ಬೇಹುಗಾರಿಕೆ

Verses

Holy Kural #581
ಬೇಹುಗಾರಿಕೆ, ಕೀರ್ತಿವೆತ್ತ ನ್ಯಾಯಶಾಸ್ತ್ರ ಈ ಎರಡು ಸಾಧನೆಗಳನ್ನೂ ನಿಶ್ಚಿತವಾಗಿ ಅರಸನು ತನ್ನ ಎರಡು ಕಣ್ಣುಗಳಾಗಿ ತಿಳಿಯಬೇಕು.

Tamil Transliteration
Otrum Uraisaandra Noolum Ivaiyirantum
Thetrenka Mannavan Kan.

Explanations
Holy Kural #582
ಎಲ್ಲರಿಗೂ ಸಂಭವಿಸುವ ಎಲ್ಲಾ ಸಂಗತಿಗಳನ್ನೂ ಎಲ್ಲಾ ಕಾಲದಲ್ಲೂ (ಬೇಹುಗಾರಿಕೆ ಮೂಲಕ) ಚೆನ್ನಾಗಿ ತಿಳಿದುಕೊಂಡಿರುವುದು
ಅರಸನ ಕರ್ತವ್ಯವೆನಿಸುವುದು.

Tamil Transliteration
Ellaarkkum Ellaam Nikazhpavai Egngnaandrum
Vallaridhal Vendhan Thozhil.

Explanations
Holy Kural #583
ಬೇಹುಗಾರನು ಬೇಹುಗಾರಿಕೆಯಿಂದ ತಿಳಿಸಿದ ಸಂಗತಿಗಳನ್ನು ಅರಿತು ಅವುಗಳ ಪ್ರಯೋಜನವನ್ನು ಬಳಸಿಕೊಳ್ಳಲಾರದ ಅರಸನು,
ಜಯಗಳಿಸುವ ಮಾರ್ಗ ಬೇರೆ ಇಲ್ಲ.

Tamil Transliteration
Otrinaan Otrip Poruldheriyaa Mannavan
Kotrang Kolakkitandhadhu Il.

Explanations
Holy Kural #584
ಅರಸನಲ್ಲಿ ಕೆಲಸ ಮಾಡುವವರು, ಅವನ ಸಂಬಂಧಿಗಳು, ಹಗೆಗಳು ಎಂಬ ಎಲ್ಲಾ ಬಗೆಯ ಜನರನ್ನು ಪರೀಕ್ಷಿಸುವುದೇ ಬೇಹುಗಾರನ
ಕೆಲಸವಾಗುವುದು.

Tamil Transliteration
Vinaiseyvaar Thamsutram Ventaadhaar Endraangu
Anaivaraiyum Aaraaivadhu Otru.

Explanations
Holy Kural #585
ಸಂದೇಹಕ್ಕೆ ಆಸ್ವದ ಕೊಡದ ಮಾರು ವೇಷದಿಂದ, ನೋಡಿದವರ ಕಣ್ಣೋಟಕ್ಕೆ ಅಂಜದೆ, ಯಾವೆಡೆಯಲ್ಲೂ ತನ್ನ ರಹಸ್ಯಗಳನ್ನು
ಬಯಲುಮಾಡದೆ ಇರಬಲ್ಲವನೇ ಬೇಹುಗಾರನೆನಿಸುವನು.

Tamil Transliteration
Kataaa Uruvotu Kannanjaadhu Yaantum
Ukaaamai Valladhe Otru.

Explanations
Holy Kural #586
ಸನ್ಯಾಸಿಗಳ ವೇಷಧರಿಸಿ, ದುರ್ಗಮವಾದ ಎಡೆಗಳಲ್ಲೆಲ್ಲಾ ಓಡಾಡಿ, ಪರೀಕ್ಷಿಸಿ (ತನ್ನನ್ನು ಸಂದೇಹಿಸಿದವರು) ಏನು ಮಾಡಿದರೂ ತನ್ನ
ಪತ್ತೆ ಹೇಳದವನೇ ಬೇಹುಗಾರನೆನಿಸುವನು.

Tamil Transliteration
Thurandhaar Pativaththa Raaki Irandhaaraaindhu
Enseyinum Sorviladhu Otru.

Explanations
Holy Kural #587
ಅಡಗಿಸಿರುವ ಸುದ್ದುಗಳನ್ನೂ ಕೇಳಿ ತಿಳಿಯಬಲ್ಲವನಾಗಿ, ತಿಳಿದ ವಿಷಯಗಳಲ್ಲಿ ಸಂದೇಹವಿಲ್ಲದೆ ನಡೆದುಕೊಳ್ಳುವುದೇ ಬೇಹುಗಾರನ
ಲಕ್ಷಣ.

Tamil Transliteration
Maraindhavai Ketkavar Raaki Arindhavai
Aiyappaatu Illadhe Otru.

Explanations
Holy Kural #588
(ಅರಸನಾದವನು) ಒಬ್ಬ ಬೇಹುಗಾರನು ಪತ್ತೆಮಾಡಿ ತಂದ ಸುದ್ದಿಯನ್ನು ಮತ್ತೊಬ್ಬ ಬೇಹುಗಾರನಿಂದ ಪತ್ತೆಹಚ್ಚಿದನಂತರ
ಒಪ್ಪಿಕೊಳ್ಳಬೇಕು.

Tamil Transliteration
Otrotrith Thandha Porulaiyum Matrumor
Otrinaal Otrik Kolal.

Explanations
Holy Kural #589
ಒಬ್ಬ ಬೇಹುಗಾರನನ್ನು ಮತ್ತೊಬ್ಬ ಬೇಹುಗಾರನು ಅರಿಯದಂತೆ ಅರಸನು ನೇಮಿಸಬೇಕು. ಆ ರೀತಿ ನೇಮಿಸಲ್ಪಟ್ಟ ಮೂವರು
ಬೇಹುಗಾರರ ಮಾತು ಹೊಂದಿಕೆಯಾದ ಮೇಲೆ ಅದನ್ನು ಸ್ವೀಕರಿಸಬೇಕು.

Tamil Transliteration
Otrer Runaraamai Aalka Utanmoovar
Sotrokka Therap Patum.

Explanations
Holy Kural #590
(ಅರಸನು) ಬೇಹುಗಾರನನ್ನು ಇತರರು ಅರಿಯುವಂತೆ ಸನ್ಮಾನಿಸಬಾರದು. ಹಾಗೆ ಮಾಡಿದರೆ, ರಹಸ್ಯ ಸಂಗತಿಗಳನ್ನು ತಾನೇ
ಹೊರಗೆಡಹಿದಂತೆ ಆಗುತ್ತದೆ.

Tamil Transliteration
Sirappariya Otrinkan Seyyarka Seyyin
Purappatuththaan Aakum Marai.

Explanations
🡱