ಪ್ರೀತಿ ಪರತೆ

Verses

Holy Kural : #71 #72 #73 #74 #75 #77 #78 #79 #80 #76
Holy Kural #71
ಪ್ರೀತಿಯನ್ನು ಅಡಗಿಸಿಡುವ ಕೀಲಿ ಉಂಟೇ? ಪ್ರೀತಿಯುಳ್ಳವರ ಕಿರು ಕಣ್ಣೀರು (ಅವರೆದೆಯಲ್ಲಿರುವ ಪ್ರೀತಿಯ) ಸಾಕ್ಷಿಯಾಗಿ ಹಲವರರಿಯುವಂತೆ ಮಾಡವುದು.

Tamil Transliteration
Anpirkum Unto Ataikkundhaazh Aarvalar
Punkaneer Poosal Tharum.

Explanations
Holy Kural #72
ಪ್ತೀತಿ ಇಲ್ಲದವರು ಎಲ್ಲಾ ತಮ್ಮದು ಎಂದು ತಿಳಿಯುವರು; ಪ್ರೀತಿಯುಳ್ಳವರು ತಮ್ಮ ಶರೀರವೂ (ಎಲುಬು) ಪರರಿಗಾಗಿದೆ ಎಂದು ತಿಳಿಯುವರು.

Tamil Transliteration
Anpilaar Ellaam Thamakkuriyar Anputaiyaar
Enpum Uriyar Pirarkku.

Explanations
Holy Kural #73
ಪ್ರೀತಿಯಿಂದ ಸೇರಿ ಬಾಳಿದ ಫಲವೇ ಶರೀರದೊಂದಿಗೆ ಜೀವಿಗೆ ಇರುವ ಸಂಬಂಧ ಎಂದು ಹೇಳುತ್ತಾರೆ.

Tamil Transliteration
Anpotu Iyaindha Vazhakkenpa Aaruyirkku
Enpotu Iyaindha Thotarpu.

Explanations
Holy Kural #74
ಪ್ರೀತಿ, (ಇತರರೊಂದಿಗೆ ಬಾಳ ಬಯಸುವ) ಸಹೃದಯತೆಯನ್ನುಂಟುಮಾಡುವುದು. ಸಹೃದಯತೆಯು ಸ್ನೇಹವೆಂಬ ಅಳವರಿಯದ ಹಿರಿಮೆಯನ್ನು ತರುವುದು.

Tamil Transliteration
Anpu Eenum Aarvam Utaimai Adhueenum
Nanpu Ennum Naataach Chirappu.

Explanations
Holy Kural #75
ಈ ಲೋಕದಲ್ಲಿ ಸುಖವನ್ನು ಹೊಂದಿ ಬಾಳುವವರು, ಮುಂದೆ ಮೇಲು ಲೋಕದಲ್ಲಿ ಪಡೆಯುವ ಹಿರಿಮೆಯು ಅವರ ಪ್ರೀತಿ ಮೂಲವಾದ ಬಾಳಿನ ಫಲವೆಂದು ಹೇಳುವರು.

Tamil Transliteration
Anputru Amarndha Vazhakkenpa Vaiyakaththu
Inputraar Eydhum Sirappu.

Explanations
Holy Kural #77
ಎಲುಬಿಲ್ಲದ ಹುಲು ಜೀವಿಗಳನ್ನು (ಹುಳುಗಳನ್ನು) ಬಿಸಿಲು ಸುಡುವಂತೆ ಪ್ರೀತಿ ಇಲ್ಲದವರನ್ನು ಧರ್ಮವು ಸುಡುತ್ತದೆ.

Tamil Transliteration
Enpi Ladhanai Veyilpolak Kaayume
Anpi Ladhanai Aram.

Explanations
Holy Kural #78
ಮನದೊಳಗೆ ಪ್ರೀತಿ ಇಲ್ಲದೆ ಬಾಳುವವರ ಜೀವನ, ಕಡು ಮರಳುಕಾಡಿನೊಳಗೆ ಒಣಗಿದ ಮರ ಚಿಗುರಿದಂತೆ.

Tamil Transliteration
Anpakath Thillaa Uyirvaazhkkai Vanpaarkan
Vatral Marandhalirth Thatru.

Explanations
Holy Kural #79
ಶರೀರದ ಒಳ ಅಂಗವಾದ ಮನಸ್ಸಿನಲ್ಲಿ ಪ್ರೀತಿ ಇಲ್ಲದಿದ್ದರೆ, ಶರೀರದ ಹೊರ ಅಂಗಗಳೆಲ್ಲ ಇದ್ದೂ ಏನು ಮಾಡಬಲ್ಲುವು? (ಅವುಗಳಿದ್ದೂ ವ್ಯರ್ಥ)

Tamil Transliteration
Puraththurup Pellaam Evanseyyum Yaakkai
Akaththuruppu Anpi Lavarkku.

Explanations
Holy Kural #80
ಪ್ರೀತಿ ಮಾರ್ಗದಲ್ಲಿ ನಡೆಯುವ ಶರೀರವೆ ಜೀವಂತ ಶರೀರ (ಉಸಿರು ದಾಣ) ವಾಗಿರುವುದು. ಅದಿಲ್ಲದವರ ಶರೀರವು ಎಲುಬಿಗೆ ತೊಗಲು ಹೊದಿಸಿದಂತೆ.

Tamil Transliteration
Anpin Vazhiyadhu Uyirnilai Aqdhilaarkku
Enpudhol Porththa Utampu.

Explanations
Holy Kural #76
ಅರಿಯದವರು ಪ್ರೀತಿ ಧರ್ಮಕ್ಕೆ ಮಾತ್ರ ಆಧಾರವೆನ್ನುವರು. ಆದರೆ ಪರಿಶೀಲಿಸಿ ನೋಡಿದರೆ ವೀರಕ್ಕೂ ಅದೇ ಆಧಾರವೆಂದು ತಿಳಿಯುವುದು.

Tamil Transliteration
Araththirke Anpusaar Penpa Ariyaar
Maraththirkum Aqdhe Thunai.

Explanations
🡱