ಮನಸ್ಸಿನೊಡನೆ ಕಲಹ

Verses

Holy Kural #1291
ಓ ಹೃದಯವೇ, ಅವರ ಹೃದಯವು (ನನ್ನನ್ನು ನಿರ್ಲಕ್ಷಿಸಿ) ಅವರ ಇಚ್ಛಿಗನು ಗುಣವಾಗಿ ನಡೆಯುತ್ತಿರುವುದನ್ನು ತಿಳಿದೂ ನೀನು
ನನ್ನ ಸಂಗಾತಿಯಾಗಿರದೆ ಅವರೆಡೆಗೆ ಹಾರುತ್ತಿರುವೆಯೇಕೆ?

Tamil Transliteration
Avarnenju Avarkkaadhal Kantum Evannenje
Neeemakku Aakaa Thadhu.

Explanations
Holy Kural #1292
ನನ್ನ ಹೃದಯವೇ! ಅವರು ನನ್ನ ಮೇಲೆ ಪ್ರೀತಿ ಇಲ್ಲದ ಕಟುಕರೆಂದು ತಿಳಿದೂ ನೀನು ಅವರು ಕೋಪಿಸಲಾರರೆಂದು
ಭಾವಿಸಿ ಅವರನ್ನು ಸೇರಿಕೊಳ್ಳುತ್ತಿದ್ದಿಯೇ!

Tamil Transliteration
Uraaa Thavarkkanta Kannum Avaraich
Cheraaarenach Cheriyen Nenju.

Explanations
Holy Kural #1293
ಹೃದಯವೇ! ನೀನು ಇಚ್ಛಿಸಿದ ರೀತಿಯಲ್ಲಿಯೇ ಅವರ ಹಿಂದ ಹೋಗಲೆಳಸುವುದು "ಕೆಟ್ಟವಂಗೆ ಕೆಳೆಯಿಲ್ಲ" ಎಂಬ
ಭಾವನೆಯಿಂದಲೇ ಅಲ್ಲವೆ?

Tamil Transliteration
Kettaarkku Nattaaril Enpadho Nenjenee
Pettaangu Avarpin Selal.

Explanations
Holy Kural #1294
ಹೃದಯವೇ! ಪ್ರಿಯತಮನೊಡನೆ ನೀನು ಮೊದಲು ಮುನಿಸಿಕೊಂಡು ಆ ನಂತರವೇ ಸುಖವುಣ್ಣಲೆಳಸಿದೆ; ಇನ್ನು ಮುಂದೆ
ಅಂಥ ಸನ್ನಿವೇಶಗಳಲ್ಲಿ ನಿನ್ನೊಡನೆ ಸಮಾಲೋಚಿಸುವವರು ಯಾರು?

Tamil Transliteration
Inianna Ninnotu Soozhvaaryaar Nenje
Thuniseydhu Thuvvaaikaan Matru.

Explanations
Holy Kural #1295
ಇನಿಯನನ್ನು ಪಡೆಯದಿರುವಾಗ, ಆ ಸ್ಥಿತಿಯನ್ನು ನೆನೆದು ಅಂಜುತ್ತದೆ; ಪಡೆದಾಗ, ಅಗಲಿಕೆಯನ್ನು ನೆನೆದು ಅಂಜುತ್ತದೆ.
(ಈ ರೀತಿ) ನನ್ನ ಹೃದಯವು ತೀರದ ದುಃಖಕ್ಕೆ ಭಾಗಿಯಾಗಿದೆ.

Tamil Transliteration
Peraaamai Anjum Perinpirivu Anjum
Araaa Itumpaiththen Nenju.

Explanations
Holy Kural #1297
ಇನಿಯನನ್ನು ಮರೆಯಲಾರದ ನನ್ನ ಮಾನಗೆಟ್ಟ ಮೂರ್ಖ ಮನಸ್ಸಿನ ಹಿಡಿತಕ್ಕೆ ಸಿಕ್ಕಿಕೊಂಡು ಹೆಣ್ತನದ ನಾಚಿಕೆಯನ್ನು ಮರೆತಿದ್ದೇನೆ.

Tamil Transliteration
Naanum Marandhen Avarmarak Kallaaen
Maanaa Matanenjir Pattu.

Explanations
Holy Kural #1298
ಜೀವದ ಮೇಲೆ ಪ್ರೀತಿಯಿಟ್ಟ ನನ್ನ ಹೃದಯವು, ಅಗಲಿದ ಇನಿಯನನ್ನು ನಿಂದಿಸಿದರೆ ಪರಿಹಾರವಾಗುವುದೆಂದು ಬಗೆದು, ಅವನ
ಉನ್ನತ ಗುಣಗಳನ್ನೇ ನೆನೆಯುತ್ತಿರುವುದು.

Tamil Transliteration
Ellin Ilivaamendru Enni Avardhiram
Ullum Uyirkkaadhal Nenju.

Explanations
Holy Kural #1299
ದುಃಖದ ಸಮಯದಲ್ಲಿ ತಮ್ಮಲ್ಲಿರುವ ಮನಸ್ಸೇ ಜತೆಯಾಗಿರದ ಪಕ್ಷದಲ್ಲಿ ಬೇರೆ ಯಾರು ಜತೆಯಾಗಬಲ್ಲರು?

Tamil Transliteration
Thunpaththirku Yaare Thunaiyaavaar Thaamutaiya
Nenjan Thunaiyal Vazhi.

Explanations
Holy Kural #1300
ತಮ್ಮಲ್ಲಿರುವ ಮನಸ್ಸೇ ನೆಂಟನಾಗಿ ಒದಗದ ಪಕ್ಷದಲ್ಲಿ, ಇತರರು ತಮ್ಮವರಾಗದಿರುವುದರಲ್ಲಿ ಆಶ್ಚರ್ಯವೇನಿದೆ!

Tamil Transliteration
Thanjam Thamarallar Edhilaar Thaamutaiya
Nenjam Thamaral Vazhi.

Explanations
Holy Kural #1296
ಪ್ರಿಯತಮನಿಂದ ದೂರವಾಗಿ ಒಭ್ಭಳೇ ಇದ್ದು, ಅವರ ಕಠಿಣ ಮನಸ್ಸನ್ನು ನೆನೆಯುತ್ತಿರುವಾಗಲೆಲ್ಲ, ದುಃಖವುಕ್ಕಿ ಬಂದು
ನನ್ನ ಹೃದಯವು ನನ್ನನ್ನೇ ತಿನ್ನುವ ಹಾಗೆ ಇತ್ತು!

Tamil Transliteration
Thaniye Irundhu Ninaiththakkaal Ennaith
Thiniya Irundhadhen Nenju.

Explanations
🡱