ಹಿರಿಮೆ

Verses

Holy Kural #971
ಒಬ್ಬನ ಬಾಳಿನಲ್ಲಿ ಬೆಳಕೆಂದರೆ ಅವನಲ್ಲಿರುವ ಶಕ್ತಿಯೇ; ಒಬನ ಬಾಳಿನಲ್ಲಿ ಕತ್ತಲೆಂದರೆ, ಅದು ಇಲ್ಲದೆಯೇ ಬಾಳಬಹುದು ಎಂಬ
ಅವನ ಎಣಿಕೆ.

Tamil Transliteration
Olioruvarku Ulla Verukkai Ilioruvarku
Aqdhirandhu Vaazhdhum Enal.

Explanations
Holy Kural #972
ಎಲ್ಲಾ ಜೀವಿಗಳಿಗೂ ಹುಟ್ಟು ಒಂದೇ ರೀತಿಯದು; ಆದರೆ, ಅವರವರು ಮಾಡುವ ಕೆಲಸಗಳು ಬೇರೆಬೇರೆಯಾಗಿರುವುದರಿಂದ,
ಕೀರ್ತಿ ಪ್ರತಿಷ್ಠೆಗಳು ಭಿನ್ನವಾಗಿರುತ್ತದೆ.

Tamil Transliteration
Pirappokkum Ellaa Uyirkkum Sirappovvaa
Seydhozhil Vetrumai Yaan.

Explanations
Holy Kural #973
ಮೇಲಾದ ಸ್ಥಿತಿಯಲ್ಲಿದ್ದರೂ ಕೂಡ, ಮೇಲಾದ ಗುಣವಿಲ್ಲದವರು ಮೇಲು ವರ್ಗದವರೆನಿಸಿಕೊಳ್ಳಲಾರರು; ಅದೇ ರೀತಿ, ಕೀಳು
ಸ್ಥಿತಿಯಲ್ಲಿದ್ದರೂ ಕೂಡ ಕೀಳಾದ ಗುಣ ಹೊಂದದವರು ಕೀಳು ವರ್ಗದವರೆಂದು ಎನಿಸಿಕೊಳ್ಳಲಾರರು.

Tamil Transliteration
Melirundhum Melallaar Melallar Keezhirundhum
Keezhallaar Keezhal Lavar.

Explanations
Holy Kural #974
ಏಕ ನಿಷ್ಠೆಯುಳ್ಳ ಹೆಂಗಸರಂತೆಯೇ ಹಿರಿಮೆಯೂ ಕೂಡ, ತನ್ನನ್ನು ತಾನು ಕಾಪಾಡಿಕೊಂಡು ನಡೆದುಕೊಂಡರೆ ಮಾತ್ರ ಉಂಟು.

Tamil Transliteration
Orumai Makalire Polap Perumaiyum
Thannaiththaan Kontozhukin Untu.

Explanations
Holy Kural #975
ಹಿರಿಮೆಯು ಗುಣವುಳ್ಳವರು, ಕಷ್ಟ ಕಾಲದಲ್ಲಿಯೂ ಮಾಡೂವುದಕ್ಕೆ ಅಸಾಧ್ಯವಾದ ಕೆಲಸಗಳನ್ನು, ತಕ್ಕ ರೀತಿಯಲ್ಲಿ ಮಾಡಿ
ಮುಗಿಸಬಲ್ಲವರಾಗುತ್ತಾರೆ.

Tamil Transliteration
Perumai Yutaiyavar Aatruvaar Aatrin
Arumai Utaiya Seyal.

Explanations
Holy Kural #976
ಹಿರಿಯರ ಹಾದಿಯಲ್ಲಿ ನಡೆದು, ಅವರ ಗುಣಗಳನ್ನು ನಾವೂ ಪಡೆದುಕೊಳ್ಳಬೇಕು ಎನ್ನುವ ದೃಷ್ಟಿ ಅಲ್ಪರ ಮನಸ್ಸಿನಲ್ಲಿ ಬರುವುದಿಲ್ಲ.

Tamil Transliteration
Siriyaar Unarchchiyul Illai Periyaaraip
Penikkol Vemennum Nokku.

Explanations
Holy Kural #977
ಕುಲ, ಸಂಪದ, ಶಿಕ್ಷಣ ಮೊದಲಾದ ಹಿರಿಮೆಯು ಕೀಳಾದವರ ಕೈಯಲ್ಲಿ ಸಿಕ್ಕಿಕೊಂಡರೆ, ದುರಹಂಕಾರವನ್ನು ವೃದ್ಧಿಪಡಿಸುತ್ತದೆ.

Tamil Transliteration
Irappe Purindha Thozhitraam Sirappundhaan
Seeral Lavarkan Patin.

Explanations
Holy Kural #978
ಯಾವಾಗಲೂ ತಗ್ಗಿ ನಡೆಯುವುದೇ ಹಿರಿಯ ಗುಣ; ತಮ್ಮ ಪ್ರತಿಷ್ಠೆಯನ್ನು ಮರೆಸಿ ಕೊಂಡಾಡುವುದು ಕೀಳುಗುಣ.

Tamil Transliteration
Paniyumaam Endrum Perumai Sirumai
Aniyumaam Thannai Viyandhu.

Explanations
Holy Kural #979
ಹಿರಿಮೆಯ ಗುಣವೆಂದರೆ ಅಹಂಕಾರವಿಲ್ಲದೆ ಬಾಳುವುದು; ಕೀಳ್ತನವೆಂದರೆ ಅಹಂಕಾರವು ಬೇರೂರಿ ನಿಲ್ಲುವುದು.

Tamil Transliteration
Perumai Perumidham Inmai Sirumai
Perumidham Oorndhu Vital.

Explanations
Holy Kural #980
ಹಿರಿಮೆಯ ಗುಣವು ಇತರರ ಗುಣದೋಷಗಳನ್ನು ಮರೆಯುವುದು; ಕೀಳುತನವಾದರೋ ಇತರರ ಗುಣದೋಷಗಳನ್ನೇ ಎತ್ತಿ
ಆಡುವುದು.

Tamil Transliteration
Atram Maraikkum Perumai Sirumaidhaan
Kutrame Koori Vitum.

Explanations
🡱