ಸದ್ಗುಣವುಳ್ಳವರಾಗಿರುವುದು

Verses

Holy Kural #991
ಒಬ್ಬನು ಎಲ್ಲರಲ್ಲಿಯೂ ಸುಲಭವಾಗಿ ಸೇರುವವನಾದರೆ, ಅವನಿಗೆ ಸದ್ಗುಣಗಳನ್ನು ಪಡೆಯುವುದೂ ಸುಲಭ ಎಂದು ಜ್ಞಾನಿಗಳು
ಹೇಳುವರು.

Tamil Transliteration
Enpadhaththaal Eydhal Elidhenpa Yaarmaattum
Panputaimai Ennum Vazhakku.

Explanations
Holy Kural #992
ಪ್ರೀತಿಯುಳ್ಳವರಾಗಿರುವುದು, ಹೆಸರಾದ ಕುಲದಲ್ಲಿ ಹುಟ್ಟಿದ ಕೀರ್ತಿ ಇರುವದು, ಇವೆರಡೂ ಗುಣವುಳ್ಳವರಾಗಿ ಬಾಳುವ
ಸನ್ಮಾರ್ಗಗಳೆನಿಸುವುವು.

Tamil Transliteration
Anputaimai Aandra Kutippiraththal Ivvirantum
Panputaimai Ennum Vazhakku.

Explanations
Holy Kural #993
ಮನುಷ್ಯರು ತಮ್ಮ ದೇಹದ ಅಂಗಾಂಗಗಳಲ್ಲಿ ಪರಸ್ಪರ ಹೋಲುವುದು ಹೋಲಿಕೆಯಲ್ಲ; ಹೊಂದಿಕೊಳ್ಳುವ ಗುಣಗಳಿಂದ
ಹೋಲುವುದೇ ನಿಜವಾದ ಹೋಲಿಕಯೆನಿಸುವುದು.

Tamil Transliteration
Uruppoththal Makkaloppu Andraal Veruththakka
Panpoththal Oppadhaam Oppu.

Explanations
Holy Kural #994
ಒಳ್ಳೆಯ ನಡತೆ, ಉಪ್ಕಾರ ಬುದ್ಧಿ, ಇವುಗಳಿಂದ ಇತರರಿಗೆ ಪ್ರಯೋಜನವಾಗುವಂತೆ ಬಾಳುವ, ಸಾರ್ಥಕ ಜೀವಿಗಳ
ಗುಣಗಳನ್ನು ಇಡೀ ಲೋಕವೇ ಕೊಂಡಾಡುತ್ತದೆ.

Tamil Transliteration
Nayanotu Nandri Purindha Payanutaiyaar
Panpupaa Raattum Ulaku.

Explanations
Holy Kural #995
ವಿನೋದದಲ್ಲಿ ಕೂಡ ನಿಂದನೆಯು ದುಃಖವನ್ನು ತರುತ್ತದೆ; ಇತರರ ಸ್ವಭಾವವರಿತು ನಡೆಯುವ ಸದ್ಗುಣಿಗಳ ಹಗೆತನದಲ್ಲಿ
ಕೂಡ ಕರುಣೆ ತುಂಬಿರುತ್ತದೆ.

Tamil Transliteration
Nakaiyullum Innaa Thikazhchchi Pakaiyullum
Panpula Paatarivaar Maattu.

Explanations
Holy Kural #996
ಸದ್ಗುಣವುಳ್ಳವರನ್ನೇ ಆಧರಿಸಿಕೊಂಡು ಲೋಕದ ನಡೆ ನಿಂತಿದೆ. ಅದಿಲ್ಲವಾದರೆ, ಮಣ್ಣಿನಲ್ಲಿ ಸೇರಿ ಅದು ನಾಶವಾಗಿ
ಹೋಗುವುದು ನಿಶ್ಚಯ.

Tamil Transliteration
Panputaiyaarp Pattuntu Ulakam Adhuindrel
Manpukku Maaivadhu Man.

Explanations
Holy Kural #997
ಮಾನವೀಯ ಗುಣವನ್ನು ಹೊಂದಿರದೆ ಇರುವವರು, ಅರವನ್ನು ಹೋಲುವ ಹರಿತವಾದ ಬುದ್ಧಿಯುಳ್ಳವರಾದರೂ ಚಲನೆಯಿಲ್ಲದ
ಮರವನ್ನೇ ಹೋಲುತ್ತಾರೆ.

Tamil Transliteration
Arampolum Koormaiya Renum Marampolvar
Makkatpanpu Illaa Thavar.

Explanations
Holy Kural #998
ಸ್ನೇಹವಿಲ್ಲದವರಾಗಿ ಕೆಟ್ಟದ್ದನ್ನೇ ಮಾಡುವವರಿಗೆ ಕೂಡ ಒಳ್ಳೆಯ ಗುಣಗಳನ್ನು ಪ್ರದರ್ಶಿಸದಿರುವುದು ಕೀಳ್ತರವೆನಿಸುವುದು.

Tamil Transliteration
Nanpaatraar Aaki Nayamila Seyvaarkkum
Panpaatraar Aadhal Katai.

Explanations
Holy Kural #999
ನಗಬಲ್ಲ ಗುಣವಿಲ್ಲದವರಿಗೆ ವಿಶಾಲವಾದ ಈ ಲೋಕದಲ್ಲಿ ಹಗಲಿನಲ್ಲೂ ಕತ್ತಲೆಯೇ ಕಾಣುವುದು.

Tamil Transliteration
Nakalvallar Allaarkku Maayiru Gnaalam
Pakalumpaar Pattandru Irul.

Explanations
Holy Kural #1000
ಗುಣವಿಲ್ಲದವನ ಕೈಲಿರುವ ಅತುಳವಾದ ಐಶ್ವರ್ಯವು ಕೊಳಕು ಪಾತ್ರಯಲ್ಲಿಟ್ಟು ಒಳ್ಲೆಯ ಹಾಲಿನಂತೆ ಶೀಘ್ರವೇ ಕೆಟ್ಟು ಹೋಗುತ್ತದೆ.

Tamil Transliteration
Panpilaan Petra Perunjelvam Nanpaal
Kalandheemai Yaaldhirin Thatru.

Explanations
🡱