ಹಿರಿಯರ ಆಶ್ರೆಯ

Verses

Holy Kural #441
ಅರಸನಾದವನು ಧರ್ಮವನ್ನು ಅರಿತವನಾಗಿ, ಪಕ್ವವಾದ ಅರಿವುಳ್ಲವರ ಗೆಳೆತನವನ್ನು ವಿಚಾರಮಾಡಿ ಸಂಪಾದಿಸಿಕೊಳ್ಳಬೇಕು.

Tamil Transliteration
Aranarindhu Mooththa Arivutaiyaar Kenmai
Thiranarindhu Therndhu Kolal.

Explanations
Holy Kural #442
ಬಂದ ಸಂಕಟಗಳನ್ನು ಪರಿಹರಿಸಿಕೊಂಡು, ಅವು ಮತ್ತೆ ಬಾರದಂತೆ ಮುಂದಾಗಿ ತಮ್ಮನ್ನು ಕಾದುಕೊಳ್ಳುವ ಗುಣವುಳ್ಳ ಜನರನ್ನು ಅರಸನು, ಆರೈಸಿ ಗೆಳೆತನ ಮಾಡಬೇಕು.

Tamil Transliteration
Utranoi Neekki Uraaamai Murkaakkum
Petriyaarp Penik Kolal.

Explanations
Holy Kural #443
ಬಲ್ಲವರಾದ ಹಿರಿಯರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವುದು, (ಅರಸನಿಗೆ) ಅಸಾಧ್ಯವಾದ ಕಾರ್ಯಗಳಲ್ಲೆಲ್ಲ ಅತಿ ಕಠಿಣವಾದುದು.

Tamil Transliteration
Ariyavatru Lellaam Aridhe Periyaaraip
Penith Thamaraak Kolal.

Explanations
Holy Kural #444
ತಮಗಿಂತ ಅರಿವಿನಲ್ಲಿ ಹಿರಿಯರಾದವರನ್ನು ತಮ್ಮವರನ್ನಾಗಿ ನಡೆಸಿಕೊಳ್ಳುವುದು, ಕಠಿಣವಾದ ಕಾರ್ಯಗಳಲ್ಲೆಲ್ಲ ಮೇಲಾದ ಕಾರ್ಯವೆನಿಸುವುದು.

Tamil Transliteration
Thammir Periyaar Thamaraa Ozhukudhal
Vanmaiyu Lellaan Thalai.

Explanations
Holy Kural #445
ಸೂಕ್ಷ್ಮ ಬುದ್ದಿಯುಳ್ಳವರನ್ನು ಲೋಕವು ಕಣ್ಣಾಗಿ ನಡೆಸಿಕೊಳ್ಳುವುದರಿಂದ, ಅಂಥವರನ್ನು ಅರಸನು, ಸೂಕ್ಷ್ಮವಾಗಿ ಗ್ರಹಿಸಿ, (ತನ್ನ ಮಂತ್ರಾಲೋಚನೆಯಲ್ಲಿ) ಸ್ವೀಕರಿಸಬೇಕು.

Tamil Transliteration
Soozhvaarkan Naaka Ozhukalaan Mannavan
Soozhvaaraik Soozhndhu Kolal.

Explanations
Holy Kural #446
ತಕ್ಕವರಾದ ಹಿರಿಯರ, ಒಡನಾಟದಲ್ಲಿ ನಡೆದುಕೊಳ್ಳುವ ಅರಸನಿಗೆ ಅವನ ಹಗೆಗಳಿಂದ ಯಾವ ಕೇಡೂ ಉಂಟಾಗುವುದಿಲ್ಲ.

Tamil Transliteration
Thakkaa Rinaththanaaith Thaanozhuka Vallaanaich
Chetraar Seyakkitandha Thil.

Explanations
Holy Kural #447
ಕಂಡಿತವಾದಿಗಳಾದ ಜ್ಞಾನಿಗಳ ಸ್ನೇಹವನ್ನು ಕೊಂಡು ಆಳುವ ಅರಸನನ್ನು ನಾಶಪಡಿಸುವ ಎದೆಗಾರಿಕೆ ಯಾರಿಗಿದೆ?

Tamil Transliteration
Itikkun Thunaiyaarai Yaalvarai Yaare
Ketukkun Thakaimai Yavar.

Explanations
Holy Kural #448
ಕಂಡಿತವಾದಿಗಳಾದ ಜ್ಞಾನಿಗಳ ಬೆಂಬಲವಿಲ್ಲದೆ, ಸ್ವೇಚ್ಛೆಯಾಗಿ ಆಳುವ ಅರಸನು, ನಾಶಪಡಿಸುವ ಹಗೆಗಳಿಲ್ಲದೆಯೂ, ಕೆಡುತ್ತಾನೆ.

Tamil Transliteration
Itippaarai Illaadha Emaraa Mannan
Ketuppaa Rilaanung Ketum.

Explanations
Holy Kural #449
ಬಂಡವಾಳವಿಲ್ಲದವರಿಗೆ ಲಾಭವೂ ಇಲ್ಲ; ಆಶ್ರಿತರಾದ ಜ್ಞಾನಿಗಳ ನೆರವಿಲ್ಲದರಸನಿಗೆ ನೆಲೆಯೂ ಇಲ್ಲ.

Tamil Transliteration
Mudhalilaarkku Oodhiya Millai Madhalaiyaanjjch
Aarpilaark Killai Nilai.

Explanations
Holy Kural #450
ಒಳ್ಳೆಯವರಾದ ಜ್ಞಾನಿಗಳ ಸಂಬಂಧವನ್ನು ಕಡಿದುಕೊಳ್ಳುವುದು, ಹಲವಾರು ಮುಂದಿಯ ಹಗೆಯನ್ನು ಕೊಳ್ಲುವುದಕ್ಕಿಂತ ಹತ್ತುಪಾಲು ಕೆಟ್ಟುದು.

Tamil Transliteration
Pallaar Pakai Kolalir Paththatuththa Theemaiththe
Nallaar Thotarkai Vital.

Explanations
🡱