ಸದ್ಭಾವನ

Verses

Holy Kural #981
ಕರ್ತವ್ಯವೇನೆಂಬುದನ್ನು ಅರಿತು ಸದ್ಭಾವವನ್ನು ಪಡೆದಿರುವವರಿಗೆ ಒಳ್ಳೆಯದೆಲ್ಲವೂ ಸಹಜವಾದ ಕ್ರಿಯೆಯಾಗಿರುವುದೆಂದು
ಹೇಳುವರು.

Tamil Transliteration
Katanenpa Nallavai Ellaam Katanarindhu
Saandraanmai Merkol Pavarkku.

Explanations
Holy Kural #982
ಸಜ್ಜನರ ಸುಖ ಬಾಳುವೆಯೆನ್ನುವುದು ಅವರ ಗುಣದ ಒಳಿತಿಂದಲೇ ಉಂಟಾಗುವುದು; ಮಿಕ್ಕ ಇಂದ್ರಿಯಗಳಿಂದ ಬರುವ ಸುಖ,
ಬರಿಯು ಹೆಸರಿಗೆ ಮಾತ್ರ.

Tamil Transliteration
Kunanalam Saandror Nalane Piranalam
Ennalaththu Ulladhooum Andru.

Explanations
Holy Kural #983
ಪ್ರೀತಿ, ವಿನಯಶೀಲತೆ, ಉಪಕಾರ, ಪ್ರಸನ್ನತೆ, ಸತ್ಯಶೀಲತೆಯೂ ಸೇರಿದ ಐದು ಗುಣಗಳು, ಸದ್ಭಾವನೆ ಎಂಬ ಕಟ್ಟಡವನ್ನು ಆಧರಿಸಿ
ನಿಂತಿರುವ ಆಧಾರಸ್ತಂಭಗಳು.

Tamil Transliteration
Anpunaan Oppuravu Kannottam Vaaimaiyotu
Aindhusaal Oondriya Thoon.

Explanations
Holy Kural #984
ಇತರ ಪ್ರಾಣಿಗಳನ್ನು ಕೊಲ್ಲದಿರುವ ಒಳ್ಳೆಯ ಗುಣವೇ ತಪಸ್ಸು; ಇತರರ ಕೆಡುಕನ್ನು ಎತ್ತಿ ಆಡದಿರುವ ಒಳ್ಳೆಯ ಗುಣವೇ ಸದ್ಭಾವನೆ.

Tamil Transliteration
Kollaa Nalaththadhu Nonmai Pirardheemai
Sollaa Nalaththadhu Saalpu.

Explanations
Holy Kural #985
ಬಲಶಾಲಿಗಳ ಸಾಮರ್ಥ್ಯವಿರುವುದು ಅವರು ತಗ್ಗಿ ನಡೆಯುವುದರಲ್ಲಿ; ಅದು ಸಜ್ಜನರು ತಮ್ಮ ಹಗೆಗಳನ್ನು ಪರಿವರ್ತಿಸುವ
ಸಾಧನವೂ ಹೌದು.

Tamil Transliteration
Aatruvaar Aatral Panidhal Adhusaandror
Maatraarai Maatrum Patai.

Explanations
Holy Kural #986
ತಮಗೆ ಸಮಾನರಲ್ಲದವರಲ್ಲಿಯೂ ಸೋಲನ್ನು ಸ್ವೀಕರಿಸುವುದು, ಸದ್ಭಾವನೆಯೆಂಬ ಹೊನ್ನಿನ ಗುಣವನ್ನು ಅರಿಯುವ ಒರೆಗಲ್ಲು.

Tamil Transliteration
Saalpirkuk Kattalai Yaadhenin Tholvi
Thulaiyallaar Kannum Kolal.

Explanations
Holy Kural #987
ತಮಗೆ ಅಹಿತವಾಗಿ ನಡೆದುಕೊಂಡವರಲ್ಲಿಯೂ ಹಿತವನ್ನೇ ಬಯಸದೆ ಹೋದರೆ ಅಂಥ ಸದ್ಭಾವನೆಯಿಂದ ಏನು ಸಾರ್ಥಕತೆ ಇದೆ?

Tamil Transliteration
Innaasey Thaarkkum Iniyave Seyyaakkaal
Enna Payaththadho Saalpu.

Explanations
Holy Kural #988
ಒಬ್ಬನಿಗೆ ಸದ್ಭಾವನೆಯೆನ್ನುವ ಬಲವು ಬಂದಾಗ, ದಾರಿದ್ರ್ಯವು ಕೂಡ ಅವಮಾನಕರವೆನಿಸುವುದಿಲ್ಲ.

Tamil Transliteration
Inmai Oruvarku Ilivandru Saalpennum
Thinmai Un Taakap Perin.

Explanations
Holy Kural #989
ಸದ್ಭಾವನೆಗಳ ಕಡಲು ಎಂದೆನಿಸಿಕೊಳ್ಳುವವರು, ಪ್ರಳಯ ಕಾಲ ಬಂದರೂ ತಾವು ಅಚಲರಾಗಿ ಉಳಿಯುವರು.

Tamil Transliteration
Oozhi Peyarinum Thaampeyaraar Saandraanmaikku
Aazhi Enappatu Vaar.

Explanations
Holy Kural #990
ಸಜ್ಜನರ ಸದ್ಭಾವನೆಯು ಕುಂದಿದರೆ, ವಿಸ್ತಾರವಾದ ಭೂಮಿಯು ಕೂಡ ತನ್ನ ಭಾರವನ್ನು ತಾಳಿಕೊಳ್ಳಲಾರದು.

Tamil Transliteration
Saandravar Saandraanmai Kundrin Irunilandhaan
Thaangaadhu Manno Porai.

Explanations
🡱