ಸ್ವೇಚ್ಛಾ ಸ್ತ್ರೀಯರು (ವೇಶ್ಯೆಯರು)

Verses

Holy Kural #911
ಪ್ರೀತಿಯನ್ನು ಬಯಸದೆ (ಕೇವಲ) ಹಣವನ್ನು ಬಯಸುವ ಚೆಲುವ ಸ್ತ್ರೀಯರ (ವೇಶ್ಯೆಯರ) ಇನಿದಾದ ಮಾತುಗಳು ಒಬ್ಬನಿಗೆ
ದುಃಖವನ್ನು ತರುತ್ತವೆ.

Tamil Transliteration
Anpin Vizhaiyaar Porulvizhaiyum Aaidhotiyaar
Insol Izhukkuth Tharum.

Explanations
Holy Kural #912
ಲಾಭವನ್ನು ತೂಗಿ ನೋಡಿ ಅದಕ್ಕೆ ತಕ್ಕಂತೆ ನಯವಾದ ಮಾತುಗಳನ್ನಾಡುವ ಗುಣವುಳ್ಳ ಸ್ತ್ರೀಯರ ವರ್ತನೆಯನು ತೂಗಿ ನೋಡಿ,
ಅವರ ಪ್ರೀತಿಯನ್ನು ಅಲಕ್ಷಿಸ ಬೇಕು.

Tamil Transliteration
Payandhookkip Panpuraikkum Panpin Makalir
Nayandhookki Nallaa Vital.

Explanations
Holy Kural #913
ಹಣವನ್ನೇ ಗುರಿಯಾಗುಳ್ಳ ವೇಶ್ಯಾ ಸ್ತ್ರೀಯರ ಹುಸಿ ಆಲಿಂಗನವು ಕತ್ತಲೆ ಕೋಣೆಯಲ್ಲಿ ಅಪರಿಚಿತ ಹೆಣವೊಂದನ್ನು ತಬ್ಬಿಕೊಂಡಂತೆ.

Tamil Transliteration
Porutpentir Poimmai Muyakkam Iruttaraiyil
Edhil Pinandhazheei Atru.

Explanations
Holy Kural #914
ದೈವ ಕೃಪೆಯ ಸಿರಿಯನ್ನು ಅರಸುವ ವಿಚಾರವಂತರು, ಹಣವನ್ನೇ ಮುಖ್ಯವಾಗಿ ಬಯಸುವ ವೇಶ್ಯೆಯರು ಕೂಡುವ ಕೀಳು ಸುಖವನ್ನು
ಆಶಿಸುವುದಿಲ್ಲ.

Tamil Transliteration
Porutporulaar Punnalan Thoyaar Arutporul
Aayum Arivi Navar.

Explanations
Holy Kural #915
ಬುದ್ಧಿ ಸಾಮರ್ಥ್ಯದಿಂದ ಶ್ರೇಷ್ಠ ಅರಿವುಳ್ಳವರಾರೂ ಹಣದಾಸೆಗೆ ಎಲ್ಲರಿಗೂ ಪ್ರೀತಿ ತೋರುವ ವೇಶ್ಯೆಯರ ಅಳಿಯೊಲಿವಿಗೆ
ದಾಸರಾಗುವುದಿಲ್ಲ.

Tamil Transliteration
Podhunalaththaar Punnalam Thoyaar Madhinalaththin
Maanta Arivi Navar.

Explanations
Holy Kural #916
ಆತ್ಮೋನ್ನತಿಯನ್ನು ಅರಸುವವರು, ತಮ್ಮ ಚೆಲುವಿನಿಂದ ಮರುಳುಗೊಳಿಸಿ ಕೀಳು ಸುಖ ನೀಡುವ ವೇಶ್ಯೆಯರ ತೋಳ ಅಪ್ಪುಗೆಯಲ್ಲಿ
ಸೇರುವುದಿಲ್ಲ.

Tamil Transliteration
Thannalam Paarippaar Thoyaar Thakaiserukkip
Punnalam Paarippaar Thol.

Explanations
Holy Kural #917
ಅನಂಭವದಿಂದ ಶ್ರಿಮಂತವಾದ ಮನಸ್ಸು, ಇಲ್ಲದವರು, ತಮ್ಮ ಮನಸ್ಸಿನಲ್ಲಿ ಇತರ ವಸ್ತುಗಳನ್ನು ಬಯಸಿ ಕೂಡಲೆಳಸುವ ವೇಶ್ಯೆಯರ
ತೋಳ್ತೆಕ್ಕೆಯಲ್ಲಿ ಸೆರೆಯಾಗುವರು.

Tamil Transliteration
Nirainenjam Illavar Thoivaar Piranenjir
Penip Punarpavar Thol.

Explanations
Holy Kural #918
ವಿಚಾರ ಮಾಡಿ ನೋಡುವ ಶಕ್ತಿಯಿಲ್ಲದವರಿಗೆ, ಮಾಯಾಂಗನೆಯರ (ವೇಶ್ಯೆಯರ) ಅಪ್ಪುಗೆಯು, ಮೋಹಿನಿ ಹಿಡಿದ ಹಾಗೆ ಎಂದು
ಬಲ್ಲವರು ಹೇಳುವರು.

Tamil Transliteration
Aayum Arivinar Allaarkku Anangenpa
Maaya Makalir Muyakku.

Explanations
Holy Kural #919
ದೊಡ್ಡವರು, ಅಲ್ಪರು ಎನ್ನದೆ ಬೆಲೆಕೊಟ್ಟು ಕೊಳ್ಳುವ ಯಾರನ್ನೂ ಅಪ್ಪುವ ಲಜ್ಜೆಗೆಟ್ಟ ವೇಶ್ಯಾಂಗನೆಯರ ಮೆದುದೋಳು, ಹಿರಿಮೆಯಿಲ್ಲದೆ
ಕೀಳು ಜನರು ಬೀಳುವ ಸರಕದಂತೆ.

Tamil Transliteration
Varaivilaa Maanizhaiyaar Mendhol Puraiyilaap
Pooriyarkal Aazhum Alaru.

Explanations
Holy Kural #920
ಇಬ್ಬಗೆಯ ಮನಸ್ಸುಳ್ಳ ವೇಶ್ಯಾಂಗನೆಯರು, ಕಳ್ಳು ಮತ್ತು ಜೂಜು ಇವು ಮೂರೂ ಸಿರಿಯಳಿದ ದರಿದ್ರರ ಒಡನಾಡೀಗಳು.

Tamil Transliteration
920 Irumanap Pentirum Kallum Kavarum
Thiruneekkap Pattaar Thotarpu.

Explanations
🡱