ಮಾಂಸ ತ್ಯಜ್ಯ

Verses

Holy Kural #251
ತನ್ನ ಮೈ ಮಾಂಸವನ್ನು ಬೆಳಸಿಕೊಳ್ಳಲು ಇತರ ಪ್ರಾಣಿಗಳ ಮೈಮಾಂಸವನ್ನು ತಿನ್ನುವವನು ಹೇಗೆ ತಾನೆ ಕರುಣೆಯಿಂದ ಬಾಳಬಲ್ಲನು?

Tamil Transliteration
Thannoon Perukkarkuth Thaanpiridhu Oonunpaan
Engnganam Aalum Arul?.

Explanations
Holy Kural #252
ಸಿರಿಯನ್ನು ಅನುಭವಿಸುವ ಫಲ ಅದನ್ನು ಕಾಪಾಡಿಕೊಳ್ಳಲಾರದವರಿಗೆ ಇಲ್ಲ; ಅದೇ ರೀತಿ, ಮಾಂಸ ತಿನ್ನುವವರಿಗೆ ಕರುಣೆಯಿಂದ
ಉಂಟಾಗುವ ಫಲವೂ ಇಲ್ಲ.

Tamil Transliteration
Porulaatchi Potraadhaarkku Illai Arulaatchi
Aangillai Oondhin Pavarkku.

Explanations
Holy Kural #253
ಒಂದು ಪ್ರಾಣಿಯ ಒಡಲಿನ ಸವಿಯನ್ನು ಉಂಟವರ ಮನಸ್ಸು, ಕೊಲೆಗತ್ತಿಯನ್ನು ಕೈಯಲ್ಲಿ ಹಿಡಿದ ಕಟುಕರ ಮನಸ್ಸಿನಂತೆ
ಒಳ್ಳೆಯದನ್ನು ಎಣಿಸುವುದಿಲ್ಲ.

Tamil Transliteration
Pataikontaar Nenjampol Nannookkaadhu Ondran
Utalsuvai Untaar Manam.

Explanations
Holy Kural #254
ಕರುಣೆ ಯಾವುದೆಂದರೆ ಒಂದು ಪ್ರಾಣಿಯನ್ನು ಕೊಲ್ಲದಿರುವುದು; ಕರುಣೆಯಲ್ಲದ್ದು ಯಾವುದೆಂದರೆ-ಕೊಲ್ಲುವುದು. ಆ ಕೊಂದ
ಒಡಲಿನ ಮಾಂಸವನ್ನು ತಿನ್ನುವುದು ಧರ್ಮವಲ್ಲದ್ದು.

Tamil Transliteration
Arulalladhu Yaadhenin Kollaamai Koral
Porulalladhu Avvoon Thinal.

Explanations
Holy Kural #255
ಮಾಂಸವನ್ನು ಉಣ್ಣದಿರುವುದೇ ಪ್ರಾಣಿಗಳ ಉಸಿರ ನೆಲೆ. ಮಾಂಸವನ್ನು ತಿಂದರೆ, ನರಕವೂ ಕೊಡ ಅಂಥವರನ್ನು ಬಾಯಿ ತೆರೆದು
ಹೊರಗೆ ಬಿಡುವುದಿಲ್ಲ.

Tamil Transliteration
Unnaamai Ulladhu Uyirnilai Oonunna
Annaaththal Seyyaadhu Alaru.

Explanations
Holy Kural #256
ಮಾಂಸವನ್ನು ತಿನ್ನಬೇಕೆಂದ ಕಾರಣದಿಂದ ಲೋಕದ ಜನರು ಒಂದು ಪ್ರಾಣಿಯನ್ನು ಕೊಲ್ಲುವುದಿಲ್ಲ ಎಂದಾದರೆ, ಹಣದಾಸೆಗೆ ಅದನ್ನು
ಮಾರುವವರೂ ಇಲ್ಲವಾಗುತ್ತಾರೆ.

Tamil Transliteration
Thinarporuttaal Kollaadhu Ulakenin Yaarum
Vilaipporuttaal Oondraruvaa Ril.

Explanations
Holy Kural #257
ಮಂಸವನ್ನು ತಿನ್ನದಿರಬೇಕು; ವಿಚಾರ ಮಾಡಿ ನೋಡಿದರೆ, ಅದು ಬೇರೊಂದು ಪ್ರಾಣಿಯ ಒಡಲ ಹುಣ್ಣು ಎಂದು ಗೊತ್ತಾಗುವುದು.

Tamil Transliteration
Unnaamai Ventum Pulaaal Piridhondran
Punnadhu Unarvaarp Perin.

Explanations
Holy Kural #258
ದೋಷಮುಕ್ತವಾದ ಅರಿವುಳ್ಳವರು ಒಂದು ಪ್ರಾಣಿಯ ಒಡಲಿಂದ ಹರಿದು ಬಂದ ಮಾಂಸವನ್ನು ತಿನ್ನುವುದಿಲ್ಲ.

Tamil Transliteration
Seyirin Thalaippirindha Kaatchiyaar Unnaar
Uyirin Thalaippirindha Oon.

Explanations
Holy Kural #259
ತುಪ್ಪ ಮೊದಲಾದ ದ್ರವ್ಯಗಳನ್ನು ಸುರಿದು ಮಾಡುವ ಸಾವಿರ ಯಾಗಗಳಿಗಿಂತ ಒಂದು ಪ್ರಾಣಿಯ ಒಡಲನ್ನು ಹರಿದು ತಿನ್ನುದಿರುವುದು
ಮೇಲು.

Tamil Transliteration
Avisorin Thaayiram Vettalin Ondran
Uyirsekuth Thunnaamai Nandru.

Explanations
Holy Kural #260
ಕೊಲ್ಲದವನನ್ನೂ ಮಾಂಸ ತ್ಯಾಜ್ಯ ಮಾಡಿದವನನ್ನೂ ಎಲ್ಲಾ ಪ್ರಾಣಿಗಳೂ (ಭಕ್ತಿಯಿಂದ) ಕೈಜೋಡಿಸಿ ನಮಸ್ಕರಿಸುವುದು.

Tamil Transliteration
Kollaan Pulaalai Maruththaanaik Kaikooppi
Ellaa Uyirun Thozhum.

Explanations
🡱