ಸಂಯಮ ಸಡಿಲಿಕೆ

Verses

Holy Kural #1251
ಲಜ್ಜೆಯೆನ್ನುವ ಕೀಲಿ ಹಾಕಿದ ಸಂಯಮದ ಬಾಗಿಲನ್ನು ಕಾಮವೆಂಬ ಕೊಡಲಿಯು ಒಡೆದು ಹಾಕುತ್ತದೆ. (ಕಾಮವು ಲಜ್ಜೆಯನ್ನು
ಅತಿಕ್ರಮಿಸಿ ಸಂಯಮವನ್ನೂ ಸಡಿಲಿಸುತ್ತದೆ ಎಂದು ಭಾವ)

Tamil Transliteration
Kaamak Kanichchi Utaikkum Niraiyennum
Naanuththaazh Veezhththa Kadhavu.

Explanations
Holy Kural #1252
ಎಲ್ಲರೂ ವಿಶ್ರಾಂತಿ ಹೊಂದಿರುವ ನಡು ರಾತ್ರಿಯಲ್ಲೂ ನನ್ನ ಮನಸ್ಸನ್ನು (ಹಿಂಸಿಸಿ) ದುಡಿಸಿಕೊಳ್ಳುತ್ತಿರುವ ಕಾಮಕ್ಕೆ
ಕಣ್ಣಿಲ್ಲವೆಂಬುದು ದಿಟ!

Tamil Transliteration
Kaamam Enavondro Kannindren Nenjaththai
Yaamaththum Aalum Thozhil.

Explanations
Holy Kural #1253
ನಾನೋ ಕಾಮವನ್ನು (ಮನಸ್ಸಿನಾಳದಲ್ಲಿ) ಮರೆಸಿಕೊಳ್ಳಲೆತ್ತಿಸುತ್ತಿದ್ದೇನೆ. ಆದರೆ ಅದು ಯಾವ ಸೂಚನೆಯೂ ಇಲ್ಲದೆ
(ಸೀನಿನಂತೆ) ತನ್ನನ್ನು ಒಮ್ಮೆಲೇ ಹೊರಗೆ ತೋರ್ಪಡಿಸಿಕೊಳ್ಳುತ್ತಿದೆ.

Tamil Transliteration
Maraippenman Kaamaththai Yaano Kurippindrith
Thummalpol Thondri Vitum.

Explanations
Holy Kural #1254
ನಾನೋ ಇದುವರೆಗೆ ಸಂಯಮದಿಂದ ಇರುವುದಾಗಿ ತಿಳಿದುಕೊಂಡಿದ್ದೆ; ಆದರೆ ನನ್ನ ಕಾಮವು ಮರೆಯನ್ನು ಹಿರಿದು
ಬಹಿರಂಗವಾಗಿ ಬಯಲು ಮಾಡಿಕೊಳ್ಳುತ್ತಿದೆ.

Tamil Transliteration
Niraiyutaiyen Enpenman Yaanoen Kaamam
Maraiyirandhu Mandru Patum.

Explanations
Holy Kural #1255
ತಮ್ಮನ್ನು ಹಗೆಯಂತೆ ಅಗಲಿದ ಪ್ರಿಯತಮನ ಹಿಂದೆ ಹೋಗದೆ, ಅಭಿಮಾನವನ್ನು ಕಾಪಾಡಿಕೊಳ್ಳುವುದು
ಕಾಮವೇದನೆಗೊಳಗಾದವರಲ್ಲಿ ಸಾಧ್ಯವಿಲ್ಲ.

Tamil Transliteration
Setraarpin Sellaap Perundhakaimai Kaamanoi
Utraar Arivadhondru Andru.

Explanations
Holy Kural #1256
ಪ್ರೇಯಸಿಯನ್ನು ತೊರೆದು ಹೋದ ಇನಿಯನ ಹಿಂದ ಸಾರಲು ಬಯಸಿದ ನೆಲೆಯಲ್ಲಿರುವ ನನ್ನ ದುರ್ಬರವಾದ ಕಾಮ
ವೇದನೆಯು ಎಷ್ಟು ಸುಕುಮಾರವಾದುದೋ!

Tamil Transliteration
Setravar Pinseral Venti Aliththaro
Etrennai Utra Thuyar.

Explanations
Holy Kural #1257
ಇನಿಯನು ಪ್ರೇಮಾತುರನಾಗಿ ನನಗೆ ಇಷ್ಟವಾಗುವಂತಹ ಎಸಕಗೆಳನ್ನು ಮಾಡುವವನಾದರೆ, ನಾನು ನಾಚಿಕೆಯನ್ನು
ತೊರೆದು ಇರಬಲ್ಲೆನು.

Tamil Transliteration
Naanena Ondro Ariyalam Kaamaththaal
Peniyaar Petpa Seyin.

Explanations
Holy Kural #1258
ನಮ್ಮ ಕೆಣ್ತಿನದ ಸಂಯಮ ಎಂಬ ಕೋಟೆಯನ್ನು ಭೀತಿಸಬಲ್ಲ ಪಡೆಯುದರೆ, ಕಪಟ ನಾಟಕ ಸೂತ್ರಧಾರಿಯಾದ ಪ್ರಿಯತಮನ
ರಮಿಸುವ ಮೇಲ್ವಾತಗಳಲ್ಲವೆ?

Tamil Transliteration
Panmaayak Kalvan Panimozhi Andronam
Penmai Utaikkum Patai.

Explanations
Holy Kural #1259
ಅವರನ್ನು ದ್ವೇಷಿಸುತ್ತೇನೆಂದುಕೊಂಡು ಅವರಿಂದ ದೂರ ಸಾರಿದೆ; ಆದರೆ ನನ್ನ ಮನಸ್ಸು ಅವರೊಡನೆ ಕೂಡಲು
ತವಕಗೊಳ್ಳುತ್ತಿರುವುದನ್ನು ಅರಿತು ಬಿಳಿಸಾರಿ ಅಪ್ಪಿಕೊಂಡೆ.

Tamil Transliteration
Pulappal Enachchendren Pullinen Nenjam
Kalaththal Uruvadhu Kantu.

Explanations
Holy Kural #1260
ಬೆಂಕಿಯಲ್ಲಿ ಕೊಬ್ಬನ್ನು ಇಟ್ಟ ಹಾಗಿರುವ ನನ್ನಂಥ ಹೃದಯವುಳ್ಳವರಿಗೆ ಅವರನ್ನು ಕೂಡಿ, ಮತ್ತೆ ಮುನಿಸಿಕೊಂಡು ಇರ್ಯ್ತ್ತೇನೆಂದು ಹೇಳಿಕೊಳ್ಳುವ ಶಕ್ತಿಯುಂಟೆ.

Tamil Transliteration
Ninandheeyil Ittanna Nenjinaarkku Unto
Punarndhooti Nirpem Enal.

Explanations
🡱