ತೊರೆಯುವಿಕೆ

Verses

Holy Kural #341
ಒಬ್ಬನು ಯಾವ ಯಾವ ವಸ್ತುಗಳಿಂದ ಸಂಬಂಧವನ್ನು ಕಡಿದುಕೊಂಡಿರವನೋ ಆ ವಸ್ತುಗಳಿಂದ ಉಂಟಾಗುವ ಬಾಧೆಯಿಂದ ಅವನು
ಮುಕ್ತನಾಗುವನು.

Tamil Transliteration
Yaadhanin Yaadhanin Neengiyaan Nodhal
Adhanin Adhanin Ilan.

Explanations
Holy Kural #342
ದುಃಖವಿಲ್ಲದಿರುವ ನೆಲೆಯನ್ನು ಬಯಸುವುದಾದರೆ, ಎಲ್ಲ ವಸ್ತುಗಳನ್ನು ಇರುವಾಗಲೇ ತೊರೆದುಬಿಡಬೇಕು. ತೊರೆದ ಬಳಿಕ ಇಲ್ಲಿಯೇ
(ಈ ಲೋಕದಲ್ಲಿಯೇ) ಪ್ರಾಪ್ತವಾಗುವ ಸುಖಗಳು ಹಲವಿವೆ.

Tamil Transliteration
Ventin Un Taakath Thurakka Thurandhapin
Eentuiyar Paala Pala.

Explanations
Holy Kural #343
ಐದು ಇಂದ್ರಿಯಗಳ ಆಡುಂಬೋಲವನ್ನು ನಾಶಪಡಿಸಬೇಕು; ಆ ಇಂದ್ರಿಯಗಳು ಬಯಸುವ ಎಲ್ಲ ಭೋಗ ವಸ್ತುಗಳನ್ನು ಒಂದೇ ಸಾರಿಗೆ
ತೊರೆಯಬೇಕು.

Tamil Transliteration
Atalventum Aindhan Pulaththai Vitalventum
Ventiya Vellaam Orungu.

Explanations
Holy Kural #344
ಎಲ್ಲವನ್ನೂ ತೊರೆದಿರುವುದು. ತಪಸಿಗೆ ಸಹಜಗುಣವೆನಿಸುವುದು; ವಸ್ತುಗಳನ್ನು ಪಡೆದಲ್ಲಿ, ಅವು ಮತ್ತೆ ಮನಸನ್ನು ಮರುಳುಗೊಳಿಸಿ,
ತಪಸ್ಸಿನ ತನ್ಮಯತೆಯನ್ನು ಕೆಡಿಸುವುವು.

Tamil Transliteration
Iyalpaakum Nonpirkondru Inmai Utaimai
Mayalaakum Matrum Peyarththu.

Explanations
Holy Kural #345
ಹುಟ್ಟನ್ನೇ ಹರಿದುಕೊಳ್ಳಲು ಪ್ರಯತ್ನಿಸುವವರಿಗೆ ಶರೀರವೇ ಒಂದು ಹೊರೆ; ಹಾಗಿರುವಾಗ (ವಸ್ತು ಮೋಹದಿಂದ) ಮತ್ತಷ್ಟು ತೊಡರು,
ಸಂಕಟಗಳನ್ನು ಬರ ಮಾಡೀಕೊಳ್ಳುವುದೇಕೆ?

Tamil Transliteration
Matrum Thotarppaatu Evankol Pirapparukkal
Utraarkku Utampum Mikai.

Explanations
Holy Kural #346
ನಾನು ನನ್ನದು ಎಂಬ ಮೋಹವನ್ನು ಕತ್ತರಿಸಿಕೊಂಡವನು ದೇವತೆಗಳಿಗೂ ಎಟುಕದ ಎತ್ತರವಾದ ಲೋಕವನ್ನು ಸೇರುವನು.

Tamil Transliteration
Yaan Enadhu Ennum Serukku Aruppaan Vaanorkku
Uyarndha Ulakam Pukum.

Explanations
Holy Kural #347
ನಾನು ನನ್ನದೆಂಬ ವ್ಯಾಮೋಹಗಳನ್ನು ಅಂಟಿಕೊಂಡಿರುವವರನ್ನು ದುಃಖಗಳೂ ಬಿಡದೆ ಬಿಗಿಯಾಗಿ ಅಂಟಿಕೊಳ್ಳುತ್ತವೆ.

Tamil Transliteration
Patri Vitaaa Itumpaikal Patrinaip
Patri Vitaaa Thavarkku.

Explanations
Holy Kural #348
ಎಲ್ಲವನ್ನೂ ತೊರೆದವರು ಮುಕ್ತಿಯನ್ನು ಪಡೆದವರು; ತೊರೆಯದೆ ಉಳಿದವರೆಲ್ಲ ಮೈಮರೆತು (ಹುಟ್ಟು ಸಾವುಗಳ) ಬಲೆಯಲ್ಲಿ
ಸಿಲುಕಿದವರು.

Tamil Transliteration
Thalaippattaar Theerath Thurandhaar Mayangi
Valaippattaar Matrai Yavar.

Explanations
Holy Kural #349
ನಾನು ನನ್ನದು ಎಂಬ ಇಬ್ಬಗೆಯಾದ ಸಂಬಂಧ ಹರಿದು ಹೋದೊಡನೆಯೇ ಹುಟ್ಟು ಹರಿಯುವುದು; ಅದಿಲ್ಲವಾದರೆ, ಹುಟ್ಟು
ಸಾವುಗಳಿಂದ ನೆಲೆಯಿಲ್ಲದೆ ತೊಳಲಾಡಬೇಕಾಗುವುದು.

Tamil Transliteration
Patratra Kanne Pirapparukkum Matru
Nilaiyaamai Kaanap Patum.

Explanations
Holy Kural #350
ಆಶೆಯ ಬಂಧನವನ್ನು ಕತ್ತರಿಸಿಕೊಂಡವನು ದೇವರು; ನಾವಿ ಈ ಲೋಕದಲ್ಲಿರುವ ವ್ಯಾಮೋಹವನ್ನು ಕತ್ತರಿಸಿಕೊಳ್ಳಬೇಕಾದರೆ, ಆ
ದೇವರಲ್ಲಿ ಶರಣಾಗಬೇಕು.

Tamil Transliteration
Patruka Patratraan Patrinai Appatraip
Patruka Patru Vitarku.

Explanations
🡱