ಪ್ರಣಯ ಕೋಪದ ಸೊಗಸು

Verses

Holy Kural #1321
ಅವರಲ್ಲಿ ದೋಷವೊಂದೂ ಇಲ್ಲವಾದರೂ ಅವರೊಂದಿಗೆ ಪ್ರಣಯದ ಮುನಿಸಿ ತೋರುವುದರಿಂದ ಅವರು ನನ್ನ ಮೇಲೆ
ಅಧಿಕವಾದ ಪ್ರೀತಿ ತೋರುವಂತೆ ಮಾಡಬಲ್ಲುದು.

Tamil Transliteration
Illai Thavaravarkku Aayinum Ootudhal
Valladhu Avaralikku Maaru.

Explanations
Holy Kural #1322
ಪ್ರಣಯದ ಹುಸಿ ಮುನಿಸಿನಿಂದ ಕಾಣಿಸಿಕೊಳ್ಳುವ ಕಿರು ದುಃಖದಿಂದಾಗಿ, ಪ್ರಿಯತಮನ ನಿರ್ಮಲ ಪ್ರೀತಿಯು ಬಾಡಿದರೂ
ಅಂತ್ಯದಲ್ಲಿ ಅದು ಹಿರಿಮೆಯನ್ನು ಪಡೆಯುವುದು.

Tamil Transliteration
Ootalin Thondrum Sirudhuni Nallali
Vaatinum Paatu Perum.

Explanations
Holy Kural #1323
ನೆಲದೊಂದಿಗೆ ನೀರು ಬೆರೆತಿರುವಂತಹ ಪ್ರೀತಿಯುಳ್ಳ ಪ್ರಿಯತಮನ ಬಳಿ ಪ್ರಣಯ ಕೋಪವನ್ನು ತೋರುವುದಕ್ಕಿಂತ ಸುಖ
ತರುವ ಸ್ವರ್ಗಲೋಕವು ಬೇರೆ ಉಂಟೋ!

Tamil Transliteration
Pulaththalin Puththelnaatu Unto Nilaththotu
Neeriyain Thannaar Akaththu.

Explanations
Holy Kural #1324
ಪ್ರಿಯತಮನನ್ನು ಅಪ್ಪಿಕೊಂಡು ಬಿಡದಿರಲು ಕಾರಣವಾದ ಪ್ರಣಯದ ಮುನಿಸಿನಲ್ಲಿ ನನ್ನ ಹೃದಯವನ್ನು ಒಡೆಯಬಲ್ಲ
ಅಸ್ತ್ರವೊಂದು ತೋರುತ್ತಿದೆ.

Tamil Transliteration
Pulli Vitaaap Pulaviyul Thondrumen
Ullam Utaikkum Patai.

Explanations
Holy Kural #1325
ದೋಷವಿಲ್ಲದವರಾಗಿಯೂ ಪ್ರಿಯತಮೆಯ ಮುನಿಸಿಗೆ ಎರವಾಗಿ, ತಾವು ಪ್ರೀತಿಸುವ ಹೆಣ್ಣುಗಳ ಮೆದುದೋಳುಗಳನ್ನು ದೂರ
ಸರಿಸುವುದರಲ್ಲಿಯೂ ಒಣ್ದು ರೀತಿಯ ಸುಖವು ಇರುವುದು.

Tamil Transliteration
Thavarilar Aayinum Thaamveezhvaar Mendrol
Akaralin Aangon Rutaiththu.

Explanations
Holy Kural #1326
ಮೇಲೆ ಮೇಲೆ ಊಟ ಮಾಡುವುದಕ್ಕಿಂತೆ, ಉಂಡುದನ್ನು ಅರಗಿಸಿಕೊಳ್ಳುವುದು ಸುಖ ತರುವುದು; (ಅದರಂತೆ) ಪ್ರೇಮದಲ್ಲಿ
ಕೂಡಿ ಮತ್ತೆ ಮತ್ತೆ ಸುಖಿಸುವುದಕ್ಕಿಂತ, ಪ್ರೇಮದ ಮುನಿಸೇ ಕಾಮಕ್ಕೆ ಮಿಗಿಲಾದ ಸುಖ ಕೊಡುವುದು.

Tamil Transliteration
Unalinum Untadhu Aralinidhu Kaamam
Punardhalin Ootal Inidhu.

Explanations
Holy Kural #1327
ಪ್ರನಯ ಕಲಹದಲ್ಲಿ ಸೋತವರೇ ಗೆದ್ದವರು; ಅದು ನಿಶ್ಚಯವಾಗಿ ಮುನಿಸು ತೀರದ ಮೇಲೆ ಕೂಡಿ ಆನಂದಿಸುವುದರಲ್ಲಿ
ವ್ಯಕ್ತವಾಗುವುದು.

Tamil Transliteration
Ootalil Thotravar Vendraar Adhumannum
Kootalir Kaanap Patum.

Explanations
Holy Kural #1328
ಅವಳ ನೊಸಲು ಬೆವರುವಂತೆ ಕೂಡಿ, ಆ ಕಾಮ ಸುಖವನ್ನು ಇನ್ನೊಮ್ಮೆ ಅವಳ ಪ್ರಣಯದ ಮುನಿಸಲ್ಲಿರುವಾಗ ಪಡೆದು
ಆನಂದಿಸುವೆನಲ್ಲವೆ?

Tamil Transliteration
Ootip Perukuvam Kollo Nudhalveyarppak
Kootalil Thondriya Uppu.

Explanations
Holy Kural #1329
ಆ ಚೆಲುವಿನ ಬೆಡಗುಗಾತಿ ಇನ್ನೂ ಪ್ರಣಯ ಮುನಿಸನ್ನು ತೋರುವವಳಾಗಲಿ! ನಾನು ಅವಳ ಮುನಿಸನ್ನು ತಣಿಸುವಂತೆ
ಬೇಡಿಕೊಳ್ಳಲು, ರಾತ್ರಿ ಕಾಲವು ಮತ್ತಷ್ಟು ದೀರ್ಘವಾಗಲಿ.

Tamil Transliteration
Ootuka Manno Oliyizhai Yaamirappa
Neetuka Manno Iraa.

Explanations
Holy Kural #1330
ಪ್ರಣಯದ ಮುನಿಸು ಪ್ರೇಮಕ್ಕೆ ಸೊಗಸು; ಮುನಿಸು ತೀರದ ಮೇಲೆ ಕೂಡಿ ಅಪ್ಪಿಕೊಂಡರೆ ಆ ಮುನಿಸಿನ ಸೊಗಸಿಗೂ ಮಿಗಿಲು.

Tamil Transliteration
Ootudhal Kaamaththirku Inpam Adharkinpam
Kooti Muyangap Perin.

Explanations
🡱