ವಿನಯವಂತರಾಗಿರುವುದು

Verses

Holy Kural #1011
ತಾನು ಮಾಡಿದ ಹೇಯ ಕಾರ್ಯಗಳಿಗಾಗಿ ನಾಚುವುದೇ ವಿನಯವಂತಿಕೆಯೆನಿಸುವುದು; ಅದಲ್ಲದೆ ಸುಂದರಾಂಗನೆಯರ
(ಸ್ವಾಭಾವಿಕ) ಬಾಚಿಕೆಯು ಬೇರೆ ಬಗೆಯದು.

Tamil Transliteration
Karumaththaal Naanudhal Naanun Thirunudhal
Nallavar Naanup Pira.

Explanations
Holy Kural #1012
ಊಟ, ಬಟ್ಟೆ ಮಿಕ್ಕೆಲ್ಲವುಗಳೂ ಜೀವಿಗಳಿಗೆಲ್ಲ ಸಾಮಾನ್ಯವಾದ ಗುಣ; ಆದರೆ ವಿನಯವಂತಿಕೆಯನ್ನು ಗಳಿಸುವುದು ಸದ್ಗುಣವುಳ್ಳ
ಮಾನವರ ವಿಶಿಷ್ಟ ಗುಣ.

Tamil Transliteration
Oonutai Echcham Uyirkkellaam Veralla
Naanutaimai Maandhar Sirappu.

Explanations
Holy Kural #1013
ಎಲ್ಲಾ ಜೀವಿಗಳಿಗೂ ಮಾಂಸ ಮಜ್ಜೆಗಳಿಂದ ಕೂಡಿದ ಶರೀರವೇ ನೆಲೆಯಾಗಿರುವಂತೆ, ಸಜ್ಜನಿಕೆಗೆ ನಾಚಿಕೆಯೆನ್ನುವ
ನಮ್ರಗುಣವೇ ನೆಲೆಯಾಗಿರುವುದು.

Tamil Transliteration
Oonaik Kuriththa Uyirellaam Naanennum
Nanmai Kuriththadhu Saalpu.

Explanations
Holy Kural #1014
ಸಜ್ಜನರಿಗೆ ವಿನಯವಂತಿಕೆ ಎನ್ನುವುದು ಒಂದು ಅಲಂಕಾರವಲ್ಲವೇ? ಆ ಅಲಂಕಾರವಿಲ್ಲದೆ ಹೋದಲ್ಲಿ ದೊಡ್ಡ ರೀತಿಯ
ನಡೆಯು ಒಂದು ಕುತ್ತು (ರೋಗ) ಎನಿಸಿಕೊಳ್ಳುವುದಿಲ್ಲವೆ?

Tamil Transliteration
Aniandro Naanutaimai Saandrorkku Aqdhindrel
Piniandro Peetu Natai.

Explanations
Holy Kural #1015
ಇತರರ ಮೇಲಿನ ನಿಂದೆಗಾಗಲೀ, ತಮ್ಮ ಮೇಲಿನ ನಿಂದೆಗಾಗಲೀ ನಾಚಿಕೊಳ್ಳುವ ಸ್ವಭಾವವುಳ್ಳವರನ್ನು ವಿನಯವಂತಿಕೆಯ
ಆವಾಸಸ್ಥಾನವಾಗಿರುವರೆಂದು ಲೋಕವು ಹೇಳುತ್ತದೆ.

Tamil Transliteration
Pirarpazhiyum Thampazhiyum Naanuvaar Naanukku
Uraipadhi Ennum Ulaku.

Explanations
Holy Kural #1016
ವಿನಯವಂತಿಕೆಯೆಂಬ ಬೇಲಿಯನ್ನು ತಮ್ಮ ಸುತ್ತ ಹಾಕಿಕೊಳ್ಳದೆ, ಮೇಲಾದವರು (ದೊಡ್ಡವರು) ಈ ವಿಶಾಲವಾದ
ಪ್ರಪಂಚದಲ್ಲಿ ಬಾಲುವೆ ನಡೆಸಲು ಇಚ್ಚಿಸುವುದಿಲ್ಲ.

Tamil Transliteration
Naanveli Kollaadhu Manno Viyangnaalam
Penalar Melaa Yavar.

Explanations
Holy Kural #1017
ವಿನಯವೇ ತಮ್ಮ ಗುಣವಾಗಿ ಉಳ್ಳವರು ಅದಕ್ಕಾಗಿ ತಮ್ಮ ಜೀವವನ್ನು ಕೊಡುವರು; ಜೀವವನ್ನು ಕಾಪಾಡುವ ಹಣಕ್ಕಾಗಿ
ತಮ್ಮ ವಿನಯವನ್ನು (ಎಂದಿಗೂ) ಬಿಡುವುದಿಲ್ಲ

Tamil Transliteration
Naanaal Uyiraith Thurappar Uyirpporuttaal
Naandhuravaar Naanaal Pavar.

Explanations
Holy Kural #1018
ಇತರರು ನಾಚುವಂಥ ಹೀನಕೆಲಸಕ್ಕೆ ತಾನು ನಾಚದೆ ಇರುವ ಪಕ್ಷದಲ್ಲಿ ಧರ್ಮವು ಅಂಥವನನ್ನು ಕಂಡು ನಾಚಿ ಕೈಬಿಡುತ್ತದೆ.

Tamil Transliteration
Pirarnaanath Thakkadhu Thaannaanaa Naayin
Aramnaanath Thakkadhu Utaiththu.

Explanations
Holy Kural #1019
ಒಬ್ಬನು ನಡತೆ ತಪ್ಪಿದರೆ, ಅದು ಅವನ ಕುಲವನ್ನು ಸುಟ್ಟು ನಾಶಮಾಡುತ್ತದೆ; ವಿನಯವನ್ನು ಕೈಬಿಟ್ಟರೆ ಅದು ಅವನ
ಏಳ್ಗೆಯೆಲ್ಲವನ್ನೂ ನಾಶ ಮಾಡುತ್ತದೆ.

Tamil Transliteration
Kulanjutum Kolkai Pizhaippin Nalanjutum
Naaninmai Nindrak Katai.

Explanations
Holy Kural #1020
ಅಂತರಂಗದಲ್ಲಿ ನಾಚಿಕೆ ಪಡೆದಿರುವವರು ಲೋಕದಲ್ಲಿ ಓಡಾಡುವುದು, ಸೂತ್ರದ ದಾರದಿಂದ ಚಲಿಸುತ್ತ ಜೀವವಿರುವಂತೆ
ಭ್ರಮೆಯನ್ನು ಹುಟ್ಟಿಸುವ ಮರದ ಬೊಂಬೆಯನ್ನು ಹೋಲುವುದು.

Tamil Transliteration
Naanakath Thillaar Iyakkam Marappaavai
Naanaal Uyirmarutti Atru.

Explanations
🡱