ರಾಯಭಾರ

Verses

Holy Kural #681
ಪ್ರೀತಿಯುಳ್ಳವನಾಗಿರುವುದು, ತಕ್ಕ ವಂಶೋದ್ಭವನಾಗಿರುವುದು, ಅರಸನು ಮೆಚ್ಚುವ ಗುಣಗಳನ್ನು ಪಡೆದಿರುವುದು- ಇವು
ರಾಯಭಾರವನ್ನು ನಡೆಸುವವನ ಲಕ್ಷಣಗಳು.

Tamil Transliteration
Anputaimai Aandra Kutippiraththal Vendhavaam
Panputaimai Thoodhuraippaan Panpu.

Explanations
Holy Kural #682
ಪ್ರೀತಿ, (ತನ್ನ ವ್ಯವಹಾರದಲ್ಲಿ) ಅರಿವು, ವಿಚಾರಮಾಡಿ ಆಡುವ ಮಾತುಗಾರಿಕೆ- ಇವು ಮೂರು ದೂತನಲ್ಲಿ ಅನಿವಾರ್ಯವಾದ ಗುಣಗಳು.

Tamil Transliteration
Anparivu Aaraaindha Solvanmai Thoodhuraippaarkku
Indri Yamaiyaadha Moondru.

Explanations
Holy Kural #683
(ದೂತನಾದವನು) ಬೇರೆ ಅರಸರಲ್ಲಿಗೆ ಹೋಗಿ ತನ್ನರಸನ ವಿಜಯ ಸಾಧನೆಗಳನ್ನು ವಿಶದಪಡಿಸುವ ಜಾಣ್ಮೆಯನ್ನು ತೋರುವುದರಿಂದ,
ರಾಜ್ಯ ಶಾಸ್ತ್ರ ಬಲ್ಲವರಲ್ಲೆ ಪಂಡಿತನೆನಿಸಿಕೊಳ್ಳುತ್ತಾನೆ.

Tamil Transliteration
Noolaarul Noolvallan Aakudhal Velaarul
Vendri Vinaiyuraippaan Panpu.

Explanations
Holy Kural #684
(ಸ್ವಾಭಾವಿಕ) ಅರಿವು, ಆಕರ್ಷಕ ನೋಟ, ಸತತ ಪ್ರಯತ್ನದಿಂದ ಬಂದ ಕಲಿಕೆ- ಈ ಮೂರರ ಹೊಂದಾಣಿಕೆಯುಳ್ಳವನು, ದೂದು ಹೇಳುವ
ಕೆಲಸಕ್ಕೆ ತೊಡಗಬಹುದು.

Tamil Transliteration
Arivuru Vaaraaindha Kalviim Moondran
Serivutaiyaan Selka Vinaikku.

Explanations
Holy Kural #685
ಹೊರನಾಡಿನ ಅರಸರಿಗೆ ಹೇಳುವುದನ್ನು ಸಂಗ್ರಹವಾಗಿ, ಅಹಿತವಾದ ವಿಷಯಗಳನ್ನು ಬಿಟ್ಟು, ನಗೆಸೂಸುವಂತೆ ಹೇಳಿ ತನ್ನರಸನಿಗೆ
ಒಳ್ಳೆಯದಾಗುವಂತೆ ಮಾಡುವವನೇ ದೂತನೆನಿಸಿಕೊಳ್ಳುವನು.

Tamil Transliteration
Thokach Chollith Thoovaadha Neekki Nakachcholli
Nandri Payappadhaan Thoodhu.

Explanations
Holy Kural #686
(ರಾಜನೀತಿ ಮೊದಲಾದುವುಗಳನ್ನು) ಕಲಿತು, (ಹಗೆಗಳ ಬಿರುನೋಟಕ್ಕೆ) ಹೆದರದೆ, ಹೇಳುವುದನ್ನು ಮನಮುಟ್ಟುವಂತೆ ಹೇಳಿ, ಕಾಲಕ್ಕೆ
ತಕ್ಕ ತಿಳುವಳಿಕೆ ಹೊಂದಿರುವವನೇ ದೂತನೆನಿಸಿಕೊಳ್ಳುವನು.

Tamil Transliteration
Katrukkan Anjaan Selachchollik Kaalaththaal
Thakkadhu Arivadhaam Thoodhu.

Explanations
Holy Kural #687
ತನ್ನ ಕರ್ತವ್ಯವನ್ನು ಚೆನ್ನಾಗಿ ಬಲ್ಲವನಾಗಿ, ಅದನ್ನು ನೆರವೇರಿಸಲು ತಕ್ಕ ಕಾಲವನ್ನು ನಿರೀಕ್ಷಿಸಿ, ತಕ್ಕ ಸ್ಥಳವನ್ನೂ ಬಲ್ಲವನಾಗಿ,
ವಿಚಾರಮಾಡಿ, ದೂತ ಕಾರ್ಯವನ್ನು ನೆರವೇರಿಸ ಬಲ್ಲವನು ದೂತರಲ್ಲಿಯೇ ಶ್ರೇಷ್ಠನೆನಿಸಿಕೊಳ್ಳುವನು.

Tamil Transliteration
Katanarindhu Kaalang Karudhi Itanarindhu
Enni Uraippaan Thalai.

Explanations
Holy Kural #688
ಶುದ್ಧವಾದ ನಡತೆ, ಪರರ ಸಹಕಾರ, ವಿದೆಗಾರಿಕೆ- ಈ ಮೂರರ ವಾಸ್ತವತೆಯನ್ನು ತಿಳಿದಿರುವುದೇ ದೂತ ಕಾರ್ಯ ಮಾಡುವವನ
ಲಕ್ಷಣಗಳು

Tamil Transliteration
Thooimai Thunaimai Thunivutaimai Immoondrin
Vaaimai Vazhiyuraippaan Panpu.

Explanations
Holy Kural #689
ದೋಷವುಳ್ಳ ಮಾತುಗಳನ್ನು ಬಾಯಿತಪ್ಪಿಯೂ ಹೇಳದಿರುವ ನಿಶ್ಚಲಧೋರಣೆಯುಳ್ಳವನೇ ಅರಸನು ಹೇಳಿಕಳಿಸಿದ ಮಾತುಗಳನ್ನು
ಇತರ ಅರಸರಿಗೆ ಹೇಳಲು ಸಮರ್ಥನಾದವನು.

Tamil Transliteration
Vitumaatram Vendharkku Uraippaan Vatumaatram
Vaaiseraa Vanka Navan.

Explanations
Holy Kural #690
ತನಗೆ (ತನ್ನ ಕೆಲಸದಲ್ಲಿ) ಸಾವು ಸಂಭವಿಸಿದರೂ ಹೆದರದೆ, ಅರಸನಿಗೆ ಒಳ್ಳೆಯದು ಉಂಟಾಗುವಂತೆ ಮಾಡುವವನೇ
ದೂತನೆನಿಸಿಕೊಳ್ಳುವನು.

Tamil Transliteration
Irudhi Payappinum Enjaadhu Iraivarku
Urudhi Payappadhaam Thoodhu.

Explanations
🡱