ನಿಜವನ್ನು ತಿಳಿತುವುದು

Verses

Holy Kural #351
ನಿಜವಲ್ಲದವುಗಳನ್ನು ನಿಜವೆಂದು ಭಾವಿಸುವ ಮರಳುತನದಿಂದ ಕೀಳಾದ ಹುಟ್ಟು ಸಂಭವಿಸುವುದು.

Tamil Transliteration
Porulalla Vatraip Porulendru Unarum
Marulaanaam Maanaap Pirappu.

Explanations
Holy Kural #352
ತಮ್ಮನ್ನು ಆದರಿಸಿರುವ ಭ್ರಮೆಯನ್ನು ತೊರೆದು, ಶುದ್ದವಾದ ದರ್ಶನದಿಂದ ಲೋಕವನ್ನು ನೋಡುವವರಿಗೆ ಭವದ ಕತ್ತಲು ಹರಿದು
ಸುಖದ ನೆಲೆ ಪ್ರಾಪ್ತವಾಗುವುದು.

Tamil Transliteration
Irulneengi Inpam Payakkum Marulneengi
Maasaru Kaatchi Yavarkku.

Explanations
Holy Kural #353
ಸಂದೇಹವಿಲ್ಲದ ನಿರ್ಮಲ ಮನಸ್ಸಿನಿಂದ ನಿಜವನ್ನು ತಿಳಿದವರಿಗೆ, ವಾಸಿಸುತ್ತಿರುವ ಭೂಲೋಕಕ್ಕಿಂತ, ದೇವಲೋಕವೇ
ಸಮೀಪವೆನಿಸುವುದು.

Tamil Transliteration
Aiyaththin Neengith Thelindhaarkku Vaiyaththin
Vaanam Naniya Thutaiththu.

Explanations
Holy Kural #354
ಪಂಚೇಂದ್ರಿಯಗಳ ವಾಸನೆಯನ್ನು ಗೆದ್ದು ಐದು ಬಗೆಯ ಅರಿವುಗಳನ್ನು ಪಡೆದಿದ್ದರೂ, ನಿಜ ತತ್ವದರಿವಿಲ್ಲದವರಿಗೆ ಅದರಿಂದ ಫಲ
ಉಂಟಾಗುವುದಿಲ್ಲ.

Tamil Transliteration
Aiyunarvu Eydhiyak Kannum Payamindre
Meyyunarvu Illaa Thavarkku.

Explanations
Holy Kural #355
ಯಾವ ವಸ್ತು ಯಾವ ರೀತಿಯಲ್ಲಿ ತೋರಿದರೂ (ಆ ತೋರಿಕೆಯನ್ನೇ ನಿಜವೆಂದು ಭಾವಿಸದೆ) ಅವರ ನಿಜವಾದ ಅರ್ಥವನ್ನು
ತಿಳಿದುಕೊಳ್ಳುವುದೇ ಅರಿವು ಎನಿಸಿಕೊಳ್ಳುತ್ತದೆ.

Tamil Transliteration
Epporul Eththanmaith Thaayinum Apporul
Meypporul Kaanpadhu Arivu.

Explanations
Holy Kural #356
ಕಲಿಯಬೇಕಾದುದನ್ನು ಕಲಿತುಕೊಂಡು, ಇಲ್ಲಿಯೇ ನಿಜದ ಹುರುಳನ್ನು ಕಂಡವರು ಮತ್ತೆ ಈ ಹುಟ್ಟಿಗೆ ಬಾರದಿರುವ ಮಾರ್ಗವನ್ನು
ಪಡೆದುಕೊಳ್ಳುವರು. (ಮೋಕ್ಷವನ್ನು ಪಡೆಯುವರು)

Tamil Transliteration
Katreentu Meypporul Kantaar Thalaippatuvar
Matreentu Vaaraa Neri.

Explanations
Holy Kural #357
ಒಬ್ಬನ ಮನಸ್ಸು ನಿಜ ವಸ್ತುವನ್ನು ಇರಿವಂತೆಯೇ ನಿಶ್ಚಯವಾಗಿ ಅರ್ಥಮಾಡಿಕೊಂಡರೆ, ಅವನಿಗೆ ಮತ್ತೆ ಮರುಹುಟ್ಟು ಇರುವುದೆಂದು
ಭಾವಿಸಬಾರದು.

Tamil Transliteration
Orththullam Ulladhu Unarin Orudhalaiyaap
Perththulla Ventaa Pirappu.

Explanations
Holy Kural #358
ನಿಜ ತತ್ವವನ್ನು ಮರೆಸಿ ತರೆದ ದುಃಖಗಳನ್ನು ತಂದೊಡ್ಡುವುದರಿಂದ ಹುಟ್ಟನ್ನು ಅಜ್ಞಾನವೆಂದು ತಿಳಿದು ಹರಿದುಕೊಳ್ಳಬೇಕು; ಹಾಗಿ
ಹುಟ್ಟೆಂಬ ಅಜ್ಞಾನವನ್ನು ತೊರೆದು ಮುಕ್ತಿಯ ನೆಲೆಗೆ ಕಾರಣನಾದ ಪರವಸ್ತುವನ್ನು ತಿಳಿಯುವುದೇ ನಿಜವಾದ ಅರಿವು.

Tamil Transliteration
Pirappennum Pedhaimai Neengach Chirappennum
Semporul Kaanpadhu Arivu.

Explanations
Holy Kural #359
ಎಲ್ಲಾ ಸತ್ಯಗಳಿಗೂ ಆಶ್ರಯವಾದ ಪರವಸ್ತುವನ್ನು ಅರಿತು, ಮಮಕಾರಗಳ ಆಶ್ರಯವನ್ನು ನಾಶಪಡಿಸಿಕೊಂಡರೆ, ಒಂದು ಸೇರಲಿರುವ
ದುಃಖಗಳೊಂದೂ ಬಳಿಸಾರುವುದಿಲ್ಲ.

Tamil Transliteration
Saarpunarndhu Saarpu Ketaozhukin Matrazhiththuch
Chaardharaa Saardharu Noi.

Explanations
Holy Kural #360
ನಿಜ ತತ್ವವನ್ನು ತಿಳಿದು, ಕಾಮ, ಕ್ರೋಧ, ಮೋಹಗಳೆಂಬ ಮೂರರ ಹೆಸರೂ ಕೆಡುವಂತೆ ನಡೆದುಕೊಂಡರೆ, ಅವುಗಳಿಂದುಂಟಾಗುವ
ದುಃಖಗಳೂ ಅಳಿಯುತ್ತದೆ.

Tamil Transliteration
Kaamam Vekuli Mayakkam Ivaimundran
Naamam Ketakketum Noi.

Explanations
🡱