ವಿರಹದಿಂದ ಕೃಶವಾಗಿ ದುಃಖಿಸುವುದು

Verses

Holy Kural #1161
ಈ ಕಾಮವೇದನೆಯನ್ನು, ಇತರರು ತಿಳಿಯಬಾರದೆಂದು ಮರೆಸುತ್ತಿದ್ದೇನೆ. ಆದರೆ ಇದು ಊಟೆಯ ನೀರಿನಂತೆ ತೋಡುತ್ತ ತೋಡುತ್ತ ಒಸರುತ್ತಲೇ ಹೋಗುವುದು.

Tamil Transliteration
Maraippenman Yaaniqdho Noyai Iraippavarkku
Ootruneer Pola Mikum.

Explanations
Holy Kural #1162
ಈ ಪ್ರಣಯ ಯಾತನೆಯನ್ನು ನನ್ನಿಂದ ಬಚ್ಚಿಡಲೂ ಸಾಧ್ಯವಾಗುತ್ತಿಲ್ಲ; ನನಗೆ ಯಾತನೆಯುಂಟು ಮಾಡಿದ ಇನಿಯನಿಗೆ ಹೇಳಿಕೊಳ್ಳುವೆ ಎಂದರೆ ನಾಚಿಕೆ ಅಡ್ಡಲಾಗಿ ಬರುತ್ತಿದೆ.

Tamil Transliteration
Karaththalum Aatrenin Noyainoi Seydhaarkku
Uraiththalum Naanuth Tharum.

Explanations
Holy Kural #1163
ವೇದನೆಯನ್ನು ತಾಳಲಾರದೆ (ತತ್ತರಿಸುತ್ತಿರುವ) ನನ್ನ ಶರೀರದಲ್ಲಿ, ಪ್ರಾಣವೇ ಕಾವಡಿ ಕೋಲಾಗಿ, ಕಾಮ ವೇದನೆಯೂ ನಾಚಿಕೆಯೂ ತುಯ್ಯಲಾಡುತ್ತಿದೆ.

Tamil Transliteration
Kaamamum Naanum Uyirkaavaath Thoongumen
Nonaa Utampin Akaththu.

Explanations
Holy Kural #1164
ಕಾಮ ವೇದನೆಯೆಂಬ ಕಡಲು ಮಾತ್ರ ಮೊರೆಯುತ್ತಿದೆ. ಆದರೆ ಅದನ್ನು ದಾಟಿ ಸುರಕ್ಷಿತವಾಗಿ ಕೊಂಡೊಯ್ಯುವ ನಾವೆಯೇ ಇಲ್ಲವಾಗಿದೆ.

Tamil Transliteration
Kaamak Katalmannum Unte Adhuneendhum
Emap Punaimannum Il.

Explanations
Holy Kural #1165
ಪ್ರೇಮದಿಂದಲೇ ದುಃಖವನ್ನು ತಂದೊಡ್ಡಬಲ್ಲವರು ಹಗೆತನದಲ್ಲಿ ಏನು ತಾನೆ ಮಾಡಲಾರರು?

Tamil Transliteration
Thuppin Evanaavar Mankol Thuyarvaravu
Natpinul Aatru Pavar.

Explanations
Holy Kural #1166
ಕಾಮವು ಸುಖವುಂಟು ಮಾಡುವಾಗ ಅದರ ಸುಖ ಕಡಲಿನಂತೆ; ಅದು ಸಂಕಟದಲ್ಲಿ ಸಿಲುಕಿಸುವಾಗ ಅದರ ದುಃಖವು ಕಡಲಿಗಿಂತ ಮಿಗಿಲು.

Tamil Transliteration
Inpam Katalmatruk Kaamam Aqdhatungaal
Thunpam Adhanir Peridhu.

Explanations
Holy Kural #1167
. ಕಾಮವೆನ್ನುವ ಕಡು ಪ್ರವಾಹವನ್ನು ಈಜಿಯೂ ಅದರ ತೀರವನ್ನು ನಾನು ಕಾಣಲಾರಳಾಗಿದ್ದೇನೆ; ನಟ್ಟೆರುಳಿನಲ್ಲೂ ನಾನು ಉಸಿರೊಡನೆ ಏಕಾಂಗಿಯಾಗಿದ್ದೇನೆ.

Tamil Transliteration
Kaamak Katumpunal Neendhik Karaikaanen
Yaamaththum Yaane Ulen.

Explanations
Holy Kural #1168
. ಪಾಪ! ಈ ರಾತ್ರಿಯು ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಸುಖ ನಿದ್ರಯಿತ್ತು ತಾನು ಮಾತ್ರ ಎಚ್ಚರವಾಗಿದೆ! ಅದಕ್ಕೆ ನಾನಲ್ಲದೆ ಬೇರೆ ಸಂಗಾತಿ ಇಲ್ಲ!

Tamil Transliteration
Mannuyir Ellaam Thuyitri Aliththiraa
Ennalladhu Illai Thunai.

Explanations
Holy Kural #1169
ಈ ವಿರಹದ ದಿನಗಳಲ್ಲಿ ದೀರ್ಘವಾಗಿ ಕಾಣುವ ಈ ಇರುಳು ನಿರ್ದಯನಾದ ನನ್ನಿನಿಯನ ಕಾಠಿಣ್ಯಕ್ಕಿಂತ ಹೆಚ್ಚು ಕಠಿಣವಾಗಿ ವರ್ತಿಸುತ್ತಿದೆ!

Tamil Transliteration
Kotiyaar Kotumaiyin Thaamkotiya Innaal
Netiya Kazhiyum Iraa.

Explanations
Holy Kural #1170
ಮನಸ್ಸು ಹೇಗೋ ಹಾಗೆ ಕಣ್ಣುಗಳೂ ಪ್ರಿಯತಮನಿರುವೆಡೆಗೆ ವೇಗವಾಗಿ ತಲುಪುವುದಾದರೆ, (ಅಗಲಿಕೆಯ) ಕಣ್ಣೀರ ಹೊನಲಿನಲ್ಲಿ ಅವು ಈಜಬೇಕಿಲ್ಲ.

Tamil Transliteration
Ullampondru Ulvazhich Chelkirpin Vellaneer
Neendhala Mannoen Kan.

Explanations
🡱