ಪಡೆಯ ಕೆಚ್ಚು

Verses

Holy Kural #771
ಹಗೆಗಳೇ, ತನ್ನ ನಾಯಕನ ಮುಂದೆ ಎದುರಿಸಿ ನಿಲ್ಲಬೇಡಿರಿ! ಹಾಗೆ ಮಾಡಿದವರನೇಕರು ಕಲ್ಲಾಗಿ ನಿಂತಿದ್ದಾರೆ.

Tamil Transliteration
Ennaimun Nillanmin Thevvir Palarennai
Munnindru Kalnin Ravar.

Explanations
Holy Kural #772
ಕಾಡಿನಲ್ಲಿ ಮೊಲಕ್ಕೆ ಗುರಿತಾಗುವಂತೆ ಹೊಡೆದ ಅಂಬಿಗಿಂತ, ಆನೆಯ ಮೇಲೆ ಹೊಡೆದು ಗುರಿ ತಪ್ಪಿದ ಶೂಲವನ್ನು ಹೊದಿರುವುದೇ
ಮೇಲು.

Tamil Transliteration
Kaana Muyaleydha Ampinil Yaanai
Pizhaiththavel Endhal Inidhu.

Explanations
Holy Kural #773
(ಹಗೆಯನ್ನು ಎದುರಿಸುವ) ವೀರತ್ವವನ್ನು ಅತಿದೊಡ್ಡ ಶೌರ್ಯ ಪ್ರದರ್ಶನವೆಂದು ಹೇಳುವರು. ಅದೇ ಹಗೆಗೆ ಆಪತ್ತು ಬಂದಾಗ
ಉದಾರವಾಗಿ ನಡೆದುಕೊಳ್ಳುವುದು ಶೌರ್ಯದ ಪರಮಾವಧಿಯಾಗುವುದು.

Tamil Transliteration
Peraanmai Enpa Tharukanon Rutrakkaal
Ooraanmai Matradhan Eqku.

Explanations
Holy Kural #774
ತನ್ನ ಕೈಯಲ್ಲಿದ್ದ ಶೂಲದಿಂದ ಎದುರಿಸಿ ಬಂದ ಆನೆಯನ್ನು ತಿವಿದು ಬೇರೊಂದು ಆನೆಯನ್ನು ತಿವಿಯಲು ಶೂಲಕ್ಕಾಗಿ ಅರಸುತ್ತ ಬಂದ
ಯೋಧನು, ತನ್ನ ಮೈಮೇಲೆ ಶೂಲವೊಂದು ಬಂದು ನಾಟಲು, ಅದನ್ನು ಕಿತ್ತು ತೆಗೆಯುತ್ತ ಆನಂದಪಡುವನು.

Tamil Transliteration
Kaivel Kalitrotu Pokki Varupavan
Meyvel Pariyaa Nakum.

Explanations
Holy Kural #775
ಹಗೆಗಳನ್ನು ಕೋಪದಿಂದ ಅಗಲಿಸಿ ನೋಡುವ ಕಣ್ಣು, ಅವರು ಶೂಲದಿಂದ ಇರಿಯುವಾಗ, ಆ ನೋವನ್ನು ತಾಳಲಾರದೆ, ಒಮ್ಮೆ ಮುಚ್ಚಿ
ತರೆದರೆ, ಅದು ಶೂರರಾದವರಿಗೆ ಸೋಲಿನ ಸಮಾನವಲ್ಲವೆ?

Tamil Transliteration
Vizhiththakan Velkona Teriya Azhiththimaippin
Ottandro Vanka Navarkku.

Explanations
Holy Kural #776
ವೀರನಾದವನು, ತಾನು (ಯುದ್ಧದಲ್ಲಿ) ಕಳೆದ ದಿನಗಳ ಲೆಕ್ಕ ಇಟ್ಟು, ಅವುಗಳಲ್ಲಿ ತೀವ್ರವಾದ ಗಾಯಗಳನ್ನು ಹೊಂದದಿರುವ
ದಿನಗಳೆಲ್ಲ ವ್ಯರ್ಥವಾಯಿತೆಂದು ಭಾವಿಸುತ್ತಾನೆ.

Tamil Transliteration
Vizhuppun Pataadhanaal Ellaam Vazhukkinul
Vaikkumdhan Naalai Etuththu.

Explanations
Holy Kural #777
ಬಿರುಗಾಳಿಯಂತೆ ಭೂಮಿಯಲ್ಲಿ ವ್ಯಾಪಿಸುವ ಕೀರ್ತಿಯನ್ನು ಬಯಸಿ ಪ್ರಾಣವನ್ನು ಲೆಕ್ಕಿಸದ ವೀರರು, ಕಾಲಿಗೆ ಕಟ್ಟುವ ವೀರ ಕಡಗವು
ಅವರಿಗೆ ಅಲಂಕಾರವಾಗಿ ಶೋಭಿಸುವುದು.

Tamil Transliteration
Suzhalum Isaiventi Ventaa Uyiraar
Kazhalyaappuk Kaarikai Neerththu.

Explanations
Holy Kural #778
ಯುದ್ಧ ಸಂಭವಿಸಿದಾಗ ಪ್ರಾಣಕ್ಕೆ ಹೆದರದಿರುವ ಯೋಧರು, ತಮ್ಮ ಅರಸನು, ಕೋಪದಲ್ಲಿ ಯ್ಯುದ್ಧವನ್ನು ಹಿಂದೆಗೆದುಕೊಂಡರೂ,
ತಮ್ಮ ಶೌರ್ಯದಲ್ಲಿ ಕುಂದುವುದಿಲ್ಲ.

Tamil Transliteration
Urinuyir Anjaa Maravar Iraivan
Serinum Seerkundral Ilar.

Explanations
Holy Kural #779
ತಾವು ಕೈಗೊಂಡ ಪ್ರತಿಜ್ಞೆಯನ್ನು ತಪ್ಪದೆ ನಡಿಸಿ ಸಾಯಲು ಸಿದ್ಧರಾಗಿರುವವರನ್ನು ಅವರು ತಪ್ಪಿದರೆಂದು ಹೇಳಿ ದಂಡಿಸುವ ಹಕ್ಕು
ಯಾರಿಗಿದೆ?

Tamil Transliteration
Izhaiththadhu Ikavaamaich Chaavaarai Yaare
Pizhaiththadhu Orukkir Pavar.

Explanations
Holy Kural #780
ಪೂರೆಯುವ ಅರಸರ ಕಣ್ಣುಗಳು ಕಂಬನಿಯಿಂದ ತುಂಬುವಂತೆ (ಯುದ್ಧದಲ್ಲಿ) ಸಾವನ್ನಪ್ಪುವುದಾದರೆ, ಅಂಥ ಸಾವನ್ನು ಭಿಕ್ಷೆಯೆತ್ತಿಯಾದರೂ ಪಡೆದುಕೊಳ್ಳಬೇಕು.

Tamil Transliteration
Purandhaarkan Neermalkach Chaakirpin Saakkaatu
Irandhukol Thakkadhu Utaiththu.

Explanations
🡱