ಪೀಠಿಕೆ- ದೈವಸ್ತುತಿ

Verses

Holy Kural : #1 #2 #3 #4 #5 #6 #7 #8 #9 #10
Holy Kural #1
ಅಕ್ಷರಗಳಿಗೆಲ್ಲಾ ಅಕಾರವೇ ಮೊದಲು, ಲೋಕಕ್ಕೆಲ್ಲಾ ಮೊದಲು ಆದಿ ಭಗವನ್

Tamil Transliteration
Akara Mudhala Ezhuththellaam Aadhi
Pakavan Mudhatre Ulaku.

Explanations
Holy Kural #2
ಪರಮ ಶುದ್ದಜ್ಞಾನ ಸ್ವರೂಪದ ಭಗವಂತನ ಸತ್ ಪಾದಗಳಿಗೆ ನಮಿಸದಿದ್ದರೆ ಕಲಿತಂದರಿಂದಾದ ಫಲವೇನು ?

Tamil Transliteration
Katradhanaal Aaya Payanenkol Vaalarivan
Natraal Thozhaaar Enin.

Explanations
Holy Kural #3
ಮಲರೊಳುಜ್ಜೀವಿಸುವವನ ಪರಮ ಪಾದಗಳನ್ನು ಸೇರಿದವರು ಭೂಮಿಯ ಮೇಲೆ ನಿಡುಗಾಲ ಬಾಳುವರು

Tamil Transliteration
Malarmisai Ekinaan Maanati Serndhaar
Nilamisai Neetuvaazh Vaar.

Explanations
Holy Kural #4
ಬೇಕು ಬೇಡಗಳೊಂದೂ ಇಲ್ಲದವನ (ಭಗವಂತನ) ಅಡಿಗಳನ್ನು ಸೇರಿದವರು ದುಗುಡದಿಂದ ದೂರವಾಗುವರು

Tamil Transliteration
Ventudhal Ventaamai Ilaanati Serndhaarkku
Yaantum Itumpai Ila.

Explanations
Holy Kural #5
ಮನದ ಇರುಳಿಂದುಂಟಾಗುವ ಒಳಿತು, ಕೆಡಕುಗಳೆಂಬ ಎರಡು ವಿಧವಾದ ಕರ್ಮಗಳೂ ಭಗವಂತನ ಮಹಿಮೆಯನ್ನು ಹೊಗಳುವವರಿಗೆ ಸೇರುವುದಿಲ್ಲ

Tamil Transliteration
Irulser Iruvinaiyum Seraa Iraivan
Porulser Pukazhpurindhaar Maattu.

Explanations
Holy Kural #6
ಐದು ಇಂದ್ರಿಯಗಳ ಬಾಗಿಲನ್ನು ಮುಚ್ಚಿದವನು ಭಗವಂತ. ಅವನ ಕಳಂಕವಿಲ್ಲದ ನೇರವಾದ ಋಜುಮಾರ್ಗದಲ್ಲಿ ನಿಂತವರು ನಿಡುಬಾಳನ್ನು ನಡೆಸುವರು.

Tamil Transliteration
Porivaayil Aindhaviththaan Poidheer Ozhukka
Nerinindraar Neetuvaazh Vaar.

Explanations
Holy Kural #7
ತನಗೆ ಉಪಮೆಯಿಲ್ಲದವನು ಭಗವಂತ. ಅವನ ಪಾದಗಳನ್ನು ನಂಬಿದವರಿಗೆ ಅಲ್ಲದೆ, ಉಳಿದವರಿಗೆ ಮನಸ್ಸಿನ ಕಳವಳ ಕಳೆದು ಕೊಳ್ಳುವುದು ಅಸಾಧ್ಯ.

Tamil Transliteration
Thanakkuvamai Illaadhaan Thaalserndhaark Kallaal
Manakkavalai Maatral Aridhu.

Explanations
Holy Kural #8
ಸಜ್ಜಾರಿತ್ರ್ಯದ ಕಡಲಾದ ಭಗವಂತನ ಅಡಿಗಳನ್ನು ಸೇರಿದವರಿಗಲ್ಲದೆ (ಮಿಕ್ಕವರಿಗೆ) ಸಂಸಾರ ಸಾಗರಗಳನ್ನು ಈಸಿ ದಾಟಲು ಸುಲಭವಲ್ಲ.

Tamil Transliteration
Aravaazhi Andhanan Thaalserndhaark Kallaal
Piravaazhi Neendhal Aridhu.

Explanations
Holy Kural #9
ಎಂಟು ಗುಣವುಳ್ಳವನ (ಭಗವಂತನ) ಪಾದಗಳಿಗೆ ಎರಗದ ತಲೆಯು, ಗ್ರಹಣ ಶಕ್ತಿಯನ್ನು ಕಳೆದುಕೊಂಡ ಇಂದ್ರಿಯಗಳಂತೆ ನಿಷ್ಪಲವಾಗುತ್ತದೆ.

Tamil Transliteration
Kolil Poriyin Kunamilave Enkunaththaan
Thaalai Vanangaath Thalai.

Explanations
Holy Kural #10
ಎರೆಯುನಡಿ (ದೇವರಪಾದ) ಸೇರಿದವರು ಹುಟ್ಟೆಂಬ ಹೆಗ್ಗಡಲನ್ನು ದಾಟುವರು ; ಎರೆಯನಡಿ ಸೇರದವರು ಅದನ್ನು ದಾಟಲಾರರು.

Tamil Transliteration
Piravip Perungatal Neendhuvar Neendhaar
Iraivan Atiseraa Thaar.

Explanations
🡱