ಸಿರಿ ಕೊಡಿಸುವ ಬಗೆ

Verses

Holy Kural #751
ಹುರುಳಿಲ್ಲದವರನ್ನು ಗಣನೀಯರನ್ನಗಿ ಮಾಡುವುದು ಸಿರಿ; ಅದಕ್ಕಿಂತ ಮುಖ್ಯವಾದ ವಸ್ತು ಲೋಕದಲ್ಲಿ ಬೇರೆ ಇಲ್ಲ.

Tamil Transliteration
Porulal Lavaraip Porulaakach Cheyyum
Porulalladhu Illai Porul.

Explanations
Holy Kural #752
ಬಡವರನ್ನು (ಅವರಲ್ಲಿ ಒಳ್ಳೆಯ ಗುಣಗಳಿದ್ದರೂ) ಎಲ್ಲರೂ ಕೀಳಾಗಿ ನೋಡುವರು; ಸಿರಿವಂತರನ್ನು (ಅವರಲ್ಲಿ ಅವಗುಣಗಳಿದ್ದರೂ)
ಎಲ್ಲರೂ ಸ್ತುತಿಸುವರು.

Tamil Transliteration
Illaarai Ellaarum Elluvar Selvarai
Ellaarum Seyvar Sirappu.

Explanations
Holy Kural #753
(ಒಬ್ಬನಲ್ಲಿರುವ) ಸಿರಿ ಎನ್ನುವ ನಂದದ ಬೆಳಕು, ಅವನು ನೆನೆದ ಪ್ರದೇಶವನ್ನೆಲ್ಲ ವ್ಯಾಪಿಸಿ, ಇರುವ ಕತ್ತಲನ್ನೆಲ್ಲ (ಆತಂಕಗಳನ್ನೆಲ್ಲ)
ಹೋಗಲಾಡಿಸುತ್ತದೆ

Tamil Transliteration
Porulennum Poiyaa Vilakkam Irularukkum
Enniya Theyaththuch Chendru.

Explanations
Holy Kural #754
ಸರಿಯಾದ ಮಾರ್ಗವರಿತು, (ಇತರರಿಗೆ) ಕೆಡುಕುಂಟು ಮಾಡದೆ ಬಂದು ಸೇರಿದ ಸಿರಿಯು, (ಒಬ್ಬನಿಗೆ) ಸನ್ಮಾರ್ಗವನ್ನೂ ಸಂತೋಷವನ್ನು
ಈಯುತ್ತದೆ.

Tamil Transliteration
Araneenum Inpamum Eenum Thiranarindhu
Theedhindri Vandha Porul.

Explanations
Holy Kural #755
(ಪ್ರಚೆಗಳಲ್ಲಿ) ದಯೆ, ಪ್ರೀತಿಗಳನ್ನು ತೋರದೆ, ಬರುವ ಸಿರಿ ಸಂಪತ್ತನ್ನು ಅರಸನಾದವನು ಸ್ವೀಕರಿಸದೆ ದೂರವಿಡಬೇಕು.

Tamil Transliteration
Arulotum Anpotum Vaaraap Porulaakkam
Pullaar Purala Vital.

Explanations
Holy Kural #756
ಸಾರ್ವಜನಿಕೆ ಹಣ, ಸುಂಕ ರೂಪದಲ್ಲಿ ಬಂದ ಹಣ, ತನ್ನ ಶತ್ರುಗಳನ್ನು ಗೆದ್ದ ಮೇಲ್;ಎ ಅವರು, ಕಪ್ಪವಾಗಿಕೊಡುವ ಹಣ- ಇದು
ಅರಸನ (ಅಧಿಕಾರಕ್ಕೆ ಸೇರಿದ) ಸೊತ್ತಾಗುವುದು.

Tamil Transliteration
Uruporulum Ulku Porulumdhan Onnaarth
Theruporulum Vendhan Porul.

Explanations
Holy Kural #757
ಕರುಣೆ ಎನ್ನುವುದು ಪ್ರೀತಿಯ ಕೂಸು ಇದ್ದಂತೆ; ಅದು ಬೆಳೆಯಬೇಕಾದರೆ ಸಿರಿಯೆನ್ನುವ ಅಕ್ಕರೆಯ ಪೋಷಣೆ ಬೇಕು.

Tamil Transliteration
Arulennum Anpeen Kuzhavi Porulennum
Selvach Cheviliyaal Untu.

Explanations
Holy Kural #758
ತನ್ನ ಕೈಯಲ್ಲಿ ಸಿರಿಯಿಟ್ಟುಕೊಂಡು ಒಬ್ಬನು ಒಂದು ಕೆಲಸವನ್ನು ಕೈಗೊಂಡರೆ ಬೆಟ್ಟವೆನ್ನೇರಿ ಆನೆಗಳ ಹೋರಾಟವನ್ನು ಕಂಡದೆ ಅದರ
ಫಲವು ನಿಚ್ಚಳವಾಗಿರುತ್ತದೆ.

Tamil Transliteration
Kundreri Yaanaip Por Kantatraal Thankaiththondru
Untaakach Cheyvaan Vinai.

Explanations
Holy Kural #759
ಹಣವನ್ನು (ಹೇರಳವಾಗಿ) ಕೂಡಿಸಬೇಕು; ಅದು ಶತ್ರುಗಳ ಗರ್ವವನ್ನು ಕತ್ತರಿಸಿ ಹಾಕುವ ಆಯುಧ; ಅದಕ್ಕಿಂತ ಹಿರಿತವಾದ ಆಯುಧ ಬೇರೆ
ಇಲ್ಲ.

Tamil Transliteration
Seyka Porulaich Cherunar Serukkarukkum
Eqkadhanir Kooriya Thil.

Explanations
Holy Kural #760
ಒಳ್ಳೆಯ ಮಾರ್ಗದಲ್ಲಿ ವೃದ್ಧಿಯಾಗುವಂತೆ ಹಣವನ್ನು ಕೂಡಿಸಿಟ್ಟವರಿಗೆ ಊಳಿದ ಎರೆಡು ವಸ್ತುಗಳಾದ ಸದ್ಗುಣ ಮತ್ತು
ಸಂತೋಷಗಳು ಏಕಕಾಲದಲ್ಲಿ ನೆನೆದಾಗ ಬರುವುವು.

Tamil Transliteration
Onporul Kaazhppa Iyatriyaarkku Enporul
Enai Irantum Orungu.

Explanations
🡱