ಭಿಕ್ಷಾಟನೆ

Verses

Holy Kural #1051
ಬೇಡಲು ತಕ್ಕವರನ್ನು ಕಂಡರೆ ಬೇಡಿಕೊಳ್ಳಬೇಕು; ಅವರು ಕೊಡಗೆ ತಿರಸ್ಕರಿಸಿದರೆ, ಆ ದೋಷವು ಅವರಿಗೇ ವಿನಾ
ಬೇಡುವವನದಲ್ಲ.

Tamil Transliteration
Irakka Iraththakkaark Kaanin Karappin
Avarpazhi Thampazhi Andru.

Explanations
Holy Kural #1052
ಬೇಡಿನ ವಸ್ತುಗಳು ದುಃಖವುಂಟಾಗದೆ ಮನ ಮೆಚ್ಚಿ ಕೊಡಲ್ಪತ್ತರೆ, ಆ ಯಾಚನೆಯು ಬೇಡಿದವನಿಗೆ ಸುಖಕರವೇ ಆಗುತ್ತದೆ.

Tamil Transliteration
Inpam Oruvarku Iraththal Irandhavai
Thunpam Uraaa Varin.

Explanations
Holy Kural #1053
ಮನಸ್ಸಿನಲ್ಲಿ ಕೈಪಣತೆಯಿಲ್ಲದೆ, ಕರ್ತವ್ಯವೆಂದು ತಿಳಿದು ಕೊಡುವ ದಾನಿಗಳಮುಂದೆ ನಿಂತು ಬೇಡುವುದರಲ್ಲೂ ಒಂದು
ಬಗೆಯ ಸೊಬಗು ಇರುತ್ತದೆ.

Tamil Transliteration
Karappilaa Nenjin Katanarivaar Munnindru
Irappumo Reer Utaiththu.

Explanations
Holy Kural #1054
ಕೃಪಣತೆಯನ್ನು ಕನಸಿನಲ್ಲಿಯೂ ಅರಿಯದವರ ಬಳಿ ಬೇಡಿ ಪಡೆದುಕೊಳ್ಳುವುದು. ತಾವೇ ದಾನ ಮಾಡಿದುದಕ್ಕೆ ಸಮಾನ.

Tamil Transliteration
Iraththalum Eedhale Polum Karaththal
Kanavilum Thetraadhaar Maattu.

Explanations
Holy Kural #1055
ಕೃಪಣ ಸ್ವಭಾವವಿಲ್ಲದವರು ಈ ಲೋಕದಲ್ಲಿ ಸಹಜವಾಗಿ ಇರುವುದರಿಂದಲೇ ಬೇಡುವವರು ಅವರ ಮುಂದೆ ನಿಂತು
ಬೇಡಿಕೊಳ್ಳುವುದು.

Tamil Transliteration
Karappilaar Vaiyakaththu Unmaiyaal Kannindru
Irappavar Merkol Vadhu.

Explanations
Holy Kural #1056
ಜೆಪುಣತನವೆಂಬ ರೋಗವಿಲ್ಲದವರನ್ನು ಕಂಡರೆ, ಬಡತನವೆಂಬ ರೋಗವು ಒಂದೇ ಸಲಕ್ಕೆ ನಾಶವಾಗುವುದು.

Tamil Transliteration
Karappitumpai Yillaaraik Kaanin Nirappitumpai
Ellaam Orungu Ketum.

Explanations
Holy Kural #1057
ತೆಗಳಿ ನಿಂದನೆ ಮಾಡದೆ ಕೊಡುಗೈಯಿಂದ ಕೊಡುವವರನ್ನು ಕಂಡರೆ ಬೇಡುವವರ ಮನಸ್ಸು ಆನಂದದಿಂದ
ಒಳಗೊಳಗೇ ಸಂತೋಷಪಡುತ್ತದೆ.

Tamil Transliteration
Ikazhndhellaadhu Eevaaraik Kaanin Makizhndhullam
Ullul Uvappadhu Utaiththu.

Explanations
Holy Kural #1058
ಬೇಡುವವರೇ ಇಲ್ಲವಾದರೆ, ಈ ತಂಪಾದ ವಿಶಾಲ ಭೂಮಿಯಲ್ಲಿ ವಾಸಿಸುವ ಜನರ ಚಲನೆಯು, ಸೂತ್ರದಿಂದ ಆಡಿಸುವ
ಮರದ ಬೊಂಬೆಯ ಚಲನೆಗೆ ಹೋಲುವುದು.

Tamil Transliteration
Irappaarai Illaayin Eernganmaa Gnaalam
Marappaavai Sendruvan Thatru.

Explanations
Holy Kural #1059
ಬೇಡಿ ಪಡೆದುಕೊಳ್ಳುವವರೇ ಇಲ್ಲವಾದ ಪಕ್ಷದಲ್ಲಿ ಕೂಡುವ ಮನಸ್ಸುಳ್ಳವರಿಗೆ ಯಾವ ಕೀರ್ತಿ ಉಂಟಾಗುತ್ತದೆ?

Tamil Transliteration
Eevaarkan Ennuntaam Thotram Irandhukol
Mevaar Ilaaak Katai.

Explanations
Holy Kural #1060
ಬೇಡುವವನು ಕೋಪಿಸಿಕೊಳ್ಳದಿರಬೇಕು; ಅವನ ಪಡೆದಿರುವ ಬಡತನವೆಂಬ ದುಃಖವೇ ಅವನಿಗೆ ಅರಿವು ತೋರುವ
ನಿಷ್ಛಳವಾದ ಸಾಕ್ಷಿ.

Tamil Transliteration
Irappaan Vekulaamai Ventum Nirappitumpai
Thaaneyum Saalum Kari.

Explanations
🡱