ಪುರುಷ ಯತ್ನ ಪಡೆದಿರುವುದು

Verses

Holy Kural #611
ಇದು ಮುಗಿಸಲು ಕಷ್ಟಸಾಧ್ಯವಾದುದು ಎಂದು ಅಧೀರತೆಗೊಳಗಾಗಬಾರದು; ಪ್ರಯತ್ನದಿಂದ ಹಿರಿಮೆಯು ಲಇಸುತ್ತದೆ.

Tamil Transliteration
Arumai Utaiththendru Asaavaamai Ventum
Perumai Muyarsi Tharum.

Explanations
Holy Kural #612
ಕೆಲಸವನ್ನು ಪೂರ್ತಿಮಾಡದೆ ಅರ್ಧದಲ್ಲಿ ಕೈಬಿಟ್ಟವರನ್ನು ಲೋಕವೂ ಕೈಬಿಡುವುದು; ಅದರಿಂದ ಹಿಡಿದ ಕೆಲಸದಲ್ಲಿ ಬರುವ
ಎಡರುತೊಡರುಗಳನ್ನೂ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.

Tamil Transliteration
Vinaikkan Vinaiketal Ompal Vinaikkurai
Theerndhaarin Theerndhandru Ulaku.

Explanations
Holy Kural #613
ಪರೋಪಕಾರವೆನ್ನುವ ಸಿರಿಯು, ಮಾನುಷ ಪ್ರಯತ್ನವೆನ್ನುವ ಹಿರಿಯ ಗುಣದಲ್ಲಿ ನೆಲಸಿರುವುದು.

Tamil Transliteration
Thaalaanmai Ennum Thakaimaikkan Thangitre
Velaanmai Ennunj Cherukku.

Explanations
Holy Kural #614
ಪರೋಪಕಾರವೆನ್ನುವ ಸಿರಿಯು, ಮಾನುಷ ಪ್ರಯತ್ನವೆನ್ನುವ ಹಿರಿಯ ಗುಣದಲ್ಲಿ ನೆಲಸಿರುವುದು.

Tamil Transliteration
Thaalaanmai Illaadhaan Velaanmai Petikai
Vaalaanmai Polak Ketum.

Explanations
Holy Kural #615
ತನ್ನ ಸುಖವನ್ನು ಬಯಸದೆ, ಕೈಕೊಂಡ ಕೆಲಸವನ್ನು ಪ್ರೀತಿಸುವವನು ತನ್ನ ಬಂಧುಗಳ ಸಂಕಟವನ್ನು ತೊಡೆದು ಹಾಕಲು ತಾಳಿನಿಲ್ಲುವ
ಆಧಾರ ಕಂಬವಾಗುವನು.

Tamil Transliteration
Inpam Vizhaiyaan Vinaivizhaivaan Thankelir
Thunpam Thutaiththoondrum Thoon.

Explanations
Holy Kural #616
ಪ್ರಯತ್ನದಿಂದ ಸಿರಿಯು ಬೆಳೆಯುವುದು; ಪ್ರಯತ್ನವಿಲ್ಲದಿದ್ದರೆ ದಾರಿದ್ರ್ಯವು ಹೋಗುವುದು.

Tamil Transliteration
Muyarsi Thiruvinai Aakkum Muyatrinmai
Inmai Pukuththi Vitum.

Explanations
Holy Kural #617
ಒಬ್ಬನ ಆಲಸ್ಯದಲ್ಲಿ ದರಿದ್ರಲಕ್ಷ್ಮಿ ನೆಲಸಿ ಆಳುವಳು. ಆಲಸ್ಯವಿಲ್ಲದವನ ಪ್ರಯತ್ನದಲ್ಲಿ ಭಾಗ್ಯಲಕ್ಷ್ಮಿ ನೆಲೆಸುವಳು ಎಂದು
(ಬಲ್ಲವರು) ಹೇಳುತ್ತಾರೆ.

Tamil Transliteration
Matiyulaal Maamukati Enpa Matiyilaan
Thaalulaan Thaamaraiyi Naal.

Explanations
Holy Kural #618
ದಾರಿದ್ರ್ಯವು ಯಾರಿಗೂ ದೋಷವಲ್ಲ; ಅರಿವಿನಿಂದ ವಿಚಾರಮಾಡಿ ಪ್ರಯತ್ನ ಮಾಡದಿದ್ದರೆ ಅದು ದೋಷವಾಗುವುದು.

Tamil Transliteration
Poriyinmai Yaarkkum Pazhiyandru Arivarindhu
Aalvinai Inmai Pazhi.

Explanations
Holy Kural #619
ದೈವವಿಧಿಯ ಕಾರಣದಿಂದ ಒಂದು ಕೆಲಸ ಫಲಿಸದೆ ಹೋದರೂ ಪ್ರಯತ್ನವು ತನ್ನ ಶರೀರಶ್ರಮದ ಕೂಲಿಯಾಗಿ ಫಲವನ್ನು ನೀಡುತ್ತದೆ.

Tamil Transliteration
Theyvaththaan Aakaa Theninum Muyarsidhan
Meyvaruththak Kooli Tharum.

Explanations
Holy Kural #620
ದಣೆವಿಲ್ಲದೆ, ಎದೆಗುಂದದೆ ಪ್ರಯತ್ನಶೀಲರಾಗಿರುವವರು (ತಮ್ಮನ್ನು ಕಾಡುವ) ವಿಧಿಯನ್ನು ತಮ್ಮ ಬೆನ್ನ ಹಿಂದೆ ಕಾಣುವರು.
(ವಿಧಿಯಿಂದ ಪಾರಾಗುವರು)

Tamil Transliteration
Oozhaiyum Uppakkam Kaanpar Ulaivindrith
Thaazhaadhu Ugnatru Pavar.

Explanations
🡱