ತಿರಸ್ಕಾರ

Verses

Holy Kural #1302
ಆಹಾರದಲ್ಲಿ ಉಪ್ಪು ಹಿತವಾಗಿ ಬರೆತಂತೆ ಪ್ರಣಯ ಕಲಹ ಕೂಡ; ಅದನ್ನು ಅತಿಯಾಗಿ ಬಳಸುವುದು, ಉಪ್ಪನ್ನು ಆಹಾರದಲ್ಲಿ
ಸ್ವಲ್ಪ ಹೆಚ್ಚಾಗಿ ಸೇರಿಸಿದಂತೆ

Tamil Transliteration
Uppamain Thatraal Pulavi Adhusiridhu
Mikkatraal Neela Vital.

Explanations
Holy Kural #1303
ಪ್ರಣಯ ಕಲಹದಿಂದ ಮುನಿಸಿಕೊಂಡು ದೂರವಿರುವ ಪ್ರಿಯತಮೆಯೊಂದಿಗೆ ಆಗ್ರಘಪಟ್ಟು, ಅವಳನ್ನು ಆಲಿಂಗನ
ಮಾಡಿಕೊಳ್ಳದೆ ಬಿಡುವುದು, ಸುಃಖದಿಂದ ನೊಂದವರನ್ನು ಮತ್ತಷ್ಟು ವೇದನೆಗೆ ಗುರಿಮಾಡಿದಂತೆ.

Tamil Transliteration
Alandhaarai Allalnoi Seydhatraal Thammaip
Pulandhaaraip Pullaa Vital.

Explanations
Holy Kural #1304
ಪ್ರಣಯ ಕಲಹದಲ್ಲಿ ಮುನಿಸಿಕೊಂಡವರನ್ನು ಸಮಾಧಾನಪಡಿಸಿ ಪ್ರೀತಿ ತೋರದಿರುವುದು ಮೊದಲೇ ಬಾಡುತ್ತಿರುವ
ಬಳ್ಳಿಯ ಬೇರನ್ನೇ ಕತ್ತರಿಸಿ ಹಾಕಿದಂತೆ.

Tamil Transliteration
Ooti Yavarai Unaraamai Vaatiya
Valli Mudhalarin Thatru.

Explanations
Holy Kural #1305
ಹೂವಿನಂತಹ ಕಣ್ಣುಗಳುಳ್ಳ ಕಾಮಿನಿಯರು ತೋರುವ ಪ್ರಣಯದ ಮುನಿಸಿನ ಸೊಬಗು, ಒಳ್ಳೆಯ ಗುಣವುಳ್ಳ ಸತ್ವರುಷರಿಗೆ
ಮರಗು ನೀಡುವುದು.

Tamil Transliteration
Nalaththakai Nallavarkku Eer Pulaththakai
Pooanna Kannaar Akaththu.

Explanations
Holy Kural #1306
ಪ್ರಣಯದ ಮುನಿಸೂ, ತಿರಸ್ಕಾರವೂ ಇಲ್ಲದ ಕಾಮಸುಖ, ಕಳಿತ ಹಣ್ಣೆನಂತೆಯೂ ಇನ್ನೂ ಮಾಗದ ಮಿಡಿಕಾಯಂತೆಯೂ-
ನಿಷ್ಫಲವಾಗಿ ಹೋಗುತ್ತದೆ.

Tamil Transliteration
Thuniyum Pulaviyum Illaayin Kaamam
Kaniyum Karukkaayum Atru.

Explanations
Holy Kural #1307
ಕೂಡಿ ಸುಖಿಸುವ ಪ್ರೀತಿಯು ಇನ್ನು ಮೇಲೆ ಹೆಚ್ಚು ಕಾಲ ಇರುವುದೋ ಇಲ್ಲವೋ ಎಂದು ಪರಿತಾಪದಿಂದ
ಆಲೋಚಿಸುವುದರಿಂದ, ಪ್ರಣಯ ಕೋಪದಲ್ಲಿಯೂ ಕೂಡ ಒಂದು ವಿಧವಾದ ದುಃಖವು ಹುದುಗಿರುತ್ತದೆ.

Tamil Transliteration
Ootalin Untaangor Thunpam Punarvadhu
Neetuva Thandru Kol Endru.

Explanations
Holy Kural #1308
ತನ್ನಿಂದ ಪ್ರಿಯನು ನೊಂದಿರುವನೆಂದು, ಅರಿಯಬಲ್ಲ ಪ್ರಿಯತಮೆಯು ಇಲ್ಲದಿರುವಾಗ, ಹಾಗೆ ದುಃಖಿಸುವುದರಿಂದ ಫಲವೇನು?

Tamil Transliteration
Nodhal Evanmatru Nondhaarendru Aqdhariyum
Kaadhalar Illaa Vazhi.

Explanations
Holy Kural #1309
ತಂಪಾದ ನೆಳಲಲ್ಲಿರುವ ನೀರು ಸಿಹಿಯಾಗಿರುವಂತೆ ಪ್ರಿಯರಾದವರೆಡೆಯಲ್ಲಿ ಪ್ರಣಯದ ಮುನಿಸೂ ಮಧುರವೆನ್ನಿಸುತ್ತದೆ.

Tamil Transliteration
Neerum Nizhaladhu Inidhe Pulaviyum
Veezhunar Kanne Inidhu.

Explanations
Holy Kural #1310
ಪ್ರಣಯದ ಮುನಿಸಿನಲ್ಲಿ, ಅರ್ಥಮಾಡಿಕೊಳ್ಳದೆ ಸೊರಗಿ ಬಿಟ್ಟುಹೋಗಿತ್ತಿರುವ,
ಪ್ರಿಯತಮೆಯಲ್ಲಿ ನನ್ನ ಮನಸ್ಸು ಕೂಡಲೆಳಸುವುದಕ್ಕೆ ಕಾರಣ, ಅವಳ ಮೇಲಿನ ಪ್ರಬಲವಾದ ಇಚ್ಚೆಯಲ್ಲದೆ, ಬೇರೆಯಲ್ಲ.

Tamil Transliteration
Ootal Unanga Vituvaarotu Ennenjam
Kootuvem Enpadhu Avaa.

Explanations
Holy Kural #1301
ಅವನನ್ನು (ಪ್ರಿಯತಮನನ್ನು) ಅಪ್ಪಿಕೊಲದೆ, ಪ್ರಾಣಯ ಕೋಪದಿಂದ ತಿರಸ್ಕರಿಸು! ಅವನು ಅನುಭವಿಸುವ ವಿರಹ ದುಃಖವನ್ನು
ಸ್ವಲ್ಪ ನೋಡೋಣ.

Tamil Transliteration
Pullaa Thiraaap Pulaththai Avar Urum
Allalnoi Kaankam Siridhu.

Explanations
🡱