ಸ್ವಗತ ಸಂಭಾಷಣೆ

Verses

Holy Kural #1241
ಓ ಮನಸ್ಸೇ, ಈ ಸಹಿಸಲಾರದ ವಿರಹ ಯಾತನೆಯನ್ನು ಪರಿಹರಿಸುವ ಮದ್ದೊಂದನ್ನು ನೀನು ಆಲೋಚಿಸಿ ಹೇಳಲಾರೆಯಾ?

Tamil Transliteration
Ninaiththondru Sollaayo Nenje Enaiththondrum
Evvanoi Theerkkum Marundhu.

Explanations
Holy Kural #1242
ಓ ನನ್ನ ಮನಸ್ಸೇ ನೀನು ಬಾಳು! ಅವರು ಪ್ರೀತಿತಿಲ್ಲದವರಾಗಿರುವಾಗ ನೀನು ಮಾತ್ರ ಅವರಿಗಾಗಿ ವ್ಯಥೆ ಪಡುತ್ತಿರುವುದು
ನಿನ್ನ ಮೂರ್ಖತನವಲ್ಲವೆ!

Tamil Transliteration
Kaadhal Avarilar Aakanee Novadhu
Pedhaimai Vaazhiyen Nenju.

Explanations
Holy Kural #1243
ಓ ಮನಸ್ಸೇ, ನನ್ನೊಡನಿದ್ದು ನೀನು ಅವರನ್ನು ನೆನೆದು ದುಃಖಿಸುವುದೇಕೆ ಈ ದಾರುಣವಾದ ಯಾತನೆಯನ್ನುಂಟು
ಮಾಡಿದ ಅವರಲ್ಲಿ (ಸ್ವಲ್ಪ ಮಾತ್ರವೂ) ಪ್ರೇಮ ಸ್ಮರಣೆ ಇಲ್ಲವಲ್ಲ!

Tamil Transliteration
Irundhulli Enparidhal Nenje Parindhullal
Paidhalnoi Seydhaarkan Il.

Explanations
Holy Kural #1244
ಓ ಮನಸ್ಸೇ! ನೀನು ಅವರ ಬಳಿ ಸಾರುವಾಗ ನನ್ನ ಕಣ್ಣುಗಳನ್ನೂ ಕರೆದುಕೊಂಡು ಹೋಗು! ಅವರನ್ನು ಕಾಣಬೇಕೆಂಬ ತವಕದಿಂದ
ಇವು ನನ್ನನ್ನು ಹಿಡಿದು ತಿನ್ನುತ್ತಿವೆ.

Tamil Transliteration
Kannum Kolachcheri Nenje Ivaiyennaith
Thinnum Avarkkaanal Utru.

Explanations
Holy Kural #1245
ಓ ಮನಸ್ಸೇ! ನಾವು ಪ್ರೀತಿ ತೋರಿದರೂ, ನಮ್ಮನ್ನು ಪ್ರೀತಿಸದ ಅವರು ನಿರ್ದಯರೆಂದು ಅವರನ್ನು ಕೈಬಿಡಲು ಸಾಧ್ಯವೆ?

Tamil Transliteration
Setraar Enakkai Vitalunto Nenjeyaam
Utraal Uraaa Thavar.

Explanations
Holy Kural #1246
ಓ ಮನಸ್ಸೆ! ಹಿಂದೆ ನೀನು ಕಾಮಾತುರತೆಯಿಂದ ಕೂಡಿ ರಮಿಸಲು ಬಂದ ಇನಿಯನನ್ನು ಕಂಡಾಗಲೆಲ್ಲ ಹುಸಿ ಮುನಿಸಿನಿಂದ
ದೂರ ಸರಿಯುತ್ತದ್ದೆ! ಈಗ ಆಗಲಿಕೆಯಲ್ಲೂ ಅದೇ ಹುಸಿ ಮುನಿಸನ್ನು ಪ್ರಕಟಿಸುತ್ತಿರುವೆಯಲ್ಲ!

Tamil Transliteration
Kalandhunarththum Kaadhalark Kantaar Pulandhunaraai
Poikkaaivu Kaaidhien Nenju.

Explanations
Holy Kural #1247
ಓ ಮೃದು ಮನಸ್ಸೇ, ಅವರ ಮೇಲಿನ ಮೋಹವನ್ನು ತೊರೆದುಬಿಡು; ಇಲ್ಲವೇ ನಾಚಿಕೆಯನ್ನು ಬಿಟ್ಟುಬಿಡು, ಇವೆರಡನ್ನೂ
ಒಟ್ಟಿಗೇ ಸಹಿಸಿಕೊಳ್ಳೂವ ಶಕ್ತಿ ನನ್ನಲ್ಲಿ ಇಲ್ಲವಾಗಿದೆ.

Tamil Transliteration
Kaamam Vituondro Naanvitu Nannenje
Yaano Poreniv Virantu.

Explanations
Holy Kural #1248
ಮನಸ್ಸೇ! ವಿರಹದಲ್ಲಿ ತೊಳಲಿದ ನಮ್ಮನ್ನು ಇನಿಯನು ಬಂದು ಕರುಣೆ ತೋರಿ ರಮಿಸಲಿಲ್ಲವೆಂದು ಕೊರಗುವ ನೀನು,
ದೂರವಾದ ಅವರ ಹಿಂದೆಯೇ ಸಾರುತ್ತಿರುವೆಯಲ್ಲ! ನೀನೊಂದು ಪೆದ್ದು!

Tamil Transliteration
Parindhavar Nalkaarendru Engip Pirindhavar
Pinselvaai Pedhaien Nenju.

Explanations
Holy Kural #1249
ಮನಸ್ಸೇ! ಇನಿಯನು ನಿನ್ನಲ್ಲಿಯೇ ನೆಲಸಿರುವಾಗ, ಅವರನ್ನು ನೆನೆದು ನೀನು ಯಾರ ಬಳಿಗೆ ಸಾರುತ್ತಿರುವೆ?

Tamil Transliteration
Ullaththaar Kaadha Lavaraal Ullinee
Yaaruzhaich Cheriyen Nenju.

Explanations
Holy Kural #1250
ನಮ್ಮೊಡನೆ ಕೂಡಿರಲಾರದೆ ತೊರೆದು ಹೋದ ಪ್ರಿಯತಮನನ್ನು ಅಂತರಂಗದಲ್ಲಿ ಅಡಗಿಸಿಟ್ಟುಕೊಂಡುದರಿಂದ, ಈ
ಮೊದಲು ಕಳಿದುಕೊಂಡ ಅಂಗಲಾವಣ್ಯದೊಂದಿಗೆ, ಮನನಲ್ಲಿವೂ ನಾಶವಾಗುತ್ತಿದೆ.

Tamil Transliteration
Thunnaath Thurandhaarai Nenjaththu Utaiyemaa
Innum Izhaththum Kavin.

Explanations
🡱