ಸಲಿಗೆ

Verses

Holy Kural #801
ಸಲಿಗೆ ಎಂದರೆ, ಬಹಳ ಕಾಲದ ಗಾಢವಾದ ಗೆಳೆತನದ ಹಕ್ಕಿನಿಂದ ಮಾಡುವ ಕೆಲಸಗಳಲ್ಲಿ ಸ್ವಲ್ಪವೂ ವಿರೋಧವಿಲ್ಲದೆ ಬಂದಾಗಿರುವುದೇ.

Tamil Transliteration
Pazhaimai Enappatuvadhu Yaadhenin Yaadhum
Kizhamaiyaik Keezhndhitaa Natpu.

Explanations
Holy Kural #802
. ಗೆಳೆಯರಾದವರು ಸಲಿಗೆಯ ಹಕ್ಕಿನಿಂತ ಮಾಡೂವ ಕೆಲಸಗಳೇ ಗೆಳೆತನದ ಮುಖ್ಯವಾದ ಅಂಗಗಳು. ಅದುದರಿಂದ ಆ ಕೆಲಸಗಳಿಗೆ ಕೋಪಿಸಿಕೊಳ್ಳದೆ ಪರಸ್ಪರ ಒಪ್ಪಿಕೊಂಡು ಸಂತೋಷಪಡುವುದೇ ತಿಳಿದವರ ಲಕ್ಷಣ (ಧರ್ಮ)

Tamil Transliteration
Natpir Kuruppuk Kezhudhakaimai Matradharku
Uppaadhal Saandror Katan.

Explanations
Holy Kural #803
. ಸ್ನೇಹಿತರು ಸಲಿಗೆಯ ಹಕ್ಕಿನಿಂದ ಮಾಡಿದ ಕಾರ್ಯಗಳನ್ನು ಮಾಡಿದ ರೀತಿಯಲ್ಲೆ ಒಪ್ಪಿಕೊಳ್ಳುದ ಹೊದರೆ, ಅವರಲ್ಲಿರುವ ನಿಡುಗಾಲದ ಸ್ನೇಹದಿಂದೇನು ಲಾಭ?

Tamil Transliteration
Pazhakiya Natpevan Seyyung Kezhudhakaimai
Seydhaangu Amaiyaak Katai.

Explanations
Holy Kural #804
ಗೆಳೆತನದ ಸಲಿಗೆಯಿಂದ ಸ್ನೇಹಿತರು ತಮ್ಮನ್ನು ಕೇಳದೆಯೇ ಏನಾದರೊಂದು ಕೆಲಸ ಮಾಡಿದಲ್ಲಿ, ಅದನ್ನು ತಿಳಿದವರು ಸಂತೋಷದಿಂದ ಒಪ್ಪಿಕೊಳ್ಳುವರು.

Tamil Transliteration
Vizhaidhakaiyaan Venti Iruppar Kezhudhakaiyaar
Kelaadhu Nattaar Seyin.

Explanations
Holy Kural #805
ಸ್ನೇಹಿತರಾದವರು ಮನಸ್ಸು ನೋಯುವಂಥ ಕೆಲಸವೇನಾದರೂ ಮಾಡಿದರೆ, ಅದಕ್ಕೆ ಅಜ್ಞಾನ ಮಾತ್ರವಲ್ಲದೆ, ಕೆಳೆತನದ ಗಾಢವಾದ ಸಲಿಗೆಯೂ ಕಾರಣವೆಂದು ತಿಳಿಯಬೇಕು.

Tamil Transliteration
Pedhaimai Ondro Perungizhamai Endrunarka
Nodhakka Nattaar Seyin.

Explanations
Holy Kural #806
ಸ್ನೇಹದ ಎಲ್ಲೆಯನು ಮೀರದೆ ಅದರ ಪರಿಧಿಯಲ್ಲಿ ನಿಂತರು, ಸ್ನೇಹಿತರಿಂದ ಕೇಡುಂಟಾದ ಸಮಯದಲ್ಲಿಯೂ ಅವರ ಗೆಳೆತನವನ್ನು ಬಿಡುವುದಿಲ್ಲ.

Tamil Transliteration
Ellaikkan Nindraar Thuravaar Tholaivitaththum
Thollaikkan Nindraar Thotarpu.

Explanations
Holy Kural #807
ಬಹುಕಾಲದ ಗಾಢ ಸ್ನೇಹದಲ್ಲಿ ಬಂದ ಸ್ನೇಹಿತರು, ತಮ್ಮಲ್ಲಿ ಪಳಗಿದವರೇ ತಮಗೆ ನಾಶವನ್ನು ತಂದರೂ ಅವರಲ್ಲಿರುವ ಪ್ರೀತಿಯನ್ನು ತ್ಯಜಿಸುವುದಿಲ್ಲ.

Tamil Transliteration
Azhivandha Seyyinum Anparaar Anpin
Vazhivandha Kenmai Yavar.

Explanations
Holy Kural #808
ತಮ್ಮ ಸಲಿಗೆಯ ಗೆಳೆಯರ ದೋಷಗಳನ್ನು ಇತರರು ಹೇಳಿದರೂ ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ಇರುವವರು, ಆ ಸ್ನೇಹಿತರು ತಪ್ಪು ಮಾಡಿದ ದಿನವೇ ಶುಭ ದಿನವೆಂದು ಬಗೆಯುತ್ತಾರೆ.

Tamil Transliteration
Kelizhukkam Kelaak Kezhudhakaimai Vallaarkku
Naalizhukkam Nattaar Seyin.

Explanations
Holy Kural #809
ಗಾಢತ್ವವು ಕೆಡದಂತೆ, ಬಹುಕಾಲದಿಂದ ಬೆಸೆದು ಬಂದ ಗೆಳೆತನದ ಸಂಬಂಧವನ್ನು ಕೈಬಿಡದೆ ಉಳಿಸಿಕೊಂಡು ಬಂದವರನ್ನು ಲೋಕವು ಪ್ರೀತಿಯಿಂದ ಕೊಂಡಾಡುತ್ತದೆ.

Tamil Transliteration
Ketaaa Vazhivandha Kenmaiyaar Kenmai
Vitaaar Vizhaiyum Ulaku.

Explanations
Holy Kural #810
ತಮ್ಮ ಸಲಿಗೆಯ ಸ್ನೇಹಿತರ ಗಾಢವಾದ ಗೆಳೆತನದಿಂದ ವಿಮುಖರಾಗದವರನ್ನು ಅವರ ಶತ್ರುಗಳೂ ಕೊಂಡಾಡುತ್ತಾರೆ.

Tamil Transliteration
Vizhaiyaar Vizhaiyap Patupa Pazhaiyaarkan
Panpin Thalaippiriyaa Thaar.

Explanations
🡱