seerdhookkum Natpum Peruvadhu
Kolvaarum Kalvarum Ner.

Explanations
Holy Kural #814
ಹೋರಾಟದ ಕಣದಲ್ಲಿ ತಿಳಿಬಿಟ್ಟು ಓಡುವ ಶಿಕ್ಷಣವಿಲ್ಲದ ಕುದುರೆಯಂಥವರ ಗೆಳೆತನಕ್ಕಿಂತಲೂ (ಗೆಳೆತನವೇ ಇಲ್ಲದ) ಏಕಾಂತ ಜೀವನವೇ ಮೇಲು.

Tamil Transliteration
Amarakaththu Aatrarukkum Kallaamaa Annaar
Thamarin Thanimai Thalai.

Explanations
Holy Kural #815
ಆಪತ್ಕಾಲದಲ್ಲಿ ತಮ್ಮ ರಕ್ಷಣೆಗಾಗಿ ಇಟ್ಟುಕೊಂಡರೂ, ರಕ್ಷಣೆ ಮಾಡದಿರುವ ಕೀಳು ಜನರ ಸ್ನೇಹವನ್ನು ಹೊಂದುವುದಕ್ಕಿಂತಲೂ ಹೊಂದದಿರುವುದೇ ಲೇಸು.

Tamil Transliteration
Seydhemanj Chaaraach Chiriyavar Punkenmai
Eydhalin Eydhaamai Nandru.

Explanations
Holy Kural #816
ಅರಿವಿಲ್ಲದವರ ಅಧಿಕವಾದ ಸಲಿಗೆಯ ಸ್ನೇಹಕ್ಕಿಂತಲೂ, ಅರಿವುಳ್ಳವರ ನಿರ್ಲಕ್ಷ್ಯ ಮನೋಭಾವವು ಕೋಟಿಪಾಲು ಪ್ರಯೋಜನವನ್ನುಂಟು ಮಾಡುವುದು.

Tamil Transliteration
Pedhai Perungezheei Natpin Arivutaiyaar
Edhinmai Koti Urum.

Explanations
Holy Kural #817
ಮನಸ್ಸಿನಲ್ಲಿ ಪ್ರೇಮವಿಲ್ಲದೆ, ನಗಿಸಿ ಕಾಲ ಕಳೆಯುವವರ ಸ್ನೇಹದಲ್ಲಿ ಪಡೆದುಕೊಳ್ಳುವ ಪ್ರಯೋಜನಕ್ಕಿಂತ ಹಗೆಗಳಿಂದ ಬರುವ ಲಾಭ ಹತ್ತು ಕೋಟಿ ಪಾಲು ಮೇಲು.

Tamil Transliteration
Nakaivakaiya Raakiya Natpin Pakaivaraal
Paththatuththa Koti Urum.

Explanations
Holy Kural #818
ತಾವು ಮಾಡಬಲ್ಲ ಕೆಲಸವನ್ನ್ನು ಮಾಡಲಾಗದೆ ಕೆಡೀಸುವವರ ಸ್ನೇಹವನ್ನು ಅವರಿಗೆ ತಿಳಿಯದ ಹಾಗೆ ಮೌನವಾಗಿ ಕೈಬಿಡಬೇಕು.

Tamil Transliteration
Ollum Karumam Utatru Pavarkenmai
Sollaataar Sora Vital.

Explanations
Holy Kural #819
ನಡೆ ಬೇರೆ ನುಡಿ ಬೇರೆಯಾಗಿರುವವರ ಸ್ನೇಹವು ಒಬ್ಬನಿಗೆ ಕನಸಿನಲ್ಲಿ ಕೂಡ ದುಃಖವನ್ನು ತರುವುದಾಗುತ್ತದೆ.

Tamil Transliteration
Kanavinum Innaadhu Manno Vinaiveru
Solveru Pattaar Thotarpu.

Explanations
Holy Kural #820
ಪ್ರತ್ಯೇಕವಾಗಿರುವಾಗ ಅತಿಯಾದ ಒಲವು ತೋರಿ, ಸಭೆಯಲ್ಲಿ ಹಳಿಯುವವರ ಸ್ನೇಹವನ್ನು ಸ್ವಲ್ಪವೂ ಬಯಸದೆ ಕೈಬಿಡಬೇಕು.

Tamil Transliteration
Enaiththum Kurukudhal Ompal Manaikkezheei
Mandril Pazhippaar Thotarpu.

Explanations
🡱