ಸ್ಥಲ ಪರಿಜ್ಞಾನ

Verses

Holy Kural #491
(ಶತ್ರುವನ್ನು) ಮುತ್ತುವುದಕ್ಕೆ ತಕ್ಕ ಸ್ಥಳವನ್ನು ಕಂಡುಕೊಳ್ಳದೆ (ಅರಸನಾದವನು) ಅವನಿಗೆ ಎದುರಾಗಿ ಯಾವ ಕಾರ್ಯದಲ್ಲೂ ತೊಡಗಬಾರದು; ಹಗೆಯನ್ನು ನಿಂದಿಸಲೂ ಬಾರದು.

Tamil Transliteration
Thotangarka Evvinaiyum Ellarka Mutrum
Itanganta Pinal Ladhu.

Explanations
Holy Kural #492
ಯುದ್ದಕುಶಲಿಗಳಾದ ಶಕ್ತಿವಂತರಿಗೂ, ಭದ್ರವಾದ ಕೋಟೆಯ ರಕ್ಷಣೆಯಿದ್ದರೆ, ಅದರಿಂದುಂಟಾಗುವ ಲಾಭಗಳು ಹಲವು.

Tamil Transliteration
Muranserndha Moimpi Navarkkum Aranserndhaam
Aakkam Palavun Tharum.

Explanations
Holy Kural #493
ತಕ್ಕ ಸ್ಥಳವನ್ನು ನೋಡಿ, ತಮ್ಮನ್ನು ಕಾದುಕೊಂಡು ಹಗೆಗಳನ್ನು ಎದುರಿಸಿ ಹೋರಾಡಿದರೆ, ಶಕ್ತಿ ಇಲ್ಲದವರೂ ಶಕ್ತಿವಂತರಾಗಿ ಗೆಲ್ಲುವರು.

Tamil Transliteration
Aatraarum Aatri Atupa Itanarindhu
Potraarkan Potrich Cheyin.

Explanations
Holy Kural #494
ತಕ್ಕ ಸ್ಥಳವನ್ನು ಅರಿತು (ಹಗೆಗಳನ್ನು) ಸಮೀಪಿಸಿ ಹೋರಾಡುವವರಾದರೆ, ಅವರನ್ನು ಗೆಲ್ಲಲು ಬಗೆದು ಬಂದ ಹಗೆಗಳೂ ತಮ್ಮ ಆಲೋಚನೆಯನ್ನು ಕೈಬಿಡುವರು.

Tamil Transliteration
Enniyaar Ennam Izhappar Itanarindhu
Thunniyaar Thunnich Cheyin.

Explanations
Holy Kural #495
ಆಳವಾದ ಹೊನಲಿನಲ್ಲಿ (ನೀರಲ್ಲಿ) ಇತರ ಪ್ರಾಣಿಗಳನ್ನು ಗೆಲ್ಲುವ ಮೊಸಳಿ ಆ ಹೊನಲಿನಿಂದ ತಪ್ಪಿ ಹೊರಬಂದರೆ, ಅದನ್ನು ಇತರ ಪ್ರಾಣಿಗಳು ಗೆದ್ದುಬಿಡುತ್ತವೆ.

Tamil Transliteration
Netumpunalul Vellum Mudhalai Atumpunalin
Neengin Adhanaip Pira.

Explanations
Holy Kural #496
ಬಲವಾದ ಚಕ್ರಗಳುಳ್ಳ ದೊಡ್ಡ ತೇರು ಕಡಲಿನಲ್ಲಿ ಓಡಲು ಸಾಧ್ಯವಿಲ್ಲ; ಕಡಲಿನಲ್ಲಿ ಓಡುವ ನಾವೆಗಳೂ ನೆಲದಲ್ಲಿ ಓಡಲು ಸಾಧ್ಯವಿಲ್ಲ.

Tamil Transliteration
Katalotaa Kaalval Netundher Katalotum
Naavaayum Otaa Nilaththu.

Explanations
Holy Kural #497
ದೋಷವಿಲ್ಲದೆ, ಆಲೋಚಿಸಿ, ತಕ್ಕ ಸ್ಥಳದಲ್ಲಿ ಮಾಡಬೇಕಾದ ಕೆಲಸವನ್ನು ಕೈಕೊಂಡರೆ. ಧೈರ್ಯವೊಂದಲ್ಲದೆ ಬೇರೆ ಸಾಧನದ ಅಗತ್ಯವಿಲ್ಲ.

Tamil Transliteration
Anjaamai Allaal Thunaiventaa Enjaamai
Enni Itaththaal Seyin.

Explanations
Holy Kural #498
ಕಿರಿದಾದ ಪಡೆ ನಿಲ್ಲಬೇಕಾದ ಎಡೆಯಲ್ಲಿ ಹಿರಿದಾದ ಪಡೆ ಆಕ್ರಮಿಸಿದರೆ, ಆ ಪಡೆಯ ಬಲ ನಾಶವಾಗುತ್ತದೆ.

Tamil Transliteration
Sirupataiyaan Sellitam Serin Urupataiyaan
Ookkam Azhindhu Vitum.

Explanations
Holy Kural #499
ಹಗೆಗಳಿಗೆ ಕೋಟೆ ಮೊದಲಾದ ರಕ್ಷಣೆ, ಸೇನಾಬಲಗಳು ಇಲ್ಲವಾದರೂ ಅವರ ಸ್ವಂತ ನೆಲದಲ್ಲಿ ಹೊಕ್ಕು ಅವರೊಂದಿಗೆ ಹೋರಾಡುವುದು ಅಸಾಧ್ಯ

Tamil Transliteration
Sirainalanum Seerum Ilareninum Maandhar
Urainilaththotu Ottal Aridhu.

Explanations
Holy Kural #500
ವೀರಯೋಧನಂತಿರುವ ಧೈರ್ಯಶಾಲಿಯಾದ ಆನೆ ಕೂಡ ಕಾಲು ಹುಗಿಯುವ ಕೆಸರು ಮಣ್ಣಿನಲ್ಲಿ ಸಿಕ್ಕಿಬಿದ್ದಾಗ, ನರಿಗಳು ಅದನ್ನು ಕೊಂದುಬಿಡುತ್ತದೆ.

Tamil Transliteration
Kaalaazh Kalaril Nariyatum Kannanjaa
Velaal Mukaththa Kaliru.

Explanations
🡱