ನಾಡು

Verses

Holy Kural #732
ಹೇರಳವಾದ ಸಂಪತ್ತಿನಿಂದ ಹೊರದೇಶದವರೂ ಬಯಸುವುದಾಗಿ ಕೇಡಿಲ್ಲದೆ ಮಿಗಿಲಾಗಿ ಬೆಳೆಯುವುದೇ ನಾಡೆನಿಸಿಕೊಳ್ಳುವುದು.

Tamil Transliteration
Perumporulaal Pettakka Thaaki Arungettaal
Aatra Vilaivadhu Naatu.

Explanations
Holy Kural #733
(ನೆರೆನಾಡ ಅರಸನು ದಾಳಿಯಿಡುವುದರಿಂದ) ಒಮ್ಮೆಲೇ ತನ್ನ ಮೇಲೆ ಬರುವ ಹೊರೆಯನ್ನು ಸಹಿಸಿಕೊಂಡು, ತನ್ನ ಅರಸರಿಗೆ, ಕಂದಾಯ
ತರಿಗೆಗಳನ್ನು ಪೂರ್ತಿಯಾಗಿ ಸಲ್ಲಿಸಿಕೊಂಡು ಬರುವುದೇ ನಾಡು ಎನಿಸಿಕೊಳ್ಳುವುದು.

Tamil Transliteration
Poraiyorungu Melvarungaal Thaangi Iraivarku
Iraiyorungu Nervadhu Naatu.

Explanations
Holy Kural #734
ಕಡುತರವಾದ ಹಸಿವೂ, ತೀರದ ರೋಗರುಜೀನಗಳೂ ಕೊಲ್ಲುವ ಹಗೆತನವೂ ಸೇರವಂತೆ, ಸ್ವಾಭಾವಿಕವಾಗಿ ನಡೆದು ಬರುವುದೇ
ನಾಡೆನಿಸಿಕೊಳ್ಳುವುದು.

Tamil Transliteration
Urupasiyum Ovaap Piniyum Serupakaiyum
Seraa Thiyalvadhu Naatu.

Explanations
Holy Kural #735
ಹಲವು ರೀತಿಯ ದುಷ್ಟ ಕೂಟಗಳು, ಕೇಡುಂಟು ಮಾಡುವ, ಒಳನಾಡಿನ ಹಗೆಯೂ, ಅರಸನನ್ನು ಭೀತಿಗೀಡು ಮಾಡುವ ಕೊಲೆ ಸಂಚಿನ
ಗುಂಪ್ರಗಳೂ ಇಲ್ಲದಿರುವುದೇ ನಾಡೆನಿಸಿಕೊಳ್ಳುವುದು.

Tamil Transliteration
Palkuzhuvum Paazhseyyum Utpakaiyum Vendhalaikkum
Kolkurumpum Illadhu Naatu.

Explanations
Holy Kural #736
ಹಗೆಗಳಿಂದ ಕೇಡರಿಯದೆ, ಕೆಟ್ಟ ಕಾಲದಲ್ಲೂ ಏಳಿಗೆಯೂ ಕುಂದದಂತೆ ಇರುವ ನಾಡು, ನಾಡುಗಳಲ್ಲೆಲ್ಲಾ ಹಿರಿಮೆಯುಳ್ಳದು ಎಂದು
(ಬಲ್ಲವರು) ಹೇಳುವರು.

Tamil Transliteration
Ketariyaak Ketta Itaththum Valangundraa
Naatenpa Naattin Thalai.

Explanations
Holy Kural #737
ಹರಿಯುವ ತೊರೆಗಳಿಂದ ಮತ್ತು ಮಳೆಯಿಂದ ಉಂಟಾಗುವ ಎರಡು ಬಗೆಯ ನೀರಿನ ಸಂಪತ್ತೂ ಸ್ವಾಭಾವಿಕವಾಗಿ ವ್ಯಾಪಿಸಿರುವ
ಮಲೆಗಳೂ, ಅಲ್ಲಿಂದ ಹರಿದು ಬರುವ ನದಿಯ ನೀರೂ ಬಲವಾದ ಕೋಟೆಯೂ ನಾಡಿಗೆ ಅವಶ್ಯಕವಾದ ಅಂಗಗಳೆನಿಸುವುವು.

Tamil Transliteration
Irupunalum Vaaindha Malaiyum Varupunalum
Vallaranum Naattirku Uruppu.

Explanations
Holy Kural #738
ನೀರೋಗತನ, ಐಸಿರಿ, (ಸಮೃದ್ಧ) ಬೆಳೆ, ತೃಪ್ತಿಯ ಜೀವನ, (ಪ್ರಜಾ) ರಕ್ಷಣೆ ಈ ಐದು ನಾಡಿಗೆ ಅಲಂಕಾರ ಎಂದು ಹೇಳುವುದು.

Tamil Transliteration
Piniyinmai Selvam Vilaivinpam Emam
Aniyenpa Naattiv Vaindhu.

Explanations
Holy Kural #739
ಪ್ರಯತ್ನವಿಲ್ಲದೆಯೇ ಸ್ವಾಭಾವಿಕವಾಗಿ ಸಿರಿಯನ್ನು ಬೆಳೆಸುವ ನಾಡು ನಾಡೆನ್ನುವರು. ಪ್ರಯತ್ನ ಮಾತ್ರದಿಂದ (ಶ್ರಮಪಟ್ಟು)
ಅಭ್ಯುದಯವನ್ನು ಪಡೆಯುವ ನಾಡು ನಾಡಲ್ಲ.

Tamil Transliteration
Naatenpa Naataa Valaththana Naatalla
Naata Valandharu Naatu.

Explanations
Holy Kural #740
ಮೇಲೆ ತಿಳಿಸಿದ ಎಲ್ಲಾ ಗುಣಗಳನ್ನು ಹೊಂದಿದ ಮೇಲೂ, ಆ ನಾಡಿನಲ್ಲಿ ಒಳ್ಳೆಯ ಪ್ರಭುತ್ವವಿಲ್ಲವಾದರೆ, ಅದು ವ್ಯರ್ಥವಾಗಿ
ಹೋಗುವುದು.

Tamil Transliteration
Aangamai Veydhiyak Kannum Payamindre
Vendhamai Villaadha Naatu.

Explanations
Holy Kural #731
ಕೊರೆಯಿಲ್ಲದ ಕೃಷಿ ಸಂಪತ್ತು, ಯೋಗ್ಯರಾದ ಅರಿತವರು ಮತ್ತು ಕೇಡೀಲ್ಲದ ಸಂಪತ್ತುಳ್ಳ ವಣಿಜರೂ ಕೂಡಿಕೊಂಡಿರುವುದೇ
ನಾಡೆನಿಸಿಕೊಳ್ಳುವುದು.

Tamil Transliteration
Thallaa Vilaiyulum Thakkaarum Thaazhvilaach
Chelvarum Servadhu Naatu.

Explanations
🡱