ನೆರವಿಗೆ ಬಾರದ ಸಿರಿ

Verses

Holy Kural #1001
ಒಬ್ಬನು ಮನೆತುಂಬ ಹೇರಳವಾದ ಸಿರಿಯನ್ನು ಸಂಗ್ರಹಿಸಿಟ್ಟು ಅದನ್ನು ಅನುಭವಿಸದೆ ಹೋದಲ್ಲಿ, ಬದುಕ್ಕಿದ್ದೂ ಸತ್ತಹಾಗೆ;
ಆ ಸಿರಿಯಿಂದ ಯಾವ ಉಪಯೋಗವೂ ಇಲ್ಲವಾಗುವುದು.

Tamil Transliteration
Vaiththaanvaai Saandra Perumporul Aqdhunnaan
Seththaan Seyakkitandhadhu Il.

Explanations
Holy Kural #1002
ಸಿರಿಯಿಂದಲೇ ಎಲ್ಲ (ಸುಖ ಸಾಧನಗಳು) ಉಂಟಾಗುವುದೆಂದು ತಿಳಿದು ಪರರಿಗೆ ಕೂಡದಿರುವ ಕೈಪಣತನದ ಭ್ರಮೆಯಿಂದ
ಕೀಳಾದ ಜನ್ಮ ಉಂಟಾಗುವುದು.

Tamil Transliteration
Porulaanaam Ellaamendru Eeyaadhu Ivarum
Marulaanaam Maanaap Pirappu.

Explanations
Holy Kural #1003
ಕೂಡಿಟ್ಟ ಸಿರಿಯನ್ನೇ ಬಯಸುತ್ತ (ಶಾಶ್ವತವಾದ) ಕೀರ್ತಿಯನ್ನು ಕಡೆಗಣಿಸುವ ಜನರ ಬಾಳು, ಭೂಮಿಗೆ ಭಾರವಾಗುರುವುದು.

Tamil Transliteration
Eettam Ivari Isaiventaa Aatavar
Thotram Nilakkup Porai.

Explanations
Holy Kural #1004
ಪರೋಪಕಾರ ಗುಣದಿಂದ ಒಬ್ಬರ ಪ್ರೀತಿಗೂ ಪಾತ್ರನಾಗದವನು, ತಾನು ಸತ್ತಮೇಲೆ ತನ್ನ ಬಳಿ ಯಾವುದು ಸ್ಥಿರವಾಗಿ
ಉಳಿಯುವುದೆಂದು ಭಾವಿಸುತ್ತಾನೆ?

Tamil Transliteration
Echchamendru Enennung Kollo Oruvaraal
Nachchap Pataaa Thavan.

Explanations
Holy Kural #1005
ಪರರಿಗೆ ಕೊಡುವ ಉದಾರ ಬುದ್ಧಿಯಾಗಲೀ, ತಾನು ಅನುಭವಿಸಿ ಸುಖಪಡುವ ಧಾರಾಳ ಬುದ್ಧಿಯಾಗಲೀ ಇಲ್ಲದವರಿಗೆ
ಮೇಲೆ ಮೇಲೆ ಹೇರಿಸಿಟ್ಟ ಹಣ ಕೋಟಿಗಟ್ಟಲೆ ಬಂದೂದಗಿದರೂ ಅದರಿಂದ ಪ್ರಯೋಜನವಿಲ್ಲ.

Tamil Transliteration
Kotuppadhooum Thuyppadhooum Illaarkku Atukkiya
Kotiyun Taayinum Il.

Explanations
Holy Kural #1006
ತಾನು ಅನುಭವಿಸದೆ, ತಕ್ಕವರಿಗೆ ಕೊಟ್ಟು ನೆರವಾಗುವ ಸ್ವಭಾವವೂ ಇಲ್ಲದೆ ಬಾಳುವವನು, ತನ್ನಲಿರುವ ಹೇರಳವಾದ
ಹಣಕ್ಕೆ ತಾನೇ ಕುತ್ತಾಗಿ ಪರಿಣಮಿಸುವನು.

Tamil Transliteration
Edham Perunjelvam Thaandhuvvaan Thakkaarkkondru
Eedhal Iyalpilaa Thaan.

Explanations
Holy Kural #1007
ಕೈಲಾಗದ ಬಡ ಜನರಿಗೆ ಸಹಾಯ ಮಾಡದವನ ಸಿರಿಯು, ಅತಿ ಸುಂದರಿಯಾದ ಒಬ್ಬ ಹೆಣ್ಣು (ಗಂಡನಿಲ್ಲದೆ) ಏಕಾಂಗಿಯಾಗಿ
ಬಾಳಿ ಮುದುಕಿಯಾದಂತೆ.

Tamil Transliteration
Atraarkkondru Aatraadhaan Selvam Mikanalam
Petraal Thamiyalmooth Thatru.

Explanations
Holy Kural #1008
ಪರೋಪಕಾರ ಗುಣವಿಲ್ಲದೆ ಯಾರಿಗೂ ಬೇಡಾದವನ ಸಿರಿಯು ಊರಿನ ಮಧ್ಯದಲ್ಲಿ ವಿಷಪೂರಿತವಾದ ಇಟ್ಟಿಯ ಮರವು
ಫಲ ಬಿಟ್ಟಂತೆ.

Tamil Transliteration
Nachchap Pataadhavan Selvam Natuvoorul
Nachchu Marampazhuth Thatru.

Explanations
Holy Kural #1009
ಪ್ರೀತಿ ಇಲ್ಲದೆ. ತನ್ನನ್ನು ಕಷ್ಟಕ್ಕೆ ಗುರಿಪಡಿಸಿಕೊಂಡು, ಧರ್ಮವನ್ನು ಲೆಕ್ಕಿಸದೆ, ಸೇರಿಸಿಟ್ಟ ಒಬ್ಬನ ಹೇರಳವಾದ ಸಿರಿಯನ್ನು
(ಕೊನೆಯಲ್ಲಿ) ಪಡೆದು ಅನುಭವಿಸುವವರು ಬೇರೆಯವರೇ.

Tamil Transliteration
Anporeeith Tharsetru Aranokkaadhu Eettiya
Onporul Kolvaar Pirar.

Explanations
Holy Kural #1010
ಕೀರ್ತಿಶಾಲಿಗಳಾದ ಸಿರಿವಂತರ ಅಲ್ಪ ಕಾಲದ ಬಡತನವು, ಲೋಕದನೆಲೆಗೆ ಕಾರಣವಾದ ಮೋಡಗಳು ಆಕಾಶದಲ್ಲಿ
ಚೆದುರಿ ಬಡವಾದಂತೆ.

Tamil Transliteration
Seerutaich Chelvar Sirudhuni Maari
Varangoorn Thanaiyadhu Utaiththu.

Explanations
🡱