ಕೆಟ್ಟ ಕಲಸಗಳ ಭಯ

Verses

Holy Kural #201
ಕೆಟ್ಟ ಕೆಲಸವನ್ನು ಮಾಡುವ ಉದ್ಧಟತನಕ್ಕೆ ದುಷ್ಟರು ಹೆದರುವುದಿಲ್ಲ. ಶಿಷ್ಟರು ಹೆದರುತ್ತಾರೆ.

Tamil Transliteration
Theevinaiyaar Anjaar Vizhumiyaar Anjuvar
Theevinai Ennum Serukku.

Explanations
Holy Kural #202
ಕೆಟ್ಟ ಕೆಲಸಗಳಿಂದ ಕೆಟ್ಟದೇ ಫಲಿಸುವುದು; ಆದರಿಂದ ಕೆಟ್ಟ ಕೆಲಸಗಳನ್ನು ಬೆಂಕಿಯನ್ನು ಕಂಡರೆ ಹಿಮ್ಮೆಟ್ಟುವಂತೆ ಹೆದರಬೇಕು.

Tamil Transliteration
Theeyavai Theeya Payaththalaal Theeyavai
Theeyinum Anjap Patum.

Explanations
Holy Kural #203
ತನ್ನ ಹೆಗಳಿಗೆ ಕೂಡ ಕೆಟ್ಟದನ್ನು ಮಾಡದೆ ಇರುವುದೇ, ಅರಿವುಗಳೆಲ್ಲೆಲ್ಲಾ ಮಿಗಿಲಾದ ಅರಿವು ಎಂದು ಹೇಳುತ್ತಾರೆ.

Tamil Transliteration
Arivinul Ellaan Thalaiyenpa Theeya
Seruvaarkkum Seyyaa Vital.

Explanations
Holy Kural #204
ಮರೆತೂ ಪರರಿಗೆ ಕೇಡು ಎಣಿಸಬಾರದು; ಹಾಗೆ ಎಣಿಸಿದರೆ ಧರ್ಮವು ಕೇಡೆಣಿಸಿದವನಿಗೇ ಕೇಡನ್ನು ಎಣಿಸುತ್ತದೆ.

Tamil Transliteration
Marandhum Piranketu Soozharka Soozhin
Aranjoozham Soozhndhavan Ketu.

Explanations
Holy Kural #205
ತಾನು ಇಲ್ಲದವನೆಂದು (ದರಿದ್ರನೆಂದು) ಕೆಟ್ಟ ಕಾರ್ಯಗಳನ್ನು ಮಾಡ ಬಾರದು; ಹಾಗೆ ಮಾಡಿದರೆ ಮತ್ತಷ್ಟು ದರಿದ್ರನಾಗುತ್ತಾನೆ.

Tamil Transliteration
Ilan Endru Theeyavai Seyyarka Seyyin
Ilanaakum Matrum Peyarththu.

Explanations
Holy Kural #206
ದುಃಖಕ್ಕೆ ಕಾರಣವಾದ ಕೆಟ್ಟ ಕಾರ್ಯಗಳು ತನ್ನನ್ನು ಬಾಧಿಸಬಾರದು ಎಂದು ಇಚ್ಛಿಸುವವನು, ಇತರರಿಗೂ ತಾನು ಕೆಟ್ಟದನ್ನು
ಮಾಡದಿರಬೇಕು.

Tamil Transliteration
Theeppaala Thaanpirarkan Seyyarka Noippaala
Thannai Atalventaa Thaan.

Explanations
Holy Kural #207
ಎಷ್ಟು ಮುಂದಿ ಹಗೆಗಳಿದ್ದರೂ ತಪ್ಪಿ ಬಾಳಬಹುದು; ದುಷ್ಕೃತ್ಯ ಎಂಬ ಹಗೆ ಮಾತ್ರ ಬೆಂಬಿಡದೆ ಬಂದು ಕೊಲ್ಲುವುದು.

Tamil Transliteration
Enaippakai Yutraarum Uyvar Vinaippakai
Veeyaadhu Pinsendru Atum.

Explanations
Holy Kural #208
ಒಬ್ಬನ ನೆಲಳು ಅವನ ಪಾದದಡಿಯಲ್ಲಿಯೇ ಸೇರಿಕೊಂಡಿರುವಂತೆ ಅವನ ದುಷ್ಕೃತ್ಯಗಳೂ ಅವನನ್ನು ಬೆಂಬಿಡದೆ ಅಳಿವಿಗೆ
ಕಾರಣವಾಗುವುದು.

Tamil Transliteration
Theeyavai Seydhaar Ketudhal Nizhaldhannai
Veeyaadhu Atiurain Thatru.

Explanations
Holy Kural #209
ಒಬ್ಬನು ತನ್ನ ಹಿತ ಬಯಸುವವನಾದರೆ, ಎಷ್ಟೇ ಅಲೊಅವಾದರೂ ಕೇಡಿನ ಪಾಲಿನಲ್ಲಿ ಪಾಲ್ಗೊಳ್ಳದಿರಲಿ.

Tamil Transliteration
Thannaiththaan Kaadhala Naayin Enaiththondrum
Thunnarka Theevinaip Paal.

Explanations
Holy Kural #210
ತಪ್ಪಾದ ಹಾದಿಯಲ್ಲಿ ನಡೆದು ಕೆಟ್ಟ ಕಾರ್ಯಗಳನ್ನು ಮಾಡುವುದಿಲ್ಲ ಎಂದಾದರೆ, ಅವನಿಗೆ ಕೇಡಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.

Tamil Transliteration
Arungetan Enpadhu Arika Marungotith
Theevinai Seyyaan Enin.

Explanations
🡱