ಚಾಡಿ ಹೇಳದಿರುವುದು

Verses

Holy Kural #181
ಒಬ್ಬನು ಸತ್ಯವನ್ನು ನುಡಿಯದೆ ಪಾಪ ಕಾರ್ಯಗಳಲ್ಲಿ ತೊಡಗಿದ್ದರೂ ಅವನು “ಹಿಂದಿನಿಂದ ಆಡಿಕೊಳ್ಳುವುದಿಲ್ಲ” ಎಂದು (ಬೇರೆಯವರಿಂದ) ಹೇಳಿಸಿಕೊಳ್ಳುವುದು ಒಳ್ಳೆಯದು.

Tamil Transliteration
Arangooraan Alla Seyinum Oruvan
Purangooraan Endral Inidhu.

Explanations
Holy Kural #182
ಧರ್ಮವನ್ನು ಹಳಿದು ಪಾಪ ಕೃತ್ಯಗಳನ್ನು ಎಸಗುವುದಕ್ಕಿಂತ ಕೆಟ್ಟದು, ಹಿಂದಿನಿಂದ ಹಳಿದು ಎದುರಿಗೆ ತೋರಿಸುವ ಕಪಟ ನಗೆ.

Tamil Transliteration
Aranazheei Allavai Seydhalin Theedhe
Puranazheeip Poiththu Nakai.

Explanations
Holy Kural #183
ಹಿಂದಿನಿಂದ ಅಡಿಕೊಂಡು, ಸುಳ್ಳು ಹೇಳುತ್ತ ಉಸಿರಿಟ್ಟುಕೊಂಡು ಬಾಳುವುದಕ್ಕಿಂತ, ಸಾಯುವುದು ಧರ್ಮವು ಸಾರುವ ಸಿರಿಯನ್ನು ತರುತ್ತದೆ.

Tamil Transliteration
Purangoorip Poiththuyir Vaazhdhalin Saadhal
Arangootrum Aakkath Tharum.

Explanations
Holy Kural #184
ಕಣ್ಣೆದುರಿನಲ್ಲಿ ನಿಂತು ನಿರ್ದಾಕ್ಷಿಣ್ಯವಾಗಿ ಆಡಿದರೂ ತಪ್ಪಲ್ಲ; ಹಿಂದಿನಿಂದ ವಿಚಾರಮಾಡದ ಮಾತುಗಳನ್ನು ಆಡಬಾರದು.

Tamil Transliteration
Kannindru Kannarach Chollinum Sollarka
Munnindru Pinnokkaach Chol.

Explanations
Holy Kural #185
ಮನಸ್ಸಿಲ್ಲದಿದ್ದರೂ ಧರ್ಮವನ್ನು ಹೊಗಳಿ ಆಡುವವನ ಪೊಳ್ಳುತನವು, ಅವನ ಹಿಂದಿನಿಂದ ಆಡಿಕೊಳ್ಳುವ ಕೀಳುಗುಣದಿಂದ ಬಯಲಾಗುತ್ತದೆ.

Tamil Transliteration
Aranjollum Nenjaththaan Anmai Puranjollum
Punmaiyaar Kaanap Patum.

Explanations
Holy Kural #186
ಪರನಿಂದೆ ಮಾಡುವವನ ದೋಷಗಳನ್ನೂ ಇತರರು ಸಮಯವರಿತು ಆಡಿ ಅವನನ್ನು ನಿಂದೆಗೆ ಗುರಿಮಾಡುತ್ತಾರೆ.

Tamil Transliteration
Piranpazhi Kooruvaan Thanpazhi Yullum
Thirandherindhu Koorap Patum.

Explanations
Holy Kural #187
ಸ್ನೇಹದ ಮಾತುಗಳನ್ನಾಡಿ ಗೆಳೆತನವನ್ನು ಬೆಳಸಿಕೊಳ್ಳಲರಿಯದವರು, ಹಿಂದಿನಿಂದ ಭೇದದ ಮಾತುಗಳನ್ನಾಡಿ ಗೆಳೆಯರನ್ನು ಅಗಲಿಸುವರು

Tamil Transliteration
Pakachchollik Kelirp Pirippar Nakachcholli
Natpaatal Thetraa Thavar.

Explanations
Holy Kural #188
ಸಮೀಪದ ಒಡನಾಡಿಗಳ (ಬಂಧುಗಳ) ದೋಷವನ್ನು ಹಿಂದಿನಿಂದ ಎತ್ತಿ ಆಡಿ, ಅಪಪ್ರಚಾರ ಮಡುವ ಗುಣವುಳ್ಳವರು ತಮಗೆ ಅಪರಿಚಿತರಾದ ವ್ಯಕ್ತಿಗಳ ಬಗ್ಗೆ ಏನು ತಾನೆ ಮಾಡಲಾರರು.

Tamil Transliteration
Thunniyaar Kutramum Thootrum Marapinaar
Ennaikol Edhilaar Maattu.

Explanations
Holy Kural #189
ಒಬ್ಬರನ್ನು ಹಿಂದಿನಿಂದ ಆಡಿಕೊಳ್ಳುವವನ ಭಾರವನ್ನು ಭೂಮಿಯು “ಹೊರುವುದು ತನ್ನ ಧರ್ಮ” ವೆಂದು ತಿಳಿದು ತಾಳಿಕೊಳ್ಳುವುದಲ್ಲವೆ?

Tamil Transliteration
Arannokki Aatrungol Vaiyam Purannokkip
Punsol Uraippaan Porai.

Explanations
Holy Kural #190
ಪರರ ಕುಂದುಗಳನ್ನು ಕಾಣುವಂತೆ ತನ್ನ ಕುಂದುಗಳನ್ನೂ ಕಾಣಬಲ್ಲವನಾದರೆ ನೆಲೆಯಾದ ಬಾಳಿಗೆ ಕೇಡುಂಟೆ?

Tamil Transliteration
Edhilaar Kutrampol Thangutrang Kaankirpin
Theedhunto Mannum Uyirkku.

Explanations
🡱