ಮಕ್ಕಳನ್ನು ಪಡೆಯುವಿಕೆ

Verses

Holy Kural : #61 #62 #63 #64 #65 #66 #67 #68 #69 #70
Holy Kural #61
ಅರಿವನ್ನು ತಿಳಿದ ಮಕ್ಕಳನ್ನು ಪಡೆಯುವುದಕ್ಕಿಂತ ನಮಗೆ ಬೇರೆ ಭಾಗ್ಯವಿಲ್ಲ. (ಉಳಿದ ಭಾಗ್ಯಗಳನ್ನು ನಾವು ಲಕ್ಷಿಸುವುದಿಲ್ಲ)

Tamil Transliteration
Perumavatrul Yaamarivadhu Illai Arivarindha
Makkatperu Alla Pira.

Explanations
Holy Kural #62
ಅಪಕೀರ್ತಿ ಇಲ್ಲದ, ಗುಣಶಾಲಿಗಳಾದ ಮಕ್ಕಳನ್ನು ಪಡೆದರೆ, ಏಳು ಜನ್ಮಗಳಲ್ಲಿಯೂ ಕೇಡಿನಿಂದ ಉಂಟಾಗುವ ದುಃಖವು ನಮ್ಮ ಬಳಿ ಸಾರುವುದಿಲ್ಲ.

Tamil Transliteration
Ezhupirappum Theeyavai Theentaa Pazhipirangaap
Panputai Makkat Perin.

Explanations
Holy Kural #63
ತಮ್ಮ ಮಕ್ಕಳೇ ತಮ್ಮ ಸಂಪತ್ತು ಎಂದು (ಬಲ್ಲವರು) ಹೇಳುವರು; ಆ ಮಕ್ಕಳ ಸಂಪತ್ತೆಂದರೆ ಅವರವರ ಕರ್ಮಫಲಗಳು.

Tamil Transliteration
Thamporul Enpadham Makkal Avarporul
Thamdham Vinaiyaan Varum.

Explanations
Holy Kural #64
ಮಕ್ಕಳು ತಮ್ಮ ಕಿರುಕೈಗಳಿಂದ ಚೆಲ್ಲಾಡಿದ ಕೂಳು, ಹೆತ್ತವರಿಗೆ ಅಮೃತಕ್ಕಿಂತ ಮಿಗಿಲಾದ ಸವಿ ಉಂಟುಮಾಡುತ್ತದೆ.

Tamil Transliteration
Amizhdhinum Aatra Inidhedham Makkal
Sirukai Alaaviya Koozh.

Explanations
Holy Kural #65
ಮಕ್ಕಳ ಮೈಯನ್ನು ಸವರುವುದು ಒಡಲಿಗೆ ಹಿತ, ಆ ಮಕ್ಕಳ ತೊದಲು ನುಡಿ ಕೇಳುವುದು ಕಿವಿಗೆ ಹಿತ.

Tamil Transliteration
Makkalmey Theental Utarkinpam Matru Avar
Sorkettal Inpam Sevikku.

Explanations
Holy Kural #66
ತಮ್ಮ ಮಕ್ಕಳ ತೊದಲು ಮಾತನ್ನು ಕೇಳದವರು ಕೊಳಲು ಇನಿದು, ವೀಣೆ ಇನಿದು ಎಂದು ಹೇಳುತ್ತಾರೆ.

Tamil Transliteration
Kuzhal Inidhu Yaazhinidhu Enpadham Makkal
Mazhalaichchol Kelaa Thavar.

Explanations
Holy Kural #67
ತಂದೆಯಾದವನು ತನ್ನ ಮಗನಿಗೆ ಮಾಡುವ ಉಪಕಾರವೆಂದರೆ ಬುದ್ದಿ ಜೀವಿಗಳ ಸಭೆಗಳಲ್ಲಿ ಎದೆಗೊಟ್ಟು ಮಾತನಾಡುವ ಹಾಗೆ ಅವನಿಗೆ ವಿದ್ಯೆ ನೀಡುವುದು.

Tamil Transliteration
Thandhai Makarkaatrum Nandri Avaiyaththu
Mundhi Iruppach Cheyal.

Explanations
Holy Kural #68
ತಮ್ಮ ಮಕ್ಕಳ ಬೌದ್ದಿಕ ಜಾಣ್ಮೆ ತಮಗೆ ಮಾತ್ರವಲ್ಲದೆ, ಲೋಕದ ಜೀವಿಗಳಿಗೆಲ್ಲಾ ಮಿಗಿಲಾದ ಆನಂದವನ್ನು ಉಂಟುಮಾಡುತ್ತದೆ.

Tamil Transliteration
Thammindham Makkal Arivutaimai Maanilaththu
Mannuyirk Kellaam Inidhu.

Explanations
Holy Kural #69
ತನ್ನ ಮಗ ಕೀರ್ತಿಶಾಲಿ ಎಂದು ಹೆರರಿಂದ ಕೇಳಿದಾಗ ತಾಯಿಗೆ ಆಗುವ ಆನಂದ, ತಾನು (ಮಗನಿಗೆ) ಜನ್ಮವಿತ್ತಾಗ ಪಡೆದ ಆನಂದಕ್ಕಿಂತ ಮಿಗಿಲಾದುದು.

Tamil Transliteration
Eendra Pozhudhin Peridhuvakkum Thanmakanaich
Chaandron Enakketta Thaai.

Explanations
Holy Kural #70
ಮಗನು ತನ್ನ ತಂದೆಗೆ ಮಾದುವ ಉಪಕಾರವೆಂದರೆ, ತಂದೆ ಇವನನ್ನು ಪಡೆಯಲು ಎಷ್ಟು ತಪಸ್ಸು ಮಾಡಿದನೋ ಎಂಬ ಜನರ ಉದ್ಗಾರ.

Tamil Transliteration
Makandhandhaikku Aatrum Udhavi Ivandhandhai
Ennotraan Kol Enum Sol.

Explanations
🡱